ಕಲಬುರಗಿ : ಸಂಗೀತ ಕಲೆಯು ಅತ್ಯಂತ ಪ್ರಾಚೀನ ಪರಂಪರೆಯನ್ನು ಹೊಂದಿದೆ ಅಂತಹ ಸಂಗೀತ ಕಲೆಯಿಂದ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಮಹಾನಗರ ಪಾಲಿಕೆ ಸದಸ್ಯ ಸಚಿನ ಕಡಗಂಚಿ ಹೇಳಿದರು.
ಇತ್ತೀಚೆಗೆ ಕಲಬುರಗಿ ನಗರದ ವಿಜಯನಗರ ಕಾಲೋನಿಯಲ್ಲಿ ಶ್ರೀ ಜಕಣಮ್ಮ ದೇವಿ ದೇವಸ್ಥಾನ ಆವರಣದಲ್ಲಿ ಗಡಿನಾಡ ಸಂಗೀತ ಹಾಗೂ ವಿವಿದೋದ್ದೇಶ ಸೇವಾ ಸಂಸ್ಥೆ(ರಿ) ಕಲಬುರಗಿ ಇವರ ಸಯುಂಕ್ತಾಶ್ರಯದಲ್ಲಿ ನಡೆದ ದಸರಾ ಹಬ್ಬದ ಪ್ರಯುಕ್ತ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪರವಾಗಿ ಗಡಿನಾಡ ಕಲಾ ರತ್ನ ಪ್ರಶಸ್ತಿಯನ್ನು ಶಿಕ್ಷಣ ಕ್ಷೇತ್ರದಲ್ಲಿ ಹೆಸರಾಂತ ಶಿಕ್ಷಕರು ನೀಲಕಂಠ ಪಾಟೀಲ ಹಾಗೂ ಹಿರಿಯ ಸಂಗೀತ ಕಲಾವಿದ ಮಡಿವಾಳಯ್ಯ ಹಿರೇಮಠ ಕೊರಳ್ಳಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹಾಂತಗೌಡ ಕುಲಕರ್ಣಿ ಸೋಮಶೇಖರ ಮುಲಗೆ, ಯೋಗಿ ರಾಜೇಂದ್ರ ಪಾಟೀಲ ಭಾಗವಹಿಸಿದರು ನಂತರ ಸಂಗೀತ ಕಾರ್ಯಕ್ರಮದಲ್ಲಿ ಗಾಯಕರಾದ ಬಸವರಾಜ ಶಾಸ್ತ್ರೀ ಕುಕನೂರು, ಶಿವಲಿಂಗಯ್ಯ ಪುರಾಣಿಕ ಶಿವರಾಜ ನಿರಗುಡಿ, ಲೋಕನಾಥ್ ಚಾಂಗಲೇರ ಕು.ಸಾಕ್ಷಿ ಕು.ಪ್ರಕೃತಿ, ಈರಯ್ಯ ಸ್ವಾಮಿ ಮಾಡ್ಯಾಳ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು ಎಂದು ಸಂಸ್ಥೆಯ ಅಧ್ಯಕ್ಷರಾದ ವೀರಭದ್ರಯ್ಯ ಸ್ಥಾವರಮಠ ತಿಳಿಸಿದರು