ಶಹಾಬಾದ: ದೇಶದ ಆರ್ಥಿಕ ಬೆಳವಣಿಗೆಗೆ ಸಹಕಾರ ಸಂಘಗಳೇ ಭದ್ರ ಬುನಾದಿಯಾಗಿದೆ ಎಂದು ಸಹÀಕಾರಿ ದುರೀಣರಾದ ಗುರುನಾಥ ಪೂಜಾರಿ ಹೇಳಿದರು.
ಅವರು ಶನಿವಾರ ನಗರದ ಶಹಾಬಾದ ಪತ್ತಿನ ಸಹಕಾರ ಸಂಘದ 12ನೇ ವಾರ್ಷಿಕ ಮಹಾಸಭೆಯ ನಿಮಿತ್ತ ಆಯೋಜಿಸಲಾದ ಕಾರ್ಯಕ್ರಮದ ಉದ್ಘಾಟಕರಾಗಿ ಮಾತನಾಡಿದರು.
ಆರ್ಥಿಕವಾಗಿ ಹಿಂದುಳಿದವರಿಗೆ ಸಹಕಾರ ಸಂಘಗಳು ಸಾಲವನ್ನು ನೀಡಿ ಅವರ ಬದುಕಿಗೆ ಸಂಜೀವಿನಿಯಾಗಿ ಕೆಲಸ ಮಾಡುತ್ತಿವೆ. ಒಂದು ಸಹಕಾರಿ ಸಂಘಗಳು ಆರ್ಥಿಕ ಅಭಿವೃದ್ಧಿಯನ್ನು sಸಾಧಿಸಬೇಕಾದರೆ ಸಂಘದ ನಿರ್ಧೇಶಕರು ಹಾಗೂ ಸಿಬ್ಬಂದಿ ವರ್ಗದ ಪ್ರಾಮಾಣಿಕ ದುಡಿಮೆ ಹಾಗೂ ಪಾರದರ್ಶಕ ಆಡಳಿತ ನಡೆಸುವುದು ಅಷ್ಟೇ ಅವಶ್ಯಕ. ಇಂದು ಎಷ್ಟೋ ಬ್ಯಾಂಕುಗಳು ಹುಟ್ಟಿವೆ.ಅಷ್ಟೇ ನೆಲಕಚ್ಚಿ ಹೋಗಿವೆ.ಅದಕ್ಕೆ ಮೂಲ ಕಾರಣವೆಂದರೆ ನಿರ್ದೇಶಕರ ಭೀನ್ನಾಭಿಪ್ರಾಯಗಳೇ ಕಾರಣ. ಮತ್ತೊಂದರಿಂದಲ್ಲ. ಪ್ರಾಮಾಣಿಕತೆ ಮತ್ತು ಕ್ರೀಯಾಶೀಲತೆಯಿಂದ ಕೆಲಸ ಮಾಡುವ ಮೂಲಕ ಸಂಘದ ಅಭಿವೃದ್ಧಿಗೆ ಮುಂದಾಗಿ ಎಂದು ಹೇಳಿದರು.
ಕರ್ನಾಟಕ ಗ್ರಾಮೀಣ ಬ್ಯಾಂಕಿನ ವ್ಯವಸ್ಥಾಪಕರಾದ ಕುಮಾರಿ ರಾಜರಶ್ಮಿ ಸುಕ್ರುತ್‍ರಾಜ, ಕೊರೊನಾದಂತಹ ಸಂಕಷ್ಟದ ಸಮಯದಲ್ಲೂ ಇಲ್ಲಿನ ಸಹಕಾರಿ ಬ್ಯಾಂಕ್ ಸಾಲ ನೀಡಿ, ಸ್ವಾವಲಂಬಿಯಾಗಿ ಬದುಕಲು ನೆರವು ನೀಡುತ್ತಿರುವುದು ಶ್ಲಾಘನೀಯವಾದುದು ಎಂದರು.
ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಸಹಕಾರ ಅಭಿವೃದ್ಧಿ ಅಧಿಕಾರಿ ರವೀಂದ್ರ, ಇಲ್ಲಿನ ಬ್ಯಾಂಕ್ ಸುಮಾರು 6 ಕೋಟಿ ವಹಿವಾಟು ಮಾಡುತ್ತಿರುವುದು ನೋಡಿದರೇ, ಮುಂದೆ ಹೆಮ್ಮರವಾಗಿ ಬೆಳೆಯಲಿದೆ.ಅಲ್ಲದೇ ಸಾಲ ಪಡೆದ ಮೇಲೆ ಅದನ್ನು ತೀರಿಸುವುದು ಗ್ರಾಹಕನ ಮುಖ್ಯ ಕರ್ತವ್ಯ. ಗ್ರಾಹಕರ ಸಹಕಾರದಿಂದಲೇ ಸಹಕಾರಿ ಬ್ಯಾಂಕಗಳು ಅಭಿವೃದ್ಧಿಯನ್ನು ಸಾಧಿಸುತ್ತವೆ ಎಂದರು.
ವಾಡಿ-ಶಹಾಬಾದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕನಕಪ್ಪ.ಆರ್.ದಂಡಗುಲಕರ್ ಹಾಗೂ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶರಣು ವಸ್ತ್ರದ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಹಕಾರ ಸಂಘದ ಉಪಾಧ್ಯಕ್ಷ ಲೋಹಿತ್ ಕಟ್ಟಿ ಪ್ರಾಸ್ತಾವಿಕ ನುಡಿದರು. ಶರಣು ವಸ್ತ್ರದ್ ಸದಾನಂದ ಕುಂಬಾರ ನಿರೂಪಿಸಿದರು, ಶರಣಬಸಪ್ಪ ತುಂಗಳ ಸ್ವಾಗತಿಸಿದರು, ಸುನಂದಾ ನಾಗಣ್ಣ ಪಾಟೀಲ ವಂದಿಸಿದರು.
ಸÀಂಘದ ಆಡಳಿತ ಮಂಡಳಿ ಸದಸ್ಯರಾದ ನಿಂಗಣ್ಣ ಹುಳಗೋಳಕರ್, ಶಿವಾನಂದ ಪಾಟೀಲ, ಸಂಗೀತಾ ಶರಣಪ್ಪ ಜೋಗೂರ, ಶ್ರೀಧರ ಜೋಷಿ, ನಾರಾಯಣರೆಡ್ಡಿ ದಂಡಗುಲಕರ್, ಜಗದೀಶ ಪಾಟೀಲ, ಕಾರ್ಯನಿರ್ವಾಹಕ ವ್ಯವಸ್ಥಾಪಕ ಸುರೇಶ ಬಡಿಗೇರ್,ಶಾಂತರೆಡ್ಡಿ ದಂಡಗುಲಕರ್,ದೇವೆಂದ್ರಪ್ಪ ಯಲಗೋಡಕರ್,ರಾಜೇಶ ಯನಗುಂಟಿಕರ್ ಸೇರಿದಂತೆ ನೂರಾರು ಷೇರು ಹೂಡಿಕೆದಾರರು ಪಾಲ್ಗೊಂಡಿದ್ದರು.