ಶಹಾಬಾದ: ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ತಿನ ಜಿಲ್ಲಾ ಘಟಕಕ್ಕೆ ಇದೇ ನವೆಂಬರ್ ೨೧ ರಂದು ನಡೆಯಲಿರುವ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಿಂತಿರುವ ನನಗೆ ಮತ ನೀಡುವ ಮೂಲಕ ಗೆಲ್ಲಿಸಬೇಕೆಂದು ಕಸಾಪ ಮತದಾರರಲ್ಲಿ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮನವಿ ಮಾಡಿದರು.
ಅವರು ಶುಕ್ರವಾರ ಶಹಾಬಾದ , ಭಂಕೂರ ಹಾಗೂ ಹೊನಗುಂಟಾ ಗ್ರಾಮಗಳಿಗೆ ಬೇಡಿ ನೀಡಿ, ಮತದಾರರಲ್ಲಿ ಮತ ನೀಡುವಂತೆ ಮತಯಾಚಿಸಿದರು.
ಕಳೆದ ಎರಡು ದಶಕಗಳಿಂದ ಸಾಹಿತ್ಯ, ಸಾಂಸ್ಕೃತಿಕ, ಶೈಕ್ಷಣಿಕ,ನೆಲ,ಜಲ, ಭಾಷೆ,ಗಡಿ, ಕವಿಗೋಷ್ಠಿ, ವಿಚಾರ ಸಂಕೀರ್ಣಗಳು, ಸಮ್ಮೇಳನಗಳು, ಸಾವಿರಾರು ಕಾರ್ಯಕ್ರಮಗಳು ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕಾ, ಹೋಬಳಿ, ಗ್ರಾಮ ಮಟ್ಟದಲ್ಲಿ ನಿತ್ಯ ನಿರಂತರ ಕನ್ನಡದ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿದ್ದೆನೆ. ಜಿಲ್ಲೆಯ ಉದಯೋನ್ಮುಖ ಸಾಹಿತಿಗಳು, ಲೇಖಕರು ಹಾಗೂ ಕಲಾವಿದರಿಗೆ ಗೌರವ ಸನ್ಮಾನ ಮಾಡುವದರ ಮೂಲಕ ಪ್ರೋತ್ಸಾಹಿಸಲಾಗಿದೆ.
ಸಾಹಿತ್ಯ ಪರಿ?ತ್ತಿನ ಚಟುವಟಿಕೆಗಳನ್ನು ಹೋಬಳಿ ಮಟ್ಟಕ್ಕೂ ವಿಸ್ತರಿಸಿ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಮಾಡಿದ ಕೆಲಸಗಳು ಸಾಕಷ್ಟಿದ್ದರೂ ಮಾಡಬೇಕಾದದು ಇನ್ನೂ ಬಹಳ? ಇದೆ ಎಂಬುದು ನನ್ನ ಅರಿವಿನಲ್ಲಿದೆ.ಈ ದಿಸೆಯಲ್ಲಿ ಕನ್ನಡ ಸಾಹಿತ್ಯ ಪರಿ?ತ್ತನ್ನು ಸಜ್ಜುಗೊಳಿಸುವ ಕಾರ್ಯದತ್ತ ನಾವು ಸಾಗಬೇಕಾಗಿದೆ. ಕನ್ನಡ ಸಾಹಿತ್ಯ ಪರಿ?ತ್ತಿನ ಗ್ರಾಮ ಘಟಕಗಳನ್ನು ಸ್ಥಾಪಿಸುವದರ ಮುಖಾಂತರ ಗ್ರಾಮೀಣ ಪ್ರದೇಶದಲ್ಲಿ ಸಾಹಿತ್ಯಕ ವಾತಾವರಣ ನಿರ್ಮಿಸುವುದು, ಯುವ ಕವಿ, ಲೇಖಕ ಹಾಗೂ ಕಲಾವಿದರನ್ನು ಪ್ರೋತ್ಸಾಹಿಸುವ ರಚನಾತ್ಮಕ ಕಾರ್ಯಕ್ರಮಗಳನ್ನು ರೂಪಿಸುವ ಹಿರಿಯಾಸೆ ನನ್ನದಾಗಿದೆ.
ಈ ಎಲ್ಲ ಕಾರಣಗಳಿಂದಾಗಿ ನಾನು ನಿಮ್ಮೆಲ್ಲರ ಮುಂದೆ ಬಂದಿದ್ದೇನೆ.ಈ ಬಾರಿ ಬೆನ್ನು ತಟ್ಟಿ ಆಶೀರ್ವದಿಸಿ, ಸಾಹಿತ್ಯ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು,. ಕನ್ನಡವನ್ನು ಕಟ್ಟುವ ನಿಟ್ಟಿನಲ್ಲಿ, ಜಿಲ್ಲೆಯಲ್ಲಿ ಸಾಹಿತ್ತಿಕ ಬೆಳವಣಿಗೆಗೆ ತಮ್ಮ ಸಲಹೆ-ಸಹಕಾರವನ್ನು ಯಾಚಿಸುತ್ತೇನೆ. ತಾವು ನನ್ನನ್ನು ಬೆಂಬಲಿಸುವ ಮೂಲಕ ಕಸಾಪ ಜಿಲ್ಲಾ ಘಟಕ್ಕೆ ಅಧ್ಯಕ್ಷನಾಗಿ ಆಯ್ಕೆಮಾಡುವಂತೆ ವಿನಂತಿಸಿಕೊಂಡರು.
ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಸುರೇಶ ಬಡಿಗೇರ್, ಸೋಮಶೇಖರ ನಂದಿಧ್ವಜ, ಸಿದ್ದು ಬಾಳಿ ಸೇರಿದಂತೆ ಅನೇಕರು ಇದ್ದರು.