ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸ್ಪರ್ಧಾತ್ಮಕ ತರಬೇತಿ ಶಿಬಿರದ ಉದ್ಘಾಟನಾ

0
15

ಸುರಪುರ: ನಗರದ ಬಸವರಾಜಪ್ಪ ಅಪ್ಪಾ ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದಲ್ಲಿ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸ್ಪರ್ಧಾತ್ಮಕ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮ ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ೮ನೇ ಮಹಾದಾಸೋಹ ಪಿಠಾಧಿಪತಿಗಳು, ಅಧ್ಯಕ್ಷರು ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಕುಲಾಧಿಪತಿಗಳು ಶರಣಬಸವ ವಿಶ್ವವಿದ್ಯಾಲಯ, ಕಲಬುರ್ಗಿ ಹಾಗೂ ಪೂಜ್ಯ ಶ್ರೀಮತಿ ನೀಲಮ್ಮ ತಾಯಿ ವ್ಹಿ ನಿಷ್ಠಿ ಜಹಾಗೀರದಾರವರು ವಹಿಸಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶರಣಬಸಪ್ಪ ವ್ಹಿ. ನಿಷ್ಠಿ ಜಹಾಗೀರದಾರ ಕಾರ್ಯದರ್ಶಿಗಳು, ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ, ಬಸವರಾಜಪ್ಪ ಅಪ್ಪಾ ವಾಣಿಜ್ಯ ಹಾಗೂ ವಿಜ್ಞಾನ ಪದವಿ ಮಹಾವಿದ್ಯಾಲಯ, ಶರಣಬಸವ ಪದವಿ ಪೂರ್ವ ವಸತಿ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಮತ್ತು ಶರಣಬಸವ ಪಬ್ಲಿಕ್ ಸ್ಕೂಲ್, ಸುರಪುರ, ಮುಖ್ಯ ಅತಿಥಿಗಳಾಗಿ ಶ್ರೀ ಲಿಂಗರಾಜಪ್ಪ. ಬ. ಅಪ್ಪಾ ಶ್ರೀ ಶರಣಬಸವೇಶ್ವರ ಸಂಸ್ಥಾನ ಕಲಬುರಗಿ. ದೊಡ್ಡಪ್ಪ ಎಸ್. ನಿಷ್ಠಿ ಜಹಾಗೀರದಾರ ಜಂಟಿ ಕಾರ್ಯದರ್ಶಿಗಳು, ವೀರಪ್ಪ ನಿಷ್ಠಿ ತಾಂತ್ರಿಕ ಮಹಾವಿದ್ಯಾಲಯ, ಅಪ್ಪಾ ಪದವಿ ವಾಣಿಜ್ಯ, ಮಹಾವಿದ್ಯಾಲಯ ಶರಣಬಸವ ಪದವಿ ಪೂರ್ವ ವಸತಿ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯ, ಮತ್ತು ಶರಣಬಸವ ಪಬ್ಲಿಕ್ ಸ್ಕೂಲ್, ಸುರಪುರ ಇವರು ವಹಿಸಿಕೊಂಡಿದ್ದರು.

Contact Your\'s Advertisement; 9902492681

ಲಿಂಗರಾಜಪ್ಪ. ಬ. ಅಪ್ಪಾರವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಧ್ಯಾರ್ಥಿಗಳು ಪಠ್ಯಕ್ರಮದ ತರಗತಿಯ ಜೊತೆಗೆ ಪರೀಕ್ಷೆ ವಿಷಯದ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವಂತಾಗಲು ಸ್ಪರ್ಧಾತ್ಮಕ ತರಬೇತಿ ಶಿಬಿರ ಕೇಂದ್ರವನ್ನು ಸ್ಪಾಪಿಸಲಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು. ಪೂಜ್ಯ ಅಪ್ಪಾಜಿಯವರ ಶೈಕ್ಷಣಿಕ ಕೊಡುಗೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದೊಡ್ಡಪ್ಪ ಎಸ್. ನಿಷ್ಠಿ ಜಹಾಗೀರದಾರವರು ಮಾತನಾಡಿ ಮುಂದಿನ ದಿನಗಳಲ್ಲಿ ಬಿ.ಕಾಂ ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳು ಲಭ್ಯವಿದ್ದು, ಸ್ಪರ್ಧಾತ್ಮಕ ತರಬೇತಿ ಶಿಬಿರ ಕೇಂದ್ರದ (ಇನ್‌ಕೂಬೇಶನ್ ಸೆಂಟರ್) ಸ್ಥಾಪನೆ ಮಾಡಲಿದ್ದು, ವಿದ್ಯಾರ್ಥಿಗಳು ಹೊಸ ಪ್ರಯೋಗಿಕ ಅನ್ವೇಷಣೆ ಮೂಲಕ ಮಾಹಾವಿದ್ಯಾಲಯವು ಪೆಟೆಂಟ್