ಕಲಬುರಗಿ: ನಗರದ ಆಶೀರ್ವಾದ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಡಿಯಲ್ಲಿ ನಡೆಯುವ ಸೇವಾ ಭಾರತಿ ಅಧ್ಯಕ್ಷರು ಹಾಗೂ ಬಂಧು ಪ್ರಿಂಟರ್ಸ್ ನ ಮಾಲೀಕರಾದ ಶೀಲಾ ಮತ್ತು ರಮೇಶ ಬಂಧು ತಿಪ್ಪನೂರ ದಂಪತಿಯವರ ೨೫ ನೇ ವಿವಾಹ ವಾರ್ಷಿಕೋತ್ಸವ ಜರುಗಿತು.
ಉಜ್ಜಯಿನಿ ಜಗದ್ಗುರುಗಳ ಹಾಗೂ ಶ್ರೀಶೈಲ ಜಗದ್ಗುರುಗಳ ದಿವ್ಯಸಾನಿಧ್ಯದಲ್ಲಿ ಹಾಗೂ ಕಲ್ಯಾಣ ಕರ್ನಾಟಕದ ಮಠಾಧೀಶರುಗಳಾದ ಸದ್ಧರ್ಮ ಶಿರೋಮಣಿ ಶ್ರೀ, ಸರಡಗಿ ಶಕ್ತಿ ಪೀಠದ ಡಾ. ಅಪ್ಪಾರಾವ ದೇವಿ ಮುತ್ಯಾ, ಮುಗುಳನಾಗಾವಿ ಶ್ರೀಗಳ, ಸೇಡಂ ಶ್ರೀಗಳ ರಾಜೇಶ್ವರ, ಕಡಗಂಚಿ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಇದೇ ಸಂದರ್ಭದಲ್ಲಿ ಬಂಧು ಸೇವಾ ಸಮಿತಿಯ ಉದ್ಘಾಟನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಆರ್ ಎಸ್ ಎಸ್ ಮತ್ತು ವಿ ಎಚ್ ಪಿ ಯ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಅಯೋಧ್ಯಾ ಶ್ರೀ ರಾಮ ಮಂದಿರ ನಿರ್ಮಾಣದ ಉಸ್ತುವಾರಿಗಳಾದ ಗೋಪಾಲ ಜೀ, ಶ್ರೀ ಶರಣಬಸವೇಶ್ವರ ಸಂಸ್ಥಾನದ ಮಾತಾಜಿ ದಾಕ್ಷಾಯಿಣಿ ಅಮ್ಮ, ಬಸವರಾಜ ಪಾಟೀಲ ಸೇಡಂ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶಶಿಲ ಜಿ ನಮೋಶಿ, ಅಮರನಾಥ ಪಾಟೀಲ, ಜಯಶ್ರೀ ಬಿ ಮತ್ತಿಮುಡ್, ನ್ಯಾಯವಾದಿ ಚಂದ್ರಕಾಂತ ಆರ್ ಕಾಳಗಿ ಹಾಗೂ ರಮೇಶ ತಿಪ್ಪನೂರ ಅಭಿಮಾನಿ ಬಳಗ ಹಾಗೂ ಅಪಾರ ಬಂಧು ಮಿತ್ರರ ನೇತೃತ್ವದಲ್ಲಿ ಅತೀ ವಿಜೃಂಭಣೆಯಿಂದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡರು.
ಪ್ರತಿವರ್ಷ ಬಡವರ ಮತ್ತು ನಿರ್ಗತಿಕರ ಮಕ್ಕಳಿಗಾಗಿ ಶಿಕ್ಷಣ ಮತ್ತು ಕಷ್ಟದ ಸಂದರ್ಭದಲ್ಲಿ ತಮ್ಮ ಕೈಲಾದಷ್ಟು ಸಹಾಯ ಮಾಡುವ ಮನೋಭಾವದಿಂದ ಪ್ರತಿ ವರ್ಷ ೨ ಲಕ್ಷ ರೂಗಳನ್ನು ಬಂಧು ಸೇವಾ ಸಮಿತಿ ವತಿಯಿಂದ ಸಹಾಯ ಮಾಡುವ ಉದ್ದೇಶ ಹೊಂದಿದ್ದಾರೆ. ಪ್ರಸಕ್ತ ಸಾಲಿನಲ್ಲಿ ೧೦ ಲಕ್ಷ ರೂಗಳನ್ನು ಬಂಧು ಸೇವಾ ಸಮಿತಿಯಲ್ಲಿ ಠೇವಣಿ ಮಾಡಿದ್ದಾರೆ.