ಬ್ರಿಟಿಷರ ವಿರುದ್ಧ ಹೋರಾಡಿ ಶೌರ್ಯ ಮೆರೆದ ಸ್ತ್ರೀರತ್ನ ಕಿತ್ತೂರು ರಾಣಿ ಚೆನ್ನಮ್ಮ

0
20

ಶಹಾಬಾದ: ದೇಶ, ಭಾಷೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಕನ್ನಡ ಭಾಷೆಗಾಗಿ ಹೋರಾಟ ಮಾಡಿದ ವೀರ ಕಿತ್ತೂರಿನ ರಾಣಿ ಚೆನ್ನಮ್ಮನ ಆಶಯದಂತೆ ನಾಡಿನ ಜನರು ಯಾರಿಗೂ ತಲೆ ಬಾಗದೇ ಕನ್ನಡ ಭಾಷೆಯನ್ನು ಗೌರವಿಸಬೇಕೆಂದು ಶಿಕ್ಷಕಿ ಅಂಜನಾ ಸಿದ್ದೇಶ್ವರ ವಸ್ತ್ರದ್ ಹೇಳಿದರು.

ಅವರು ಶನಿವಾರ ನಗರದ ಶರಣಬಸವೇಶ್ವರ ದೇವಾಲಯದಲ್ಲಿ ವೀರಶೈವ ಸಮಾಜದ ಮಹಿಳಾ ಘಟಕದ ವತಿಯಿಂದ ಆಯೋಜಿಸಲಾದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

Contact Your\'s Advertisement; 9902492681

ಬ್ರಿಟಿಷರ ವಿರುದ್ಧ ಹೋರಾಡಿ ಶೌರ್ಯ ಮೆರೆದ ಸ್ತ್ರೀರತ್ನ ಕಿತ್ತೂರು ರಾಣಿ ಚೆನ್ನಮ್ಮ ಅವರಿಗೆ ಯಾವುದೇ ಜಾತಿಗೆ ಸಿಮೀತವಾಗಿಲ್ಲ. ಕರ್ನಾಟಕದಲ್ಲಿ ಹುಟ್ಟಿ ಬೆಳೆದು ಬ್ರಿಟಿಷರ ವಿರುದ್ಧ ಏಕಾಂಗಿಯಾಗಿ ಹೋರಾಡಿದ ಮಹಿಳೆ.ಜಾತಿ, ಮನೆತನಕ್ಕಾಗಿ ಹೋರಾಟ ಮಾಡದೇ ಜನತೆಯ ರಕ್ಷಣೆಗಾಗಿ, ಸ್ವಾತಂತ್ರ್ಯಕ್ಕಾಗಿ ಪಣತೊಟ್ಟು ಹೋರಾಟ ನಡೆಸಿದವಳು.

ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ಮಹಿಳೆಯರು ನಿರಂತರವಾಗಿ ನಮಗೆ ಸ್ಪೂರ್ತಿಯಾಗಿರಬೇಕು.ಅವರನ್ನು ಯಾವುದೇ ಜಾತಿಗೆ ಅಂಟಿಸಬಾರದು.ಎಲ್ಲರೂ ಒಂದೇ ಜಾತಿ.ಅದು ಮನುಷ್ಯ ಜಾತಿ.ಮಣ್ಣು ತಿಂದು ಹಣ್ಣು ಕೊಡುವ ಮರಗಳಿಗೆ ಯಾವ ಜಾತಿಯೂ ಇಲ್ಲ.ಅದನ್ನು ನೋಡಿಯಾದರೂ ಕಲಿಯಬೇಕು ಎಂದು ಹೇಳಿದರು.

ವೀರಶೈವ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿಬಾಯಿ ರಾವೂರ, ಕಾರ್ಯದರ್ಶಿ ಉಮಾದೇವಿ ದಂಡೋತಿ ಸೇರಿದಂತೆ ಮಹಿಳಾ ಘಟಕದ ಪದಾಧಿಕಾರಿಗಳು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here