ಎಂ.ಎನ್. ದೇಸಾಯಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಾಗತ, ಸಾಧಕರಿಗೆ ಪ್ರಶಸ್ತಿ ಪ್ರದಾನ

0
24

ಕಲಬುರಗಿ : ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಕಲಿಕೆಯತ್ತ ಮಾತ್ರ ಗಮನ ಹರಿಸಬೇಕು. ಹೊಸ ವಿಚಾರ ಕಲಿತು, ಸಾಧನೆ ಮಾಡುವ ಕನಸು ಹೊತ್ತುಕೊಂಡು ಸಮಯ ಪರಿಪಾಲನೆ ಮಾಡಬೇಕು. ನಿರಂತರ ಪರಿಶ್ರಮ, ಕಠಿಣ ಅಧ್ಯಯನದಲ್ಲಿ ತೊಡಗಿಸಿಕೊಂಡು ಮುನ್ನುಗ್ಗಿದರೆ ಯಶಸ್ಸು ಖಂಡಿತ ಸಿಗುತ್ತದೆ ಎಂದು ದಕ್ಷಿಣ ಉಪವಿಭಾಗದ ಎಸಿಪಿ ಅಂಶಕುಮಾರ್ ತಿಳಿಸಿದರು.

ನಗರದಲ್ಲಿ ಗುರುವಾರ ಆಯೋಜಿಸಿದ್ದ ಎಂ.ಎನ್. ದೇಸಾಯಿ ಪದವಿ ಕಾಲೇಜಿನ ಬಿ.ಎ. ಮತ್ತು ಬಿ.ಕಾಂ. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ವಾಣಿಜ್ಯ ತೆರಿಗೆ ಇಲಾಖೆ ಇಲಾಖೆ ಸಹಾಯಕ ಆಯುಕ್ತ ಸುನೀಲಕುಮಾರ ಭಾವಿಕಟ್ಟಿ ಮಾತನಾಡಿ, ಹಳ್ಳಿಗಳಿಂದ ಬಂದವರೆ ಬಹುತೇಕ ಸಾಧಕರಾಗಿದ್ದಾರೆ. ನಿಮ್ಮ ಸಮಸ್ಯೆ, ಅಡ್ಡಿ ಎಲ್ಲವನ್ನೂ  ಮೀರಿ ಕಲಿಕೆಯಲ್ಲಿ ತೊಡಿಸಿಕೊಳ್ಳಿ. ನಿಷ್ಠೆ, ಶ್ರದ್ಧೆಯಿಂದ ಓದಿದರೆ ಸಾಧನೆ ಮಾಡಬಹುದು ಎಂದು ಹೇಳಿದರು.

ಸಾಹಿತಿ ಡಾ.ಸ್ವಾಮಿರಾವ ಕುಲಕರ್ಣಿ, ಮಹಿಪಾಲರೆಡ್ಡಿ ಮುನ್ನೂರ್, ಕರ್ನಾಟಕ ಮುಕ್ತ ವಿಶ್ವ ವಿದ್ಯಾಲಯದ ಕಲಬುರಗಿ ಪ್ರಾದೇಶಿಕ ಕೇಂದ್ರದ ನಿರ್ದೇಶಕ ಡಾ.ಸಂಗಮೇಶ ಹಿರೇಮಠ, ಗುರೂಜಿ ಪದವಿ ಕಾಲೇಜಿನ ಅಧ್ಯಕ್ಷ ಕಲ್ಯಾಣಿ ಶೀಲವಂತ, ಪಿಎಸ್‌ಐ ಯಶೋಧಾ ಕಟಕೆ, ಡಾ.ಕೃಷ್ಣ ಕುಲಕರ್ಣಿ ಮಾತನಾಡಿದರು. ಗೌರವಾಧ್ಯಕ್ಷ ಚಂದ್ರಕಾಂತ ದೇಸಾಯಿ ಅಧ್ಯಕ್ಷತೆ  ವಹಿಸಿದ್ದರು.

ಚಂದ್ರಕಾಂತ ಪಾಟೀಲ ಸಿರಗಾಪುರ. ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಸುನೀಲಕುಮಾರ, ನಿವೃತ್ತ ಸೈನಿಕರ ಸಂಘದ ಉಪಾಧ್ಯಕ್ಷ ಮಲ್ಲಿಕಾರ್ಜುನ ಮಡಿವಾಳ, ಉದ್ಯಮಿ ಅಕ್ಟರ್ ಅಲಿಖಾನ್, ಪ್ರಾಚಾರ್ಯ ವಸಂತರಾವ ಚವ್ಹಾಣ, ಕಾಲೇಜಿನ ಅಧ್ಯಕ್ಷ ಸಂದೀಪ್ ದೇಸಾಯಿ, ಕಾರ್ಯದರ್ಶಿ ಜಗನ್ನಾಥ ನಾಗೂರ, ಪತ್ರಕರ್ತ ಬಾಬುರಾವ ಯಡ್ರಾಮಿ, ಪ್ರಾ-ಧ್ಯಾಪಕರಾದ ನಾಗರಾಜ ಪಟ್ಟಣಕರ್, ಘಾಳೇಶ ಶೃಂಗೇರಿ ಇದ್ದರು.

ನವಲಿಂಗ ಪಾಟೀಲ ನಿರೂಪಿಸಿದರು. ಎಂಜಿನಿಯರ್ ಪಾಟೀಲ ನಿರೂಪಿಸಿದರು. ಮೇಘಾ ಮತ್ತು ಜ್ಯೋತಿ ಪ್ರಾರ್ಥಿಸಿದರು. ಪ್ರೊ. ಆನಂದತೀರ್ಥ ಜೋಶಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಕರ್ಣ, ಶ್ರೀಕಾಂತ, ವರ್ಷಾ, ಏಕನಾಥ ಅನಿಸಿಕೆ ವ್ಯಕ್ತಪಡಿಸಿದರು. ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here