ಕಲೆಯಲ್ಲಿ ವಿಷಯ ಸಂದೇಶಕ್ಕೆ ಪ್ರಾಮುಖ್ಯತೆ ಇರಲಿ; ಬಿ.ಎಲ್.ಜಾನೆ

0
46

ಕಲಬುರಗಿ: ಕಲಾವಿದ ರಚಿಸುವ ಕಲಾಕೃತಿಗಳಲ್ಲಿ ವಿಷಯ ಮತ್ತು ಸಾಮಾಜಿಕ ಸಂದೇಶಗಳಿಗೆ ಹೆಚ್ಚಿನ ಮಹತ್ವಕೊಡಬೇಕೆಂದು ಹಿರಿಯ ಕಲಾವಿದರಾದ ಬಸವರಾಜ ಎಲ್.ಜಾನೆ ಅವರು ಸಲಹೆನೀಡಿದರು.

ಅವರು ನಗರದ ಎಸಾನ್‌ ಡಿಜೈನ್ ಸ್ಟುಡಿಯೋದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯೋಗದಲ್ಲಿ ಕಲಾವಿದ ಡಾ.ರೆಹಮಾನ್ ಪಟೇಲ್‌ ಅವರು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಏಕ ವ್ಯಕ್ತಿ ಚಿತ್ರಕಲಾಕೃತಿಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುತ್ತಾ ಸ್ಥಳೀಯ ಕಲಾವಿದರು ಇಲ್ಲಿನ ಕಲಾ ಸಂಸ್ಕೃತಿಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಸುವ ರೀತಿಯಲ್ಲಿ ತಮ್ಮ ಕಲಾಕುಂಚದ ಮೂಲಕ ಬೆಳಕಿಗೆ ತಂದಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ರಾಜ್ಯ ಸರ್ಕಾರ ಕಲಾವಿದರಿಗೆ ಧನಸಹಾಯ ನೀಡುತ್ತಿರುವುದು ಸಂತಸದ ಸಂಗತಿ. ಈ ವ್ಯವಸ್ಥೆ ಬೇರೆ ರಾಜ್ಯದಲ್ಲಿಲ್ಲ ಆದ್ದರಿಂದ ಇದರ ಸದುಪಯೋಗವನ್ನು ಕಲಾವಿದರು ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಗುಲಬರ್ಗ ವಿಶ್ವ ವಿದ್ಯಾಲಯದದೃಶ್ಯಕಲಾ ವಿಭಾಗದ ಸಂಯೋಜಕರಾದ ಪ್ರೊ. ಅಬ್ದುಲ್‌ ರಬ್‌ ಉಸ್ತಾದ್‌ ಅವರು ಮಾತನಾಡುತ್ತಾ ಕಲೆಯನ್ನು ಸಾಮಾನ್ಯ ಜನ ರಕಣ್ಣಿಗೆ ಮುಟ್ಟುವಂತೆ ಕಾಯಕವನ್ನು ನಮ್ಮಕಲಾವಿದರು ಮಾಡುತ್ತಿರುವುದು ವಿಶೇಷವಾಗಿದೆ. ಇದೇರೀತಿ ಸ್ಥಳೀಯ ಕಲಾ ಸಂಸ್ಕೃತಿಯ ಹೊಂದಿರುವ ಐತಿಹಾಸಿಕ ಹಾಗೂ ಸ್ಮಾರಕಗಳ ಮೇಲೆ ತಮ್ಮ ಕಲಾಕೃತಿಗಳನ್ನು ಕಲಾವಿದರು ರಚಿಸಲಿ ಎಂದು ಸಲಹೆ ನೀಡಿದರು.

ಇನ್ನೋರ್ವ ಹಿರಿಯಕಲಾವಿದರಾದ ಡಾ.ಎಸ್.ಎಮ್.ನೀಲಾ ಅವರು ಮಾತನಾಡುತ್ತಾ ಹಿರಿಯಕಲಾವಿದರ ಪ್ರೇರಣೆಯಿಂದ ಕಿರಿಯಕಲಾವಿದರು ಕಲಾಕೃತಿಗಳನ್ನು ರಚಿಸಬೇಕು. ಕಲಾವಿದರು ಕೇವಲ ಧನಸಹಾಯದ ಹಿಂದೆ ಬೆನ್ನು ಬೀಳದೇ ಸ್ವಂತಿಕೆಯಿಂದ ಕಲಾಕೃತಿಗಳನ್ನು ಪ್ರರ್ದಶಿಸುವ ಪ್ರಯತ್ನ ಮಾಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಕಲಾವಿದರೆ ಹಮಾನ್ ಪಟೇಲ್‌ ಅವರು ಪ್ರಾಸ್ತವಿಕವಾಗಿ ಮಾತನಾಡುತ್ತಾ ಲಾಕಡೌನ್, ಮಹಿಳೆಯರ ಮೇಲಿನ ದೌರ್ಜನ್ಯ, ನೋಟ ಬಂದಿ ಮುಂತಾದ ವಿಷಯಗಳ ಮೇಲೆ ಕಲಾಕೃತಿಗಳನ್ನು ರಚಿಸಿರುವೆ ಇದರಿಂದ ಸಾಮಾಜಿಕವಾಗಿ ಜಾಗೃತಿ ಮೂಡಿಸುವಂತಹ ಸಂಯೋಜನೆಯಲ್ಲಿ ತೊಡಗಿಸಿಕೊಂಡಿರುವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಬಸವರಾಜ್‌ ಉಪ್ಪಿನ್, ಮಹಮ್ಮದ ಆಯಾಜೋದ್ಧಿನ್ ಪಟೇಲ್, ಮಂಜುಳಾ ಜಾನೆ, ಲಕ್ಷ್ಮೀ ಪೋದ್ದಾರ್, ನೀಲಾಂಬಿಕಾ, ಅಂಬಿಕಾ, ರೇವಣಸಿದ್ಪಪ್ಪ ಹೊಟ್ಟಿ, ರಾಮಗಿರಿ ಪೋಲಿಸ್ ಪಾಟೀಲ್, ಅಶೋಕ ಚಿತ್ತಕೋಟಿ, ಚಿದಾನಂದರೂಲೆ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಡಾ.ಶಾಹೀದ್ ಪಾಷಾ ಅವರುಕಾರ್ಯಕ್ರಮವನ್ನು ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here