ಶಹಾಬಾದ: ಕ್ರೀಡೆ ಮಾನಸಿಕವಾಗಿ ದೈಹಿಕವಾಗಿ ವ್ಯಕ್ತಿಯನ್ನು ಸದೃಡವಾಗಿಸುತ್ತದೆ. ಕ್ರೀಡೆಯಿಂದ ಯಾವುದೇ ವಿದ್ಯಾರ್ಥಿಗಳು ವಂಚಿತರಾಗಬಾರದು ಎಂದು ಸರಕಾರಿ ಪ್ರಾಥಮಿಕ ಶಾಳಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪುತ್ರ ಕರಣಿಕ್ ಹೇಳಿದರು.
ಅವರು ತಾಲೂಕಿನ ಗೋಳಾ(ಕೆ) ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಜಾದಿ ಕೇ ಅಮೃತ ಮಹೋತ್ಸವದ ನಿಮಿತ್ತ ಆಯೋಜಿಸಲಾದ ಫಿಟ್ ಇಂಡಿಯಾ ಶಾಲಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕೆಲಸದ ಜೊತೆಯಲ್ಲಿ ಸರ್ವಭೂತ ಪ್ರೀತಿ ಮನು? ನ ಮನಸ್ಸಿನಲ್ಲಿ ಮೂಡಿದರೆ ಆರೋಗ್ಯ ವಂತನಾಗುತ್ತಾನೆ. ವಿದ್ಯಾರ್ಥಿಗಳು ಮಾನಸಿಕವಾಗಿ, ದೈಹಿಕ ವಾಗಿ ಸದೃಡವಾಗಬೇಕಾದರೆ ದೈಹಿಕ ಶಿಕ್ಷಕರ ಪಾತ್ರ ಹಿರಿದು.ಆ ನಿಟ್ಟಿನಲ್ಲಿ ಸರಕಾರದ ಯೋಜನೆ ಯಶಸ್ವಿಯಾಗಬೇಕಾದರೆ ಶಿಕ್ಷಕರ ಜೊತೆ ವಿದ್ಯಾರ್ಥಿಗಳು ಪಾಲುದಾರಿಕೆ ಅತ್ಯಗತ್ಯ ಎಂದರು.
ದೈಹಿಕ ಶಿಕ್ಷಕ ಬನ್ನಪ್ಪ ಸೈದಾಪೂರ ಮಾತನಾಡಿ, ಶಾಲೆಯಲ್ಲಿ ನಡೆಸುವ ಫಿಟ್ ಇಂಡಿಯಾ ಸಪ್ತಾಹದ ೬ ದಿನಗಳಲ್ಲಿ ಮೊದಲನೆ ದಿನ ಪ್ರಾದೇಶಿಕ ನೃತ್ಯದ ಮೂಲಕ ಫಿಟ್ನೆಸ್, ಎರಡನೆ ದಿನ ಫಿಟ್ನೆಸ್ ಕುರಿತಾಗಿ ಪ್ರಬಂಧ, ಕ್ರೀಡೆ, ಉಪನ್ಯಾಸ ಆಯೋಜನೆ ಮತ್ತು ಮೂರನೆ ದಿನ ಆಹಾರದ ಕುರಿತು ಸಾಂಪ್ರದಾಯಿಕ ಆಟ, ನಾಲ್ಕನೆ ದಿನ ಸಾಮಾಜಿಕ ಜವಾಬ್ದಾರಿ, ಐದನೆ ದಿನ ಯೋಗ ಮತ್ತು ಧ್ಯಾನ, ಹಾಗೂ ಆರನೆಯ ದಿನ ಆರೋಗ್ಯ ಜೀವನದ ಚಟುವಟಿಕೆ ನಡೆಸಿ ಈ ಸಪ್ತಾಹ ಮುಕ್ತಾಯಗೊಳಿಸಲಾಗುವುದು ಎಂದು ಕಾರ್ಯಕ್ರಮದ ಕುರಿತಾಗಿ ವಿವರಿಸಿದರಲ್ಲದೇ,ವ್ಯಕ್ತಿ ನಿರಂತರ ಕಾರ್ಯಚಟುವಟಿಯಲ್ಲಿದ್ದರೆ ಆತ ಆರೋಗ್ಯ ವಂತನಾಗಿರುತ್ತಾನೆ ಎಂದು ಅವರು ಹೇಳಿದರು.
ಸಿಆರ್‌ಪಿ ಶರಣಬಸಪ್ಪ , ಎಸ್‌ಡಿಎಮ್‌ಸಿ ಸದಸ್ಯರಾದ ಶಬ್ಬೀರ್ ಹುಸೇನ್, ಹಣಮಂತರಾಯ, ಮುಖ್ಯಗುರುಗಳಾದ ಹೇಮಾಬಾಯಿ ಠಾಕೂರ ವೇದಿಕೆಯ ಮೇಲಿದ್ದರು.
ಬನ್ನಪ್ಪ ಸೈದಾಪೂರ ನಿರೂಪಿಸಿದರು, ಅಶ್ವಿನಿ ನೀಲಗಾರ ಸ್ವಾಗತಿಸಿದರು, ರಮಾ.ಎಸ್.ಪಿ ವಂದಿಸಿದರು.