ಆಳಂದ: ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ವಿಸ್ತಾರದ ಸ್ಥಳ ಪಟ್ಟಣದ ಪ್ರಸಿದ್ಧ ಸೂಫಿ-ಸಂತ ಹಜರತ್ ಲಾಡ್ಲೆ ಮಶಾಕ ದರ್ಗಾದ ಆವರಣದಲ್ಲಿ ಭಕ್ತರ ದಂಡು ತುಂಬಿತುಳಿಕಿದೆ.
ಕೋವಿಡ್ ನಿಂತ್ರಣ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಲಾಡ್ಲೆ ಮಶಾಸಕರ ಉರ್ಸ್ ನಡೆಯದೆ, ಈ ಬಾರಿ ಆಯೋಜಿಸಿದ್ದ ಉರ್ಸ್‍ನಲ್ಲಿ ಅತಿ ಹೆಚ್ಚು ಭಕ್ತಾದಿಗಳು ಪಾಲ್ಗೊಂಡು ಆಕರ್ಶೀತರಾದರು.
ದರ್ಗಾದ ಮುಂಭಾಗದ ಚಾರಮೀನಾರ ಹಾಗೂ ದರ್ಗಾ ಸೇರಿ ಗುಂಬಜಗಳಿಗೆ ಬಣ್ಣ, ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕೃತ ವರ್ಣರಂಜಿತ ಬೆಳಕು ಕಂಗೊಳಿಸಿತು.
ನ.15ರಂದು ಆರಂಭಗೊಂಡ ಉರ್ಸ್ ಎರಡು ದಿನಗಳ ಕಾಲ ಕಾರ್ಯಕ್ರಮಳು ನಡೆದರು ಸಹಿತ. ಸುಮಾರು ಒಂದುವಾರಗಳ ಕಾಲ ಜಾತ್ರೆಯ ವ್ಯಾಪಾರ ವೈಹಿವಾಟು ದೂರ ದೂರದಿಂದ ಬರುವ ಭಕ್ತಾದಿಗಳಿಂದ ದರ್ಶನ ಕಾರ್ಯ ನಡೆಯಲಿದೆ.
ಮಂಗಳವಾರ ರಾತ್ರಿ ದರ್ಗಾ ಆವರಣದಲ್ಲಿ ನಡೆದ ಖವ್ವಾಲಿ ಹಾಡು ಕೇಳಲು ಸಾವಿರಾರು ಸಂಖ್ಯೆಯಲ್ಲಿ ಜನಸ್ತೋಮ ಸೇರಿತು. ಮಧ್ಯಪ್ರದೇಶ ರಾಜ್ಯದ ಇಂದುರಿನ ಖ್ಯಾತ ಕವ್ವಾಲಿ ಕಲಾವಿದ ಅಲ್ತಾಪ ಖಾದರಿ ನೇತೃತ್ವದ ತಂಡ ಸೇರಿ ಕಲಬುರಗಿ ಮತ್ತು ಹೈದರಾಬಾದ ಖವ್ವಾಲಿ ತಂಡವು ಖವ್ವಾಲಿ ಮೂಡಿಮಾಡಿತು.
ಈ ಮೊದಲು ಕಲಬುರಗಿ ಮೌಲಾನಾ ಅಬಜ್‍ಲ ಬರ್ಕಾತಿ ಪ್ರವಚನ ಕೈಗೊಂಡರು. ದೆಹಲಿ,ಮುಂಬೈ, ಹೈದರಾಬಾದ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತಾದಿಗಳು ಲಾಡ್ಲೆ ಮಶಾಸರ ಸಮಾದಿಯ ದರ್ಶನ ಪಡೆದರು.
ದರ್ಗಾ ಆವರಣದಲ್ಲಿ ಸುಮಾರು ನೂರಕ್ಕೂ ಹೆಚ್ಚು ಅಂಗಡಿ ಮುಗ್ಗಂಟುಗಳು, ಜೋಕಾಲಿ, ರೈಲು, ಜಾದು ಪ್ರದರ್ಶನ, ಡ್ರಾಮಾ, ಮಕ್ಕಳ ದೂಣಿ ಸೇರಿದದಂತೆ ತಿಂಡಿ, ತಿನ್ನುಸುÀ, ಹೋಟೆಲ್ ಆಟಿಕೆ ಸಾಮಗ್ರಿಗಳ ಮಾರಾಟ ಮತ್ತು ಖರೀದಿ ಅಷ್ಟೇ ಜೋರಾಗಿ ನಡೆದಿದೆ.
