ಕಲಬುರಗಿ: ಆಳಂದ ಮುಖ್ಯರಸ್ತೆಯಿಂದ ಜಾಫರಾಬಾದ ಗ್ರಾಮ ಮತ್ತು ರುಕುಮ್ ತೋಲಾದರ್ಗಾಕ್ಕೆ ಹೋಗುವ ರಸ್ತೆಯ ಡಾಂಬರೀಕರಣ ಮಾಡುವಂತೆ ಕರ್ನಾಟಕ ರಕ್ಷಣಾ ವೇದಿಕೆ ಕಲಬುರಗಿ ತಾಲೂಕು ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ತಾಲೂಕಾಧ್ಯಕ್ಷ ಪುನೀತರಾಜ ಕವಡೆ, ಪೃಥ್ವಿರಾಜ ರಾಂಪುರೆ, ಆಕಾಶ ರಾಠೋಡ, ಶ್ರೀಶೈಲ ಕಣ್ಣೂರ, ನಾಗರತ್ನ ಟೆಂಗಳಿ, ಕವಿತಾ ಮಹಾಜನಮಠ, ವಾಸವಿ ಕಡಗಂಚಿ ಸೇರಿದಂತೆ ಇತರರು ಇದ್ದರು.