ಪ್ರೌಢಶಾಲಾ ಮಂಜೂರಿಗಾಗಿ ಎಸ್ಎಫ್ ಐ ಪ್ರತಿಭಟನೆ

0
20

ರಾಯಚೂರಿನ:  ಇಂದು ಎಸ್ಎಫ್ ಐ ನೇತೃತ್ವದಲ್ಲಿ ಮಸ್ಕಿ ತಾಲೂಕಿನ ಅಂಕುಶದೊಡ್ಡಿಯ ಗ್ರಾಪಂ ವ್ಯಾಪ್ತಿಯ ಬುದ್ದಿನ್ನಿ ಎಸ್. ಗ್ರಾಮಕ್ಕೆ ಪ್ರೌಢಶಾಲಾ ಮಂಜೂರಿಗಾಗಿ ರಾಯಚೂರಿನ ಬಸವ ಸರ್ಕಲ್‌ ನಿಂದ ಡಿಸಿ ಕಚೇರಿಯವರೆಗೂ ಪ್ರತಿಭಟನಾ ರ್ಯಾಲಿ ನಡೆಸಿ ಡಿಸಿ ಕಚೇರಿ ಮುಂದೆ ಪ್ರತಿಭಟನಾ ಧರಣಿ ನಡೆಸಲಾಯಿತು.

ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಸಹಾಯಕ ಆಯುಕ್ತ ಸಂತೋಷ ಕಾಮಗೌಡ ಮನವಿ ಸ್ವೀಕರಿಸಿ ಪ್ರೌಢ ಶಾಲೆ ಮಂಜೂರಿಗೆ ಇರುವ ತೊಡಕುಗಳನ್ನು ಸರಿಪಡಿಸಲಾಗುವುದೆಂದು ಭರವಸೆ ನೀಡಿದ ನಂತರ ಪ್ರತಿಭಟನಾ ಧರಣಿ ಕೈಬಿಡಲಾಯಿತು.

Contact Your\'s Advertisement; 9902492681

ಪ್ರತಿಭಟನೆಯಲ್ಲಿ ಎಸ್ಎಫ್ಐ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಮ್ಯಾಗಳಮನಿ, ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಜಿಲ್ಲಾ ಕಾರ್ಯದರ್ಶಿ ಲಿಂಗರಾಜ್ ಕಂದಗಲ್, ಬುದ್ದಿನ್ನಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಾಗರೆಡ್ಡೆಪ್ಪ ದೇವರಮನಿ, ಉಪಾಧ್ಯಕ್ಷ ಹನುಮಂತ ಬುದ್ದಿನ್ನಿ, ಎಸ್ ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ದೀನಸಮುದ್ರ, ಜಿಲ್ಲಾ ಸಮಿತಿ ಸದಸ್ಯರಾದ ಮೌನೇಶ ಬುಳ್ಳಾಪೂರು, ತಿಪ್ಪಣ್ಣ ನಿಲೋಗಲ್,  ಎಐಕೆಎಸ್ ನ ಚಂದ್ರಶೇಖರ ಕ್ಯಾತನಹಟ್ಟಿ, ಬಸವರಾಜ್ ಗುತ್ತೆದಾರ್, ದೇವೇಂದ್ರಪ್ಪ ಕನಸಾವಿ, ಮೌನೇಶ ದೇವರಮನಿ, ಬಾಲಪ್ಪ ಪಾಲೇದ್, ಸಂಗೀತಾ ಸೇರಿದಂತೆ ನೂರಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು  ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here