ಸಾಲಬಾಧೆಗೆ ಗಂಡ ಹೆಂಡತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಗಂಡನ ಸಾವು

0
19

ಕಲಬುರಗಿ: ಸಾಲದ ಬಾಧೆಗೆ ಗಂಡ ಹೆಂಡತಿಯ ನಡುವೆ ಕಲಹ ಉಂಟಾಗಿ ಗಂಡ ಹೆಂಡತಿ ಇಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಪರಿಣಾಮ ಗಂಡ ಪ್ರಾಣ ಕಳೆದುಕೊಂಡ ಘಟನೆ ತಾಲೂಕಿನ ಶಿರನೂರ ಗ್ರಾಮದಲ್ಲಿ ನಡೆದಿದೆ.

ಬಸವರಾಜ ಅಚ್ಚಕೇರಿ (32) ಮನೆಯಲ್ಲಿಯೇ ವಿಷ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ ಗಂಡನಾಗಿದ್ದಾನೆ. ಜಗಳದಲ್ಲಿ ವೇಳೆಯಲ್ಲಿ ಗೀತಾ ಬಸವರಾಜ ಅಚ್ಚಕೇರಿ (29) ಎಂಬ ಮಹಿಳೆಯೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದರು. ಈ ವೇಳೆ ಕುಟುಂಬಸ್ಥರು ಆಕೆಯನ್ನು ಜೀಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ದಾಖಲಿಸಿದರು.

Contact Your\'s Advertisement; 9902492681

ಹೆಂಡತಿಯ ಪರಿಸ್ಥಿತಿ ಅರಿತ ಗಂಡ ಬಸವರಾಜ್ ಮನೆಯಲ್ಲೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಅತೀಯಾದ ಮಳೆಯಿಂದ ಬೆಳೆ ಹಾನಿಯಾಗಿ 5 ಲಕ್ಷ ಸಾಲ ಮಾಡಿಕೊಂಡಿದ್ದ ಪರಿಣಾಮ ಗಂಡ ಹೆಂಡತಿಯ ನಡುವೆ ಗಲಾಟೆ ವಿಕೋಪಕ್ಕೆ ತಿರುಗಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಈ ಕುರಿತು ಫರತಾಬಾದ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here