ಸಂವಿಧಾನದ ತಿದ್ದುಪಡಿ ಬೇಕು: ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ

0
24

ಬೆಂಗಳೂರು: ನ.26: ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಮಾತನಾಡಿ, `ಸಂಸತ್, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳ ಪ್ರತಿನಿಧಿಸುವಂತಹ ಅವಕಾಶ ನೀಡಲು ಸಂವಿಧಾನದಲ್ಲಿ ತಿದ್ದುಪಡಿ ತರಬೇಕು’ ಎಂದರು.

ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ವತಿಯಿಂದ ಶಾಸಕರ ಭವನದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಹಾಗೂ ಜಾಗೃತಿ ವೇದಿಕೆಯ ಉದ್ಘಾಟನೆಯನ್ನು ನೆರವೇರಿಸಿ ಸುಪ್ರೀಂ ಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಶುಕ್ರವಾರ ಅವರು ಮಾತನಾಡಿದರು.

Contact Your\'s Advertisement; 9902492681

`ಸೌಲಭ್ಯಗಳು ಮತ್ತು ಸಮಾಜದ ಸಂಪತ್ತುಗಳು ಸಮಾನವಾಗಿ ದಕ್ಕುವಂತೆ ನೀತಿಗಳನ್ನು ರೂಪಿಸಿ ಕೇಂದ್ರ ಮತ್ತು ರಾಜ್ಯ ಸರಕಾರಿಗಳು ಅನುಷ್ಠಾನಕ್ಕೆ ತಂದು ಪ್ರಾಮಾಣಿಕವಾಗಿ ಅರ್ಹರಿಗೆ ತಲುಪಿಸುವಂತೆ ಮಾಡಿದಾಗ ಮಾತ್ರ ದೇಶದ ಪ್ರಗತಿ ಮತ್ತು ಅಭಿವೃದ್ಧಿ ಸಾಧ್ಯ ಎಂದ ಅವರು, ರಾಜಕೀಯ ಧುರೀಣರು, ಎಲ್ಲಾ ರಾಷ್ಟ್ರ, ರಾಜಕೀಯ ಪಕ್ಷಗಳು, ಪ್ರಾದೇಶಿಕ ಪಕ್ಷಗಳು ಅತಿ ಹಿಂದುಳಿದ ವರ್ಗದವರಿಗೆ ಬೆಂಬಲ ನೀಡಿ, ಅವರಿಗೆ ನ್ಯಾಯ ದೊರಕಿಸಿಕೊಡಬೇಕು. ಸುಪ್ರೀಂ ಕೋರ್ಟ್‍ನಲ್ಲಿ ಈಗಾಗಲೇ 2009ರಲ್ಲಿ ಪ್ರಸ್ತಾಪಿಸಿದಂತೆ ಹೆಣ್ಣು ಮಕ್ಕಳು ಅಬಲರು. ಅವರನ್ನು ಸಬಲೀಕರಣಗೊಳಿಸುವ ಅವಶ್ಯವಿದೆ. ಯಾವುದೇ ಮತ ಅಥವಾ ಜಾತಿಯ ಜನರಾಗಲಿ, ಹಿಂದುಳಿದ ವರ್ಗದವರಾಗಲಿ, ಅವರಿಗೆ ಸಲ್ಲಬೇಕಾದ ಹಕ್ಕುಗಳನ್ನು ಕಲ್ಪಿಸುವುದು ತುಬಾ ಅವಶ್ಯವಿದೆ ಎಂದರು.

