ಶಹಾಬಾದ: ಐದು ಜನ ಶಿಕ್ಷಕರು ಶಾಲೆಗೆ ಚಕ್ಕರ್

0
155

ಶಹಾಬಾದ: ಇಲ್ಲಿನ ಶಾಲೆಯೊಂದರಲ್ಲಿ ಸುಮಾರು ೯ ಜನ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.ಅದರಲ್ಲಿ ಒಬ್ಬರು ರಜೆಯ ಮೇಲಿದ್ದರೇ, ಉಳಿದ ೮ ಜನ ಶಿಕ್ಷಕರು ಬೆಳಿಗ್ಗೆ ಬಂದು ಸಹಿ ಮಾಡಿ, ಮಧ್ಯಾಹ್ನದಿಂದ ಮುಖ್ಯಗುರುಗಳು ಸೇರಿದಂತೆ ಐದು ಜನ ಶಿಕ್ಷಕರು ಶಾಲೆಗೆ ಚಕ್ಕರ್ ಹೊಡೆದ ಘಟನೆ ಗುರುವಾರದಂದು ನಡೆದಿದೆ.

ಇದು ನಗರದ ಮಧ್ಯ ಭಾಗದಲ್ಲಿರುವ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಡು ಬಂದ ದೃಶ್ಯ. ನಗರಸಭೆಯ ಸದಸ್ಯ ರವಿ ರಾಠೋಡ ಅವರು ಹಠಾತನೇ ಗುರುವಾರ ಮಧ್ಯಾಹ್ನ ಶಾಲೆಗೆ ಬೇಟಿ ನೀಡಿದ ಸಂದರ್ಭದಲ್ಲಿ ಒಂಬತ್ತು ಜನ ಶಿಕ್ಷಕರಲ್ಲಿ ಕೇವಲ ಮೂರು ಜನ ಶಿಕ್ಷಕರು ಹಾಜರಿದ್ದು,ಒಬ್ಬರು ರಜೆಯ ಮೇಲಿದ್ದರು.ಅದರಲ್ಲಿ ಸುಮಾರು ೫ ಜನ ಶಿಕ್ಷಕರು ಮಧ್ಯಾಹ್ನ ಚಕ್ಕರ್ ಹೊಡೆದಿರುವುದು ಕಂಡು ಬಂದಿತು.ಅಲ್ಲದೇ ಶಿಕ್ಷಕರ ಹಾಜರಿ ಪುಸ್ತಕದಲ್ಲಿ ಎಲ್ಲರೂ ಸಹಿ ಮಾಡಿದ್ದರು.

Contact Your\'s Advertisement; 9902492681

ತಕ್ಷಣವೇ ನಗರಸಭೆಯ ಸದಸ್ಯ ರವಿ ರಾಠೋಡ ಅವರು ಸ್ಥಳದಲ್ಲಿದ್ದ ಶಿಕ್ಷಕರಿಗೆ ಮುಖ್ಯಗುರುಗಳನ್ನು ಕರೆಯಲು ತಿಳಿಸಿದರು.ಆದರೆ ಆ ಐದು ಜನ ಸಿಬ್ಬಂದಿಗಳ ಒಬ್ಬರಲ್ಲಿ ಮುಖ್ಯಗುರುಗಳು ಒಬ್ಬರು ಇದುದ್ದನ್ನು ಕಂಡು ಸಿಡಿಮಿಡಿಗೊಂಡರು. ಮುಖ್ಯಶಿಕ್ಷಕರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಮನಸ್ಸಿಗೆ ಬಂದಂತೆ ಬರುತ್ತಾರೆ ಮತ್ತು ಹೋಗುತ್ತಾರೆ ದಿನಾಲೂ ಪಾಲಕರು ನನ್ನ ಹತ್ತಿರ ದೂರು ನೀಡುತ್ತಿದ್ದಾರೆ. ಮಕ್ಕಳ ಭವಿಷ್ಯವನ್ನು ಬೆಳಗುವ ಶಿಕ್ಷಕರು ಈ ರೀತಿ ಶಾಲೆಗೆ ಚಕ್ಕರ್ ಹೊಡೆದರೇ, ಮಕ್ಕಳ ಭವಿಷ್ಯ ಏನಾಗಬಹುದು.ಎಲ್ಲಿಗೆ ಎಲ್ಲಿಗೆ ಹೋಗಿದ್ದಾರೆ ಎಂದು ಶಿಕ್ಷಕರನ್ನು ಕೇಳಿದರು. ಮನೆ ಶಾಂತಿ ಇರುವುದರಿಂದ ಸಹದ್ಯೋಗಿ ಶಿಕ್ಷಕರು ಅಲ್ಲಿಗೆ ಹೋಗಿದ್ದಾರೆ ಎಂದು ಶಿಕ್ಷಕರು ತಿಳಿಸಿದರು.

ಮುಖ್ಯ ಶಿಕ್ಷಕರಾದವರು ಶಾಲೆಯ ಬಗ್ಗೆ ಸ್ವಲ್ಪವೂ ಜವಾಬ್ದಾರಿ ಇಲ್ಲದೇ ಹೋದರೆ ಹೇಗೆ ಎಂದು ಹೇಳಿದರಲ್ಲದೇ, ಚಿತ್ತಾಪೂರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯಸ್ವಾಮಿ ರುದ್ನೂರ್ ಅವರಿಗೆ ಕರೆ ಶಾಲೆಗೆ ಮಧ್ಯಾಹ್ನ ಚಕ್ಕರ್ ಹೊಡೆದ ಬಗ್ಗೆ ಹಾಗೂ ಹಾಜರಿ ಪುಸ್ತಕದಲ್ಲಿ ಎಲ್ಲರೂ ಸಹಿ ಮಾಡಿದ್ದಾರೆ. ಒಬ್ಬರು ಮಾತ್ರ ರಜೆಯ ಮೇಲಿದ್ದಾರೆ.ಎಂಟು ಜನ ಶಿಕ್ಷಕರ ಪೈಕಿ ಚಂದ್ರಲೇಖ ಗೌನಳ್ಳಿ, ಭಾರತಿ ಸೂಗಣ್ಣ
ಈ ರೀತಿ ಚಕ್ಕರ್ ಹೊಡೆದರೇ ಮಕ್ಕಳ ಭವಿಷ್ಯವನ್ನು ಏನಾಗಬಹುದು.

ಮೊದಲೇ ಶಹಾಬಾದ ನಗರ ಕೂಲಿ ಕಾರ್ಮಿಕರ ಪ್ರದೇಶ.ಇಲ್ಲಿನ ಬಡ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವುದು ಶಿಕ್ಷಣ ಕರ್ತವ್ಯ.ಆದರೆ ಈ ರೀತಿ ಯಾರಿಗೂ ಹೇಳದೇ ಕೇಳದೇ ಚಕ್ಕರ್ ಹೊಡೆದರೇ ಹೇಗೆ ? ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದರು. ಶಿಕ್ಷಣಾಧಿಕಾರಿಗಳು ಈ ಬಗ್ಗೆ ನೋಟಿಸ್ ಜಾರಿ ಮಾಡಲಾಗುವುದೆಂದು ತಿಳಿಸಿದ್ದಾರೆ ಎಂದು ಎನ್ನಲಾಗಿದೆ.

ಚಿತ್ರ ಶೀರ್ಷಿಕೆ
೨೫ಎಸ್‌ಬಿಡಿ೧
ಶಹಾಬಾದ: ನಗರದ ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಾಜರಿ ಪುಸ್ತಕದಲ್ಲಿ ೮ ಜನರು ಶಿಕ್ಷಕರು ಸಹಿ ಮಾಡಿರುವುದು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here