ಪ್ರಥಾಮಿಕ ವರದಿಯಲ್ಲಿ ಭೂಕಂಪದ ಕಾರಣ ಪತ್ತೆ: ಸಚಿವ ಆರ್ ಅಶೋಕ

0
22

ಕಲಬುರಗಿ: ಚಿಂಚೋಳಿ, ಸೇಡಂ ಹಾಗೂ ಕಾಳಗಿ ತಾಲ್ಲೂಕುಗಳಲ್ಲಿ ಸತತ ಭೂಕಂಪ ಸಂಭವಿಸುತ್ತಿರುವ ಕುರಿತು ಪ್ರಥಾಮಿಕ ವರದಿಯ ಬಂದಿದ್ದು, ಈ ವರದಿ ಆಧರಿಸಿ ಇನ್ನೂ ಒಂದು ತಿಂಗಳು ವಿಜ್ಞಾನಿಗಳು ತಪಾಸಣೆ ನಡೆಸಲಿದ್ದಾರೆ ಎಂದು ಕಂದಾಯ ಸಚಿವರಾದ ಆರ್. ಅಶೋಕ ತಿಳಿಸಿದರು.

ಅವರು ಇಂದು ಚಿಂಚೋಳಿ ತಾಲ್ಲೂಕಿನ ಗಡಿಕೇಶ್ವರ ಗ್ರಾಮಕ್ಕೆ ಭೇಟಿ ನೀಡ ಸ್ಥತಿಗತಿ ಪರೀಕ್ಷಿಸಿ ವಿಜ್ಞಾನಿಗಳಿಂದ ಮಾಹಿತಿ ಪಡೆದು ಮಾತನಾಡಿ ಭೂಮಿಯ ಒಳಗೆ ಸುಣ್ಣದ ಕಣಗಳು ಇದ್ದು ಎರಡು ಮೂರು ವರ್ಷಗಳಿಂದ ಮಳೆ ಹೆಚ್ಚಾಗಿರುವುದರಿಂದ ಭೂಮಿಯಲ್ಲಿ ನೈಸರ್ಗಿಕ ಕ್ರಿಯೆ ಉಂಟಾಗಿ ಭೂಕಂಪನದ ಅನುಭವ ಮತ್ತು ದೊಡ್ಡ ಶಬ್ದ ಕೇಳಿಬರುತ್ತಿರುತಿದೆ. ಇಂತಹ ಘಟನೆಗಳು ಹಲವು ಭಾಗಗಳಲ್ಲಿ ಸಂಭಿಸುತ್ತಿದೆ ಎಂದು ಭೂ ವಿಜ್ಞಾನಿಗಳು ಪ್ರಥಾಮಿಕ ವರದಿ ನೀಡಿದ್ದಾರೆ ಎಂದು ತಿಳಿಸಿದರು.

Contact Your\'s Advertisement; 9902492681

ಇನ್ನೂ ಒಂದು ತಿಂಗಳು ಭೂ ವಿಜ್ಞಾನಿಗಳು ಪರೀಕ್ಷೆ ನಡೆಸಿ, ಭೂಕಂಪನಕ್ಕೆ ಪ್ರಮುಖ ಕಾರಣ ಪತ್ತೆಹಚ್ಚಲಾಗುವುದು, ಗ್ರಾಮಸ್ಥರು ಭಯ ಮತ್ತು ಆತಂಕ ಪಡುವ ಅಗತ್ಯವಿಲ್ಲ. ಯಾವುದೇ ರೀತಿ ದೊಡ್ಡ ಅನಾಹುತ ಸಂಭವಿಸುವ ಲಕ್ಷಣಗಳು ಇಲ್ಲ ಎಂದು ಭೂ ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದು, ಜನರು ಮತ್ತು ಸರಕಾರ ಯಾವುದಕ್ಕೂ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಕಲಬುರಗಿ ಲೋಕಸಭಾ ಸದಸ್ಯರಾದ ಡಾ. ಉಮೇಶ್ ಜಾಧವ್, ಶಾಸಕ ಡಾ. ಅವಿನಾಶ್ ಜಾಧವ್, ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರು, ವಿಧಾನ ಪರಿಷತ್ ಸದಸ್ಯರಾದ ಬಿಜಿ ಪಾಟೀಲ್, ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here