ಕಲಬುರಗಿ: ಕಟ್ಟಡ ನಿರ್ಮಾಣ ಉದ್ಯಮವನ್ನು ಉಳಿಸುವದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಶ್ರೀಮಂತ ಬಿರಾದಾರ, ನಾಗಯ್ಯಸ್ವಾಮಿ, ಹಣಮಂತರಾಯ ಪೂಜಾರಿ, ಬಾಬು ಹೂವಿನಹಳ್ಳಿ, ಯಶವಂತ ಮಾಲಿಪಾಟೀಲ, ಶೀಲಾದೇವಿ ಕೋಟನೂರ ಇದ್ದರು.