ಕಲಬುರಗಿ: ಇಂದು ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ. ಹೆಣ್ಣು ಮಕ್ಕಳ ಸುರಕ್ಷತೆ ಮತ್ತು ಶಿಕ್ಷಣದ ಬಗ್ಗೆ ಅರಿವು ಬೆಳೆಸುವ ನಿಟ್ಟಿನಲ್ಲಿ ಮುಂದೆ ಸಾಗುವ ಸಂಕಲ್ಪ ಮಾಡುವ ಮಹತ್ವದ ದಿನವಿದು. ಹೆಣ್ಣು ಮಕ್ಕಳಿಗೆ ಆರೋಗ್ಯಕರ ಮತ್ತು ಸುರಕ್ಷಿತ ಮಾತಾವರಣ ನಿರ್ಮಾಣ ಮಾಡಲು ಅನೇಕ ಕಾರ್ಯಕ್ರಮಗಳನ್ನು ಸರಕಾರ ಅಯೋಜಿಸುತ್ತಿದೆ.
ಸಮಾಜದ ಜನರ ಮಧ್ಯೆ ಹೆಣ್ಣು ಮಕ್ಕಳ ಜೀವನ ಮಟ್ಟವನ್ನು ಉತ್ತಮಪಡಿಸಲು ಇದನ್ನು ಆಚರಣೆ ಮಾಡಲಾಗುತ್ತಿದೆ. ಸಮಾಜದಲ್ಲಿ ಹೆಣ್ಣು ಮಕ್ಕಳ ಹಕ್ಕುಗಳ ಅಗತ್ಯತೆ ಬಗ್ಗೆ ಜಾಗೃತಿ ಮೂಡಿಸುವುದು ಎಲ್ಲರ ಕರ್ತವ್ಯವಾಗಿದೆ.
ಸೋಮವಾರ ನಗರದ ಆಳಂದ ರಸ್ತೆಯ ಕೆ.ಎಚ್.ಬಿ ಗ್ರೀನ್ ಪಾರ್ಕ ಬಡಾವಣೆಯಲ್ಲಿ ವಿಶ್ವ ಹೆಣ್ಣು ಮಕ್ಕಳ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಐಶ್ವರ್ಯ ಸಾವಳಗಿ, ಸುದಿಕ್ಷಾ ಹೆಳವರ, ಸಮನ್ವಿತಾ ಬುಜ್ಜಿ, ಆಶ್ಚರ್ಯ ಸರಡಗಿ, ಶ್ರೀನಿದಿ ವಾಡಿ, ಅನೆನ್ಯ ಶೆಟ್ಟಿ, ಅಮೃತಾ ಶೆಟ್ಟಿ, ಸಾನ್ವಿ ಕುಲಕರ್ಣಿ ಹಾಗೂ ಬಡಾವಣೆಯ ಇನ್ನಿತರ ಹೆಣ್ಣು ಮಕ್ಕಳು ಭಾಗವಹಿಸಿದ್ದರು.