ಸರ್ಕಾರದ ನಿಯಮಗಳನ್ನು ಪಾಲನೆ ಮಾಡಿ ಈದ್-ಮಿಲಾದ್ ಆಚರಣೆ: ಸಿಪಿಐ ಕೃಷ್ಣಪ್ಪ ಕಲ್ಲದೇವರ್

0
78

ಚಿತ್ತಾಪುರ:ಸರ್ಕಾರ ಕೋವಿಡ್ ಮಾರ್ಗಸೂಚಿಯನ್ನು ಅನುಸರಿಸಿ ನಿಯಮಗಳನ್ನು ಪಾಲನೆ ಮಾಡಿ ಈ ವರ್ಷದ ಈದ್-ಮಿಲಾದ್ ಆಚರಣೆ ಮಾಡಿ ಎಂದು ಸಿಪಿಐ ಕೃಷ್ಣಪ್ಪ ಕಲ್ಲದೇವರ್ ಹೇಳಿದ್ದಾರೆ.

ಪಟ್ಟಣ ಪೊಲೀಸ್ ಠಾಣೆಯಲ್ಲಿ ಸೋಮವಾರ ನಡೆದ ಈದ್ ಮಿಲಾದ್ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು ಚಿತ್ತಾಪುರ ಶಾಂತಿ ಸೌಹಾರ್ದತೆಗೆ ಹೆಸರಾದ ತಾಲ್ಲೂಕು ಆಗಿದ್ದೆ.ಕೋವಿಡ್ ಸಾಂಕ್ರಾಮಿಕ ರೋಗ ದೇಶವನ್ನು ತಲ್ಲಣಗೊಳಿಸಿದ ಇದರ ನಿಯಂತ್ರಣ ಮಾಡಲು ಸರ್ಕಾರ ನಿಯಮಗಳನ್ನು ರೂಪಿಸಿದೆ ಅದನ್ನು ಅನುಸರಿಸಿ ಈ ವರ್ಷದ ಈದ್-ಮಿಲಾದ್ ಹಬ್ಬವನ್ನು ಮುಸ್ಲಿಂ ಭಾಂದವರು ಆಚರಣೆ ಮಾಡಬೇಕು ಎಂದು ಹೇಳಿದರು.

Contact Your\'s Advertisement; 9902492681

ಪಿಎಸ್ಐ ಮಂಜುನಾಥರೆಡ್ಡಿ ಮಾತನಾಡಿ ಹಬ್ಬವನ್ನು ಶಾಂತಿಯುತವಾಗಿ ಆಚರಣೆ ಮಾಡಬೇಕು.ಯಾವುದೇ ಸೌಂಡ್ ಸಿಸ್ಟಮ್,ಡಿ.ಜೆ ಗಳಿಗೆ ಅವಕಾಶವಿಲ್ಲ. ಜನ ಜಾಸ್ತಿ ಸೇರಿದಂತೆ ಕೋವಿಡ್ ನಿಯಮಗಳನ್ನು ಅನುಸರಿಸಿ ಈದ್ ಆಚರಣೆ ಮಾಡಬೇಕು. ಮಸೀದಿಗಳಲ್ಲಿ 60 ವರ್ಷದ ಮೇಲ್ಪಟ್ಟವರಿಗೆ ಹಾಗೂ 10 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶ ನಿರ್ಬಂಧವಿದ್ದು,ಪ್ರತಿಯೊಬ್ಬರೂ ಕೋವಿಡ್ ಮಾರ್ಗಸೂಚಿಯನ್ನು ಪಾಲನೆ ಮಾಡಿ ಶಾಂತಿಯುತವಾಗಿ ಈದ್ ಮಿಲಾದ್ ಆಚರಣೆ ಮಾಡಿ ಎಂದು ಹೇಳಿದರು.

ಪುರಸಭೆ ಅಧ್ಯಕ್ಷ ಚಂದ್ರಶೇಖರ ಕಾಶಿ ಮಾತನಾಡಿ ಚಿತ್ತಾಪುರ ಶಾಂತಿಯ ತವರುರಾಗಿದೆ.ಇಲ್ಲಿ ಯಾವುದೇ ತರನಾದ ಅಹಿತಕರ ಘಟನೆಗಳು ನಡೆಯುದಿಲ್ಲ.ತಾಲೂಕಿನ ಜನರು ಪ್ರಜ್ಞಾವಂತರು.ಕಾನೂನಿನ ಮೇಲೆ ಅಪಾರ ಗೌರವಹೊಂದಿದವರು ಸರ್ಕಾರ ಸೂಚಿಸಿರುವ ಮಾರ್ಗಸೂಚಿಯನ್ನು ಪಾಲನೆ ಮಾಡಿ ಈದ್ ಹಬ್ಬವನ್ನು ಆಚರಿಸುತ್ತಾರೆ ಎಂದು ಹೇಳಿದರು.

ಈ ಶಾಂತಿ ಸಭೆಯಲ್ಲಿ ಪುರಸಭೆ ಸದಸ್ಯರಾದ ನಾಗರಾಜ ಭಂಕಲಗಿ, ಗೋವಿಂದ ನಾಯಕ್,ಶ್ರೀನಿವಾಸರೆಡ್ಡಿ ಪಾಲಪ್,ಮಲ್ಲಿಕಾರ್ಜುನ ಕಾಳಗಿ,ಮನೋಜಕುಮಾರ ರಾಠೋಡ ಮುಖಂಡರಾದ ನಾಗರೆಡ್ಡಿ ಗೋಪಸೇನ್,ಇಕ್ಬಾಲ್,ಎ.ಎಂ.ರಶೀದ್,ಜಾಫರ್ ಸೇಠ್,ಈರಪ್ಪಾ ಭೋವಿ,ಸುರೇಶ್ ಪೂಜಾರಿ,ಅಶ್ವಥರಾಮ್ ರಾಠೋಡ, ಬಾಲಾಜಿ ಬುರ್ ಬರೆ,ಜಗದೀಶ ಚೌಹಾಣ್,ಎಂಡಿ ಯೂನಿಸ್,ಅಲೀಮ್ ಸೇಠ್ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಮಹೇಶರೆಡ್ಡಿ, ಮಲ್ಲಿಕಾರ್ಜುನ ಸೇರಿದಂತೆ ಅನೇಕರು ಇದ್ದರು. ಶಾಂತಿ ಸಭೆಯನ್ನು ಪೊಲೀಸ್ ಸಿಬ್ಬಂದಿ ಜಗದೀಶ್ ನಿರೂಪಿಸಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here