ಸುರಪುರ: ನಗರದ ರಂಗಂಪೇಟೆಯ ಮರಗಮ್ಮನ ಗುಡಿ ಅಂಗನವಾಡಿ ಕೇಂದ್ರದಲ್ಲಿ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಮಕ್ಕಳಿಗೆ ಸ್ವಾಗತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರದಲ್ಲಿ ಮುಖ್ಯ ಅತಿಥಿಗಳಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲಾಲಸಾಬ ಪೀರಾಪುರ ಭಾಗವಹಿಸಿ ಮಾತನಾಡಿ, ಇಂದಿನಿಂದ ತಾಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳು ಮಕ್ಕಳಿಗಾಗಿ ಪ್ರಾರಂಭವಾಗುತ್ತಿದ್ದು, ಪಾಲಕ ಮತ್ತು ಪೋಷಕರು ತಮ್ಮ ಮಕ್ಕಳಿಗೆ ಅಂಗನವಾಡಿ ಕೇಂದ್ರಗಳಿಗೆ ಕಳುಹಿಸಿ ಕೊಡಲು ಕೋರಿದರು, ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕಾಂಶದ ಜೊತೆಗೆ ಪೂರ್ವ ಪ್ರಾಥಮಿಕ ಶಿಕ್ಷಣ ಲಭಿಸುತ್ತದೆ, ಮಕ್ಕಳ ಆರಂಭಿಕ ಶಿಕ್ಷಣ ಉತ್ತಮವಾಗಿದ್ದರೆ ಅವರ ಮುಂದಿನ ಕಲಿಕೆ ಪ್ರಕ್ರಿಯೆಯು ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.
ಅಜೀಮ ಪ್ರೇಮಜೀ ಫೌಂಡೇಷನ ಸಂಪನ್ಮೂಲ ವ್ಯಕ್ತಿಗಳಾದ ಅನ್ವರ ಜಮಾದಾರ ಮಾತನಾಡಿ, ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅಂಗನವಾಡಿಗಳು ಪೂರಕವಾಗಿವೆ, ಇಲ್ಲಿ ಮಕ್ಕಳಿಗೆ ಆಟದ ಜೊತೆಗೆ ಪಾಠ ಹಾಗೂ ಪೌಷ್ಠಕಾಂಶಯುಕ್ತ ಆಹಾರವನ್ನು ಪೂರೈಸುವುದರಿಂದ ಮಕ್ಕಳು ಶೈಕ್ಷಣಿಕವಾಗಿ ಬೆಳೆಯುತ್ತಾರೆ ಎಂದರು.
ಕಾರ್ಯಕ್ರಮದ ಉದ್ಘಾಟನೆಯನ್ನು ನಗರಸಭೆ ಸದಸ್ಯರಾದ ನಾಸೀರ ಹುಸೇನ ಕುಂಡಾಲೆ, ಧರ್ಮರಾಜ ಮಡಿವಾಳ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಗುರು ಮುದ್ದಪ್ಪ ಅಪ್ಪಾಗೋಳ ಪದ್ಮಾ ನಾಯಕ ಅಂಗನವಾಡಿ ಮೇಲ್ವಿಚಾರಕಿ, ಸುನೀತಾ ಅಂಗನವಾಡಿ ಕಾರ್ಯಕರ್ತೆ, ಅಯ್ಯಮ್ಮ, ಖಾಜಹುಸೇನ, ಮಲ್ಲಿಕಾರ್ಜುನ, ನಿಂಗಪ್ಪ ಬಿಲಾಕಲ್, ನಾಗರಾಜ, ಅಲ್ಲಮಬೇಗಂ, ರೇಷ್ಮಾಬೇಗಂ ಭಾಗವಹಿಸಿದ್ದರು. ಜಯಶ್ರೀ ಅಂಗನವಾಡಿ ಮೇಲ್ವಿಚಾರಕಿ ನಿರೂಪಿಸಿ ವಂದಿಸಿದರು.