ಕ್ರಿ.ಶ. 1360ರಲ್ಲಿ ದೆಹಲಿಯಿಂದ ದಕ್ಷಿಣ ಭಾರತಕ್ಕೆ ಬಂದ ಲಾಡ್ಲೆ ಮಶಾಸಕರು, ಕಲಬುರಗಿ ಖಾಜಾ ಬಂದೇನವಾಜ್‍ರಿಗಿಂತ ಸುಮಾರು 40 ವರ್ಷ ಮೊದಲು ಬಂದವರು. ಬಹುಮನಿಯ ದ್ವಿತೀಯ ಮೊಹ್ಮದ್ ಕಾಲದಲ್ಲಿ ಕಲಬುರಗಿಗೆ ಲಾಡ್ಲೆ ಮಶಾಸಕರು ಆಗಮನವಾಗಿದೆ.
ಬಹುಮನಿಯ ರಾಜ್ಯದ ಪ್ರಧಾನಿಮಂತ್ರಿ ಸೈಪುದ್ದೀನ್ ಘೋರಿ ಇವರ ಆಧ್ಯಾತ್ಮೀಕ ಶಿಷ್ಯರಾಗಿ ಧಾರ್ಮಿಕ ದೀಕ್ಷೆಯನ್ನು ಪಡೆದ ಸಮಾಜೋ ಧಾರ್ಮಿಕ ಕಾರ್ಯಗಳ ಮೂಲಕ ಲಕ್ಷಾಂತರ ಭಕ್ತರ ಆರಾಧ್ಯರಾಗಿರುವ ಲಾಡ್ಲೆ ಮಶಾಸಕರ ಸಮಾದಿ ಈ ದರ್ಗಾ ಐತಿಹಾಸಿಕವಾಗಿದೆ.
ಲಾಡ್ಲೆ ಮಶಾಸಕರ ಕುರಿತು ಕ್ರಿ.ಶ. 1468ರಿಂದ 1482ರ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಿದ ಮೊದಲ ರಷ್ಯಾನ ಪ್ರವಾಸಿಗ ಅಫಾನಾಸಿ ನಿಕೀತಿನ ಅವರ ಮೂರು ಸಮುದ್ರಾಗಳಾಚೆ ಪ್ರಯಾಣ ಎಂಬ ತನ್ನ ಪ್ರವಾಸಿ ಕಥನದಲ್ಲಿ ಈ ಉರ್ಸ್‍ನ ವೈಭವದ ಕುರಿತು ಉಲ್ಲೇಖಿಸಿದ್ದಾರೆ.
ಈ ಉರ್ಸ್ ಒಂದು ಹಿಂದುರಾಷ್ಟ್ರದ ಅತ್ಯಂತ ದೊಡ್ಡದಾದ ಉರ್ಸ್ ಎಂದು ಉಲ್ಲೇಖಿಸಿ ಸುಮಾರು 10 ದಿನಗಳ ಕಾಲ ಉಸ್ ನಡೆಯುತ್ತಿದೆ. ಉರ್ಸ್‍ನಲ್ಲಿ ದೇಶದ ಎಲ್ಲ ಹಲವು ಮೂಲೆಗಳಿಂದಲೂ ಆಗಮಿಸುವ ಜನರು ದರ್ಶನ ಮತ್ತು ವ್ಯಾಪಾರಕ್ಕಾಗಿ ಪಾಲ್ಗೊಳ್ಳುತ್ಥಾರೆ. ಇದರಲ್ಲಿ ಸುಮಾರು 20 ಸಾವಿರದಷ್ಟು ಗುಣಮಟ್ಟದ ಕುದರೆ ವ್ಯಾಪಾರ ನಡೆಯುತ್ತಿದ್ದು ಎಂದು ವರ್ಣಿಸಿದ್ದು ಸ್ಮರಿಸಬಹುದಾಗಿದೆ.
ಒಟ್ಟಾರೆಯಾಗಿ ಈ ಭಾಗದಲ್ಲಿ ಭಾವೈಕ್ಯತೆ ತಾಣವಾಗಿರುವ ಲಾಡ್ಲೆ ಮಶಾಕರ ಉರ್ಸ್‍ನಲ್ಲಿ ಬಹುತೇಕ ಎಲ್ಲ ಧರ್ಮೀಯರು ಪಾಲ್ಗೊಳ್ಳುವುದು ವಿಶೇಷ ಗಮನ ಸೆಳೆದಿದೆ.