‘ಬೆಳಕು ಮೂಡಿದಾಗ’ ಮತ್ತು ‘ಆಧುನಿಕ ವಚನಗಳು’ ಕೃತಿಗಳ ಜನಾರ್ಪಣೆ, ೨೨ ರಂದು

0
254

ಕಲಬುರಗಿ: ಕಲೆ. ಸಾಹಿತ್ಯ, ಸಂಸ್ಕೃತಿ, ಕಾಯಕ, ದಾಸೋಹ ಹೀಗೆ ಅನೇಕ ಜನೋಪಯೋಗಿ ಕಾರ್ಯಗಳ ಮೂಲಕ ಈ ಭಾಗದಲ್ಲಿ ವಿಶೇಷ ಛಾಪು ಮೂಡಿಸಿರುವ ಜಾವಳಿ ಪಾಟೀಲ ಮನೆತನದ ಹಿರಿಯ ಲೇಖಕಿ ಶಕುಂತಲಾ ಪಾಟೀಲ ಜಾವಳಿ ಅವರ ವಿರಚಿತ ‘ಬೆಳಕು ಮೂಡಿದಾಗ’ ಮತ್ತು ‘ಆಧುನಿಕ ವಚನಗಳು’ ಎಂಬ ಮಹತ್ವದ ಎರಡು ಕೃತಿಗಳ ಜನಾರ್ಪಣೆ ಸಮಾರಂಭವನ್ನು ಅ.೨೨ ರಂದು ಬೆಳಗ್ಗೆ ೧೦.೪೫ ಕ್ಕೆ ನಗರದ ಕನ್ನಡ ಭವನದ ಸುವರ್ಣ ಸಭಾ ಭವನದಲ್ಲಿ ಆಯೋಜಿಸಲಾಗಿದೆ ಎಂದು ಕಾರ್ಯಕ್ರಮ ಆಯೋಜಕ ಯಶ್ವಂತರಾಯ ಗರಡಶೆಟ್ಟಿ ತಿಳಿಸಿದ್ದಾರೆ.

ಹಾರಕೂಡ ಸಂಸ್ಥಾನ ಹಿರೇಮಠದ ಶ್ರೀ ಡಾ.ಚನ್ನವೀರ ಶಿವಾಚಾರ್ಯರು ಹಾಗೂ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಮಾತೋಶ್ರೀ ದಾಕ್ಷಾಯಣಿ ಡಾ.ಶರಣಬಸವಪ್ಪ ಅಪ್ಪಾ ಅವರ ದಿವ್ಯ ಸಾನಿಧ್ಯದಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಾ.ಬಸವರಾಜ ಪಾಟೀಲ ಸೇಡಂ ಕೃತಿಗಳು ಜನಾರ್ಪಣೆ ಮಾಡಲಿದ್ದಾರೆ.

Contact Your\'s Advertisement; 9902492681

ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಅಧ್ಯಕ್ಷತೆ ವಹಿಸಲಿದ್ದು, ‘ಬೆಳಕು ಮೂಡಿದಾಗ’ ಕೃತಿ ಕುರಿತು ಗೋದುತಾಯಿ ದೊಡ್ಡಪ್ಪ ಅಪ್ಪ ಮಹಿಳಾ ಪದವಿ ಕಾಲೇಜಿನ ಪ್ರಿನ್ಸಿಪಾಲ್ ಡಾ.ನೀಲಾಂಬಿಕಾ ಪೊಲೀಸ್ ಪಾಟೀಲ ಮತ್ತು ‘ಆಧುನಿಕ ವಚನಗಳು’ ಕೃತಿ ಕುರಿತು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ.ಮಹಾದೇವಿ ಹೆಬ್ಬಾಳ ಅವರು ಮಾತನಾಡಲಿದ್ದಾರೆ.

ಹಿರಿಯ ಶರಣ ಸೇವಕ ಶರಣಬಸಪ್ಪ ಪಾಟೀಲ ಜಾವಳಿ, ಜಿಲ್ಲಾ ಕಸಾಪ ಅಧ್ಯಕ್ಷ ಸ್ಥಾನದ ಅಭ್ಯರ್ಥಿ-ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ವೇದಿಕೆ ಮೇಲೆ ಉಪಸ್ಥಿತರಿರುವರು. ಹಿರಿಯ ಸಂಗೀತ ಕಲಾವಿದೆ ಛಾಯಾ ಭರತನೂರ ಹಾಗೂ ತಂಡದವರಿಂದ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿವಿಧ ಕ್ಷೇತ್ರದ ಅನೇಕ ಸಾಧಕರನ್ನು ಇದೇ ಸಂದರ್ಭದಲ್ಲಿ ವಿಶೇಷವಾಗಿ ಗೌರವಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here