ಸುರಪುರ: ತಾಲೂಕಿನ ದೇವತ್ಕಲ್ ಗ್ರಾಮದಲ್ಲಿನ ರೈತರು ಬೆಳೆದ ದಾಳಿಂಬೆ ಬೆಳೆಗೆ ವಿಚಿತ್ರ ರೋಗ ಕಾಣಿಸಿಕೊಂಡಿದ್ದು,ಇದರಿಂದ ರೈತರು ಕಂಗಾಲಾಗಿದ್ದಾರೆ.ಗ್ರಾಮದ ರೈತ ಹಣಮಂತ್ರಾಯ ತೋಟದ ಎನ್ನುವವರು ತಮ್ಮ ನಾಲ್ಕು ಎಕರೆ ಜಮೀನಲ್ಲಿ ಬೆಳೆದ ದಾಳಿಂಬೆ ರೋಗಕ್ಕೆ ದುಂಡಾಣು ಅಂಗಮಾರಿ ರೋಗ ಕಾಣಿಸಿಕೊಂಡಿದ್ದು,ಫಸಲು ಹಾಳಾಗುತ್ತಿದ್ದು ರೈತ ಕಣ್ಣೀರು ಹಾಕುವಂತಾಗಿದೆ.
ನಾಲ್ಕು ಎಕರೆ ದಾಳಿಂಬೆ ಬೆಳಗೆ ನಾಲ್ಕು ವರ್ಷದಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿ ದಾಳಿಂಬೆ ಬೆಳೆದಿರುವೆ,ಮೊದಲನೆ ಫಸಲು ಅಲ್ಪಸ್ವಲ್ಪ ಕೈಗೆ ಬಂದಿದೆ.ಆದರೆ ಈಗ ಎರಡನೇ ಬಾರಿಯ ಫಸಲು ಕಾಯಿಬಿಟ್ಟಿದ್ದು ಇನ್ನೇನು ಹಣ್ಣು ಕೈಗೆ ಬರಲಿದೆ ಎನ್ನುವಾಗ ದುಂಡಾಣು ಅಂಗಮಾರಿ ರೋಗದಿಂದ ಗಿಡದಲ್ಲಿನ ಎಲ್ಲಾ ದಾಳಿಂಬೆ ಹಣ್ಣು ನೆಲಕ್ಕೆ ಉದುರಿ ಬೀಳುತ್ತಿದೆ.
ಒಂದೆಡೆ ಸಾಲಬಾಧೆ ಮತ್ತೊಂದೆಡೆ ರೋಗ ಬಾಧೆ ಇದರಿಂದ ತಲೆ ಮೇಲೆ ಕೈಹೊತ್ತು ಕೂಡುವಂತ ಪರಸ್ಥಿತಿ ನಿರ್ಮಾಣವಾಗಿದೆ.ಸಾಲ ತೀರಿಸಲು ಏನು ಮಾಡುವುದೆಂದು ತಿಳಿಯುತ್ತಿಲ್ಲ ಎಂದು ರೈತ ಕಣ್ಣೀರು ಹಾಕುತ್ತಿದ್ದಾನೆ.ರೋಗದಿಂದ ಬೇಸತ್ತು ಎಲ್ಲಾ ದಾಳಿಂಬೆ ಗಿಡಗಳನ್ನು ಕಡಿದು ಹಾಕುತ್ತಿದ್ದೇವೆ ಎಂದು ಬೇಸರ ತೋಡಿಕೊಳ್ಳುತ್ತಿದ್ದಾನೆ.ಅಲ್ಲದೆ ಸರಕಾರ ನಮ್ಮ ನೆರವಿಗೆ ಬರುವಂತೆ ವಿನಂತಿಸುತ್ತಿದ್ದಾನೆ.