ಸಂಸತ್, ವಿಧಾನಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಹಿಂದುಳಿದ ವರ್ಗಗಳು ಪ್ರತಿನಿಧಿಸುವಂತಹ ಅವಕಾಶ ನೀಡಲು ಸಂವಿಧಾನದಲ್ಲಿ ತಿದ್ದುಪಡಿ ತರಬೇಕು. ಸುಪ್ರೀಂ ಕೋರ್ಟ್ ಈಗಾಗಲೇ ಬೊಮ್ಮಾಯಿ ಪ್ರಕರಣದಲ್ಲಿ 94ರಲ್ಲಿ ಹೇಳಿದಂತೆ ಹಾಗೂ 96ರಲ್ಲಿ ಮೊದಲಿಯಾರ್ ಐಡಲ್ ಕೇಸ್‍ನಲ್ಲಿ ಸೆಕ್ಷನ್ 14ರ ಅನುಚ್ಚೇದ -1956ರ ಪ್ರಕಾರ ನಾಗರಿಕ ಹಕ್ಕು, ಶಿಕ್ಷಣ ಹಕ್ಕು, ಸಾಂಸ್ಕøತಿಕ ಹಕ್ಕು, ಆರ್ಥಿಕ ಹಕ್ಕು ಹೆಣ್ಣು ಮಕ್ಕಳಿಗೆ ಸಲ್ಲಬೇಕಾಗಿದೆ. ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದಿದೆ. ಇಂತಹ ತೀರ್ಪುಗಳು ಕಾರ್ಯಾಂಗ ಮತ್ತು ಶಾಸಕಾಂಗದಲ್ಲಿ ಅನುಷ್ಠಾನಗೊಳ್ಳಬೇಕು. ಇಲ್ಲದಿದ್ದರೆ ದೇಶದ ಪ್ರಗತಿ ಕುಂಠಿತಗೊಳ್ಳುತ್ತದೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯದ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಗೌರವ ಸಲಹೆಗಾರರಾದ ಸಿ.ಎಸ್. ದ್ವಾರಕಾನಾಥ್ ಮಾತನಾಡಿ, `ಧ್ವನಿಯಿಲ್ಲದ ಸಮುದಾಯಗಳಿಗೆ ಧ್ವನಿ ನೀಡಬೇಕಾಗಿದೆ. ಯಾಕೆಂದರೆ ಈ ಸಮುದಾಯಗಳಿಗೆ ಯಾವುದೇ ಮಠ-ಮಾನ್ಯಗಳಿಲ್ಲ. ಹೀಗಾಗಿ ಅತಿ ಹಿಂದುಳಿದ ವರ್ಗಗಳ ಪರವಾಗಿ ನಿಲ್ಲಬೇಕಾಗಿದೆ’ ಎಂದರು.

ಸಂವಿಧಾನ ದಿನ ಎಂದರೆ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡಂತಹ ಪವಿತ್ರವಾದ ದಿನ. ಇಂತಹ ಪವಿತ್ರವಾದ ದಿನದಂದು ಅತಿ ಹಿಂದುಳಿದ ವರ್ಗವಗಳ ಜಾಗೃತಿ ವೇದಿಕೆಯನ್ನು ಉದ್ಘಾಟನೆ ಮಾಡಿರುವುದು ಸಂತೋಷದ ಸಂಗತಿ. ದೊಡ್ಡ ಪ್ರಮಾಣದಲ್ಲಿ ಮಾಡುವ ಆಲೋಚನೆಯಿತ್ತು. ಆದರೆ ವಿಧಾನ ಪರಿಷತ್ ಚುನಾವಣೆಯ ನೀತಿ ಸಂಹಿತಿಯಿರುವುದರಿಂದ ಸರಳವಾಗಿ ಕಾರ್ಯಕ್ರಮ ಮಾಡಲಾಗಿದೆ. ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳವರು ಶೇ.56ರಷ್ಟು ಜನಸಂಖ್ಯೆಯಿದೆ. ಇಷ್ಟು ದೊಡ್ಡ ಸಂಖ್ಯೆಯುಳ್ಳ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ಇಲ್ಲದೆ ಕೊರಗುವಂತಾಗಿದೆ. ರಾಜಕೀಯ, ಅಧಿಕಾರದಲ್ಲಿ ಪ್ರಾತಿನಿಧ್ಯವಿಲ್ಲ. ಹಾಗಾಗಿ ಪ್ರಾತಿನಿಧ್ಯ ರಹಿತವಾದ ಸಮುದಾಯಗಳು ಇಲ್ಲಿವೆ.

ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಎಂ ಸಿ ವೇಣುಗೋಪಾಲ್‌ ಮಾತನಾಡಿ, ಪ್ರವರ್ಗ-1ರಲ್ಲಿ 95 ಜಾತಿಗಳಿವೆ. ಪ್ರವರ್ಗ-2ಎನಲ್ಲಿ 102 ಜಾತಿಗಳಿವೆ. ಈ ಎರಡೂ ಸೇರಿ 197 ಜಾತಿಗಳಿವೆ. ಅನೇಕರಿಗೆ ಆಶ್ಚರ್ಯವಾಗಬಹುದು. ಅತಿ ಹಿಂದುಳಿದ ವರ್ಗಗಳ ವೇದಿಕೆ ಎಂದು ಯಾಕೆ ಮಾಡಲಾಗಿದೆ ಯುಪಿ ಬಿಹಾರ್‍ನಲ್ಲಿ ಅಲ್ಲಿರುವ ಮೇಜರ್ ಸಮುದಾಯಗಳು ಹಿಂದುಳಿದ ವರ್ಗಗಳೇ ಆಗಿವೆ. ಇಲ್ಲೂ ಕೂಡ ಮೇಜರ್ ಸಮುದಾಯಗಳು ಹಿಂದುಳಿದ ವರ್ಗಗಳೇ ಆಗಿವೆ. ಈ ಸಮುದಾಯಕ್ಕೆ ಒಂದು ಗುರುತಿನ ಅಸ್ಮಿತೆ ಬೇಕಲ್ಲವೇ? ನಮ್ಮ ಪಾಲನ್ನು ನಾವು ಪಡೆದುಕೊಳ್ಳುತ್ತಿದ್ದೇವಾ? ಕಳೆದ 40 ವರ್ಷಗಳಿಂದ ನಮ್ಮ ಪಾಲು ಎಷ್ಟರ ಮಟ್ಟಿಗೆ ಸಿಕ್ಕಿದೆ. 197 ಸಮುದಾಯಗಳಲ್ಲಿ ಕೇವಲ 23 ಸಮುದಾಯಗಳು ಮಾತ್ರವೇ ಉದ್ಯೋಗ ಮತ್ತು ಶಿಕ್ಷಣದಲ್ಲಿ ಪ್ರಾತಿನಿಧ್ಯ ಪಡೆದಿವೆ. ಪ್ರವರ್ಗ-2ಎನ 102 ಸಮುದಾಯಗಳಲ್ಲಿ ಸುಮಾರು 27 ಸಮುದಾಯಗಳು ಮಾತ್ರ ಪ್ರಾತಿನಿಧ್ಯ ಪಡೆದಿವೆ. ಸುಮಾರು 70 ಸಮುದಾಯಗಳು ಇದುವರೆಗೆ ಒಂದು ಬಾರಿಯೂ ರಾಜಕೀಯ ಪ್ರಾತಿನಿಧ್ಯ ಪಡೆದಿಲ್ಲ. ಯಾವುದೇ ಅಧಿಕಾರ, ಶಿಕ್ಷಣದ ಸೌಲಭ್ಯಗಳನ್ನು ಪಡೆಯಲಾಗಿಲ್ಲ. ಧ್ವನಿಯಿಲ್ಲದ ಸಮುದಾಯಗಳಿಗೆ ಧ್ವನಿ ನೀಡಬೇಕಾಗಿದೆ ಎಂದರು.

ಯಾಕೆಂದರೆ ಈ ಸಮುದಾಯಗಳಿಗೆ ಯಾವುದೇ ಮಠ-ಮಾನ್ಯಗಳಿಲ್ಲ. ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳಿಲ್ಲ. ಹೇಳುವವರು ಕೇಳುವವರಿಲ್ಲ. ಇತ್ತೀಚೆಗಷ್ಟೇ ಧರ್ಮಗುರುಗಳು ಕಣ್ತೆರೆಯುತ್ತಿವೆ. ಆದರೆ ಸರಕಾರಗಳು ದೊಡ್ಡ ಸಮುದಾಯಗಳಿಗೆ 500 ಕೋಟಿಯಷ್ಟು ಅನುದಾನ ನೀಡಿದರೆ, ನಮ್ಮ ಧರ್ಮಗುರುಗಳಿಗೆ ಪ್ಲೇಟ್ ಮೀಲ್ಸ್ ಗೂ ಹಣ ಕೊಡುತ್ತಿಲ್ಲ. ಇದು ನೋವಿನ ಸಂಗತಿ. ನಮ್ಮ ಸಮುದಾಯಗಳನ್ನು ನಿರ್ಲಕ್ಷಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ನಮ್ಮ ಧ್ವನಿ ಇಡೀ ರಾಜ್ಯಕ್ಕೆ, ರಾಷ್ಟ್ರಕ್ಕೆ ಕೇಳಿಸಬೇಕಾಗಿದೆ. ಅನ್ಯ ರಾಜ್ಯಗಳಂತೆ ಅತಿ ಹಿಂದುಳಿದ ವರ್ಗಗಳ ಚಳವಳಿಗೆ ಎಲ್ಲಾ ಪ್ರಬಲ ಜಾತಿಯ ಸಮುದಾಯಗಳು ನಮ್ಮನ್ನು ಬೆಂಬಲಿಸಬೇಕು ಎಂದು ನಾವು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇವೆ. ನಿಮ್ಮ ಜತೆಯಲ್ಲಿರುವ ಅಣ್ಣ ತಮ್ಮಂದಿರು ನಾವು. ಬದುಕಲು ನಮಗೂ ಅವಕಾಶ ಕೊಡಿ. ಅಂಬೇಡ್ಕರ್ ಅವರು 72 ವರ್ಷಗಳ ಹಿಂದೆ ಕಡೇ ಭಾಷಣದಲ್ಲಿ ಮೂರು ಅಂಶಗಳನ್ನು ಹೇಳುತ್ತಾರೆ. ಸಂವಿಧಾನವನ್ನು ಕೇವಲ ರಾಜಕೀಯವಾಗಿ ಮಾತ್ರ ತೆಗೆದುಕೊಂಡು ಹೋದರೆ ಅದರಿಂದ ಪ್ರಯೋಜನವಿಲ್ಲ. ಸಾಮಾಜಿಕ, ಆರ್ಥಿಕವಾಗಿಯೂ ಕೂಡ ತೆಗೆದುಕೊಂಡು ಹೋಗಬೇಕು. ಇದು ವ್ಯಕ್ತಿ ಪ್ರಧಾನವಲ್ಲ, ಸಂಸ್ಥೆ ಪ್ರಧಾನವಾಗಬೇಕು. ಸಂವಿಧಾನಲ್ಲಿರುವ ಸಹೋದರತ್ವ, ಸಹಬಾಳ್ವೆ ಎಲ್ಲವನ್ನೂ ಸಮಾನವಾಗಿಹಂಚಿಕೆಯಾಗಬೇಕು. ಪಾಲನ್ನು ಹಂಚಿಕೊಳ್ಳುವ ಸಂದರ್ಭ ಬರಬೇಕು ಎಂದು ಹೇಳಿದರು

ಸಂವಿಧಾನವನ್ನು ಅರ್ಪಿಸಿಕೊಂಡು 72 ವರ್ಷವಾದರೂ ನಮಗೆ ಈವರೆಗೆ ಯಾವುದೇ ಸವಲತ್ತು ಸಿಕ್ಕಿಲ್ಲ. ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಇಂತಹ ಸಂದರ್ಭದಲ್ಲಿ ಧ್ವನಿ ಎತ್ತಲೇಬೇಕು. ಹೋರಾಟವನ್ನೂ ರೂಪಿಸಬೇಕಾದ ಅನಿವಾರ್ಯತೆ ಇದೆ ಎಂದರು.

ಈ ಸಂದರ್ಭದಲ್ಲಿ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ಅಧ್ಯಕ್ಷ ಎಂ.ಸಿ. ವೇಣುಗೋಪಾಲ್, ಗೌರವ ಸಲಹೆಗಾರರಾದ ಸಿ.ಎಸ್. ದ್ವಾರಕಾನಾಥ್, ಪಿ.ಎನ್. ಶ್ರೀನಿವಾಸಾಚಾರಿ, ಪ್ರಧಾನಕಾರ್ಯದರ್ಶಿ ಎಂ. ನಾಗರಾಜು ಮತ್ತು ಖಚಾಂಚಿ ಮಂಜುನಾಥ್ ಮತ್ತು ಅತಿಹಿಂದುಳಿದ ವರ್ಗಕ್ಕೆ ಸೇರಿದ ಮಠಾಧೀಶರುಗಳು ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here