ಕನ್ನಡದ ಕಗ್ಗೊಲೆ: ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಕ್ರಮಕ್ಕೆ ಆಗ್ರಹ

0
71

ಕಲಬುರಗಿ: ಕನ್ನಡದ ಕಗ್ಗೊಲೆಗೈಯ್ಯುತ್ತಿರುವ ಆಂಗ್ಲ ಮಾಧ್ಯಮ ಶಾಲೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗುರುವಾರ ವೀರ ಕನ್ನಡಿಗರ ಸೇನೆಯ ಕಾರ್ಯಕರ್ತರು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ನಡೆಸಿದರು.

ರಾಜ್ಯದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಸರ್ಕಾರದ ನಿಯಮದಂತೆ ಕಡ್ಡಾಯವಾಗಿ ಕನ್ನಡ ಭಾಷೆಗೆ ಆದ್ಯತೆ ಕೊಡಬೇಕು. ಆದಾಗ್ಯೂ, ನಗರದಲ್ಲಿನ ೪೦ರಿಂದ ೫೦ ಶಾಲೆಗಳು ಕನ್ನಡಕ್ಕೆ ಆದ್ಯತೆ ಕೊಡುತ್ತಿಲ್ಲ. ಶೇಖ್ ರೋಜಾದ ದರ್ಗಾ ಪ್ರದೇಶದಲ್ಲಿರುವ ಕೆಬಿಎನ್ ಕಾಲೇಜು, ಪಿಎನ್‌ಟಿ ಕ್ವಾಟರ್ಸ್‌ನ ರಾಜಾಪೂರ್ ರಸ್ತೆಯಲ್ಲಿರುವ ಮಿಜಗುರಿಯ ನರ್ಸಿಂಗ್ ಕಾಲೇಜು, ನೌಪತುಂಗ ಬಡಾವಣೆಯ ಹತ್ತಿರದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡ ಭಾಷೆಯ ನಾಮಫಲಕಗಳಣ್ನು ಹಾಕಿಲ್ಲ ಎಂದು ಅವರು ಆರೋಪಿಸಿದರು.

Contact Your\'s Advertisement; 9902492681

ಶಾಲಾ, ಕಾಲೇಜುಗಳಲ್ಲಿ ಕನ್ನಡದಲ್ಲಿ ಸರಿಯಾಗಿ ಬೋಧಿಸುತ್ತಿಲ್ಲ. ಇದರಿಂದ ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕನ್ನಡದ ಕಗ್ಗೊಲೆಯಾಗುತ್ತಿದೆ. ಕೂಡಲೇ ಕನ್ನಡ ನಾಮಫಲಕ ಹಾಕದ ಹಾಗೂ ಸರಿಯಾಗಿ ಕನ್ನಡ ಬೋಧಿಸದ ಆಂಗ್ಲ ಮಾಧ್ಯಮ ಶಾಲೆಗಳಿಗೆ ನೋಟಿಸ್ ಜಾರಿ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಸಂಘಟನೆಯ ರಾಜ್ಯಾಧ್ಯಕ್ಷ ಅಮೃತ್ ಪಾಟೀಲ್ ಸಿರನೂರ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರವಿ ಒಂಟಿ, ಶಿವಾಜಿ ಚವ್ಹಾಣ್, ತಿಪ್ಪಣ್ಣ ಪವಾರ್, ಭರತ್‌ಭೂಷಣ್, ಕೃಷ್ಣ ಬೇಲೂರ್, ಅರುಣ್ ಆಡೆ, ರವಿ ರಾಠೋಡ್, ರಾಜು ಪೂಜಾರಿ, ಪ್ರಕಾಶ್ ಪವಾರ್, ಅನಿಲ್ ಚವ್ಹಾಣ್, ಪ್ರೇಮ್ ಅಡೆ, ಅಜಯ್ ಆಡೆ, ಶಿವಾನಂದ್ ಚಿಕ್ಕಾಣೆ, ಅರುಣಕುಮಾರ್, ಸಾಗರ್, ಮಶಾಕಸಾಬ್, ಅಲ್ಲಾಭಕ್ಷ, ಫಿರೋಜ್ ಮುಂತಾದವರು ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here