ಸುರಪುರ: ತಾಲೂಕಿನ ರುಕ್ಮಾಪುರ ಗ್ರಾಮದಲ್ಲಿ ಜಯಕರ್ನಾಟಕ ಸಂಘಟನೆಯ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ ಸಂಘಟನೆ ತಾಲೂಕು ಅಧ್ಯಕ್ಷ ರವಿನಾಯಕ ಬೈರಿಮಡ್ಡಿ ಮಾತನಾಡಿ,ಜಯಕರ್ನಾಟಕ ಸಂಘಟನೆ ರಾಜ್ಯದಲ್ಲಿ ತನ್ನದೆ ಆದ ಹೋರಾಟ ಮತ್ತು ಸಮಾಜಪರವಾದ ಕಾರ್ಯಗಳ ಮೂಲಕ ಜನರ ಮನಸಲ್ಲಿ ಬೇರೂರಿದ ಸಂಘಟನೆಯಾಗಿದೆ. ನಾಡು ನುಡಿ ನೆಲ ಜಲ ಭಾಷೆ ವಿಷಯ ಬಂದಾಗ ಸಂಘಟನೆ ಸಹಿಸದೆ ಸಿಡಿದೇಳಲಿದೆ ಎಂದರು.ಅಲ್ಲದೆ ಇಂದು ರುಕ್ಮಾಪುರ ಗ್ರಾಮ ಘಟಕ ರಚಿಸುವ ಮೂಲಕ ಇಲ್ಲಿರುವ ಎಲ್ಲಾ ಯುವ ಮಿತ್ರರು ಹೋರಾಟಕ್ಕೆ ಕೈಜೋಡಿಸುತ್ತಿರುವುದು ಸಂತೋಷದ ಸಂಗತಿಯಾಗಿದೆ.ಗ್ರಾಮದ ಯಾವುದೇ ಸಮಸ್ಯೆಗಳಿದ್ದಲ್ಲಿ ಜಯಕರ್ನಾಟಕ ಸಂಘಟನೆ ಹೋರಾಟ ನಡೆಸಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ತಾಲೂಕು ಪಂಚಾಯತಿ ಮಾಜಿ ಸದಸ್ಯ ಸುರೇಂದ್ರ ನಾಯಕ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.ನಂತರ ಗ್ರಾಮ ಶಾಖೆಗೆ ನೂತನ ಪದಾಧಿಕಾರಿಗಳನ್ನು ನೇಮಿಸಿ ಪದಗ್ರಹಣ ನಡೆಸಿದರು.
ಗ್ರಾಮ ಪಂಚಾಯತಿ ಅಧ್ಯಕ್ಷೆ ನೀಲಮ್ಮ ಮುದರಂಗ ಸಂಘಟನೆ ತಾಲೂಕು ಕಾರ್ಯಾಧ್ಯಕ್ಷ ಮಲ್ಲು ನಾಯಕ ಶಿಬಾರಬಂಡಿ,ಉಪಾಧ್ಯಕ್ಷ ಗೋಪಾಲ ನಾಯಕ,ಪ್ರಧಾನ ಕಾರ್ಯದರ್ಶಿ ಯಲ್ಲಪ್ಪ ನಾಯಕ ಕಬಾಡಗೇರಾ,ಕಾರ್ಯದರ್ಶಿ ಬಸವರಾಜ ಪಾಟೀಲ್ ಶಖಾಪುರ,ಸಂಚಾಲಕ ಶಿವಕುಮಾರ್ ವಗ್ಗಾ,ಜಂಟಿ ಕಾರ್ಯದರ್ಶಿ ದೇವು ನಾಯಕ,ವಕ್ತಾರಮೌನೇಶ ದಳಪತಿ,ಖಜಾಂಚಿ ರವಿ ಹೊಸಸಿದ್ದಾಪುರ,ಅರ್ಜುನ ಬೈರಿಮಡ್ಡಿ,ರಂಗನಾಥ ಶಿಬಾರಬಂಡಿ,ಗ್ರಾಮ ಪಂಚಾಯತಿ ಸದಸ್ಯರಾದ ಮೊನೊದ್ದೀನ್,ಶರಣಮ್ಮ,ವೀರಭದ್ರ,ಆನಂದ ಗೋಗಿ,ಶಾಂತಪ್ಪ ಗೌಡ,ಕರವೇ ಗ್ರಾಮ ಶಾಖೆ ಅಧ್ಯಕ್ಷ ನಿಂಗಣಗೌಡ ಮಾಲಿ ಪಾಟೀಲ್ ವೇದಿಕೆಯಲ್ಲಿದ್ದರು.