ಭಾರತ ಸಂವಿಧಾನ ವಿಶ್ವ ಮಾನ್ಯವಾಗಿದೆ: ಪ್ರೊ ಅಷ್ಠಗಿ

0
57

ಕಲಬುರಗಿ: ಡಾ ಬಾಬಾಸಾಹೇಬ ಅಂಬೇಡ್ಕರ ರವರು ರಚಿಸಿದ ಭಾರತದ ಸಂವಿಧಾನವು ವಿಶ್ವ ಮಾನ್ಯವಾಗಿದ್ದು, ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದೆ ಎಂದು ಚಿಂತಕ-ಲೇಖಕ ಪ್ರೊ.ಯಶವಂತರಾಯ್ ಅಷ್ಠಗಿ ಯವರು ವಿಶ್ಲೇಷಿಸಿದರು.

ನಗರದ ವಿದ್ಯಾನಗರದ ಮೆಟ್ರಿಕ ಪೂರ್ವ ಬಾಲಕಿಯರ ನಿಲಯದಲ್ಲಿ ಕರ್ನಾಟಕ ಸಮತಾ ಸೈನಿಕ ದಳದ ವತಿಯಿಂದ ಆಯೋಜಿಸಿದ್ದ “ಭಾರತೀಯ ಸಂವಿಧಾನ ದಿನದ ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ನವ್ಹೆಂಬರ 26, 1949 ರಂದು ಭಾರತದ ಸಂವಿಧಾನ ಸಭೆಯ ಔಪಚಾರಿಕವಾಗಿ ದೇಶದ ಅತ್ಯುನ್ನತ ದಾಖಲೆಯಾದ ಸಂವಿಧಾನವನ್ನು ಅಂಗೀಕರಿಸಿತು. ಆದ್ದರಿಂದ 2015 ರಿಂದ ಪ್ರತಿ ವರ್ಷ ನವ್ಹೆಂಬರ 26 ರಂದು ಭಾರತ ಸರ್ಕಾರವು ಕಾನೂನು ದಿನದ ಬದಲಾಗಿ “ಸಂವಿಧಾನ ದಿನ”ವನ್ನಾಗಿ ಆಚರಿಸುತ್ತಿದೆ ಎಂದರು.

ರಾಷ್ಟ್ರದ ಯುವಜನತೆಗೆ ಹಾಗೂ ವಿಧ್ಯಾರ್ಥಿ/ವಿಧ್ಯಾರ್ಥಿನಿಯರಿಗೆ ಸಂವಿಧಾನದ ಮೌಲ್ಯ ಮತ್ತು ಆಶಯಗಳನ್ನು ತಿಳಿಸುವ ಕೆಲಸವಾಗಬೇಕಿದೆ. ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರು ಭಾರತದ ನಾಗರಿಕರಿಗೆ ಸಂಬಂಧಿಸಿದ ಹಕ್ಕಗಳು,ಕರ್ತವ್ಯ ಹಾಗೂ ಕಾನೂನುಗಳನ್ನು ವಿವರಿಸುವ ದಾಖಲೆಯ ಪುಸ್ತಕವಾದ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರಿಂದ ಈ ದಿನದ ಆಚರಣೆಯನ್ನು ಅವರ ಮೇರುವ್ಯಕ್ತಿತ್ವ ಮತ್ತು ಪರಂಪರೆಗೆ ಗೌರವ ಸಲ್ಲಿಸಿದಂತಾಗಿದೆ ಎಂದು ಪ್ರೊ ಅಷ್ಠಗಿ ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ದಲಿತ ಮುಖಂಡ ಹಣಮಂತ ಬೋಧನಕರ್ ಮಾತನಾಡಿ, ಸಂವಿಧಾನದ ಅವಶ್ಯಕತೆ ಮತ್ತು ಆದರ್ಶಗಳನ್ನು ನಾಗರಿಕರಿಗೆ ಮತ್ತಷ್ಟು ಪ್ರಚುರಪಡಿಸಲು ಪ್ರತಿ ವರ್ಷ ಸಂವಿಧಾನ ದಿನ ಆಚರಿಸಲು ಭಾರತೀಯರಾದ ನಮಗೆ ಹೆಮ್ಮೆ ಎನಿಸುತ್ತಿದೆ ಎಂದರು.

ಕಲಬುರಗಿ ಎಪಿಎಂಸಿ ಉಪಾಧ್ಯಕ್ಷರಾದ ರಾಜಕುಮಾರ ಕೋಟೆ, ನಂದಕುಮಾರ ತಳಕೇರಿ, ಸೀಮಾ ಮೂಲಭಾರತಿ, ಶೀಲಾ ಗಾಯಕವಾಡ, ಕಾಲೇಜು ವಸತಿ ನಿಲಯದ ಮೇಲ್ವಿಚಾರಕಿ ಸಂಗೀತಾ, ಮುಖ್ಯಅತಿಥಿಗಳಾಗಿ ಆಗಮಿಸಿದ್ದರು.

ಕರ್ನಾಟಕ ಸಮತಾ ಸೈನಿಕ ದಳದ ವಿಭಾಗೀಯ ಅಧ್ಯಕ್ಷರಾದ ಸಂಜೀವಕುಮಾರ ಟಿ ಮಾಲೆ ಸ್ವಗತಿಸಿ – ಪ್ರಾಸ್ತಾವಿಕ ಮಾತನಾಡಿದರು.
ವಸತಿ ನಿಲಯದ ಮೇಲ್ವಿಚಾರಕಿ ಅಶ್ವಿನಿ ಹಡಪದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ಎಂ ಎನ್ ಸುಗಂಧಿ ನಿರೂಪಿಸಿದರು, ನ್ಯಾಯವಾದಿ ಮಹಾದೇವ ನಾಟಿಕರ್ ವಂದಿಸಿದರು.

ಕಾರ್ಯಕ್ರಮದಲ್ಲಿ ವಿಧ್ಯಾರ್ಥಿನಿಯರು ಸಂವಿಧಾನದ ಪೀಠಿಕೆಯನ್ನು ವಾಚಿಸಿದರು. ತುಕಾರಾಮ ವರ್ಮಾ, ಪವನ ಧನಕರ್, ಅಮೃತ ನಾಯಕೋಡಿ, ಸಂತೋಷ, ಶಿವಲಿಂಗಮ್ಮ ಸಾವಳಗಿ, ಅರುಂಧತಿ, ಅಮರ ವಾಲಿ ಸೇರಿದಂತೆ ಸಿಬ್ಬಂದಿ ವರ್ಗದವರು ಮತ್ತು ವಿಧ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಡಾ ಬಿ ಆರ್ ಅಂಬೇಡ್ಕರ ರವರು ಅನೇಕ ಕಷ್ಟ ಕಾರ್ಪಣ್ಯಗಳನ್ನು ಸಹಿಸಿ, ಒಂದರ್ಥದಲ್ಲಿ ತಾವು ವಿಶವನ್ನು ಸೇವಿಸಿ ನಮಗೆ ಅಮೃತಮಯವಾದ ಸಂವಿಧಾನವನ್ನು ನೀಡಿದ್ದಾರೆ. – ಸಂಜೀವಕುಮಾರ ಮಾಲೆ, ವಿಭಾಗೀಯ ಅಧ್ಯಕ್ಷರು, ಕರ್ನಾಟಕ ಸಮತಾ ಸೈನಿಕ ದಳದ ಕಲಬುರಗಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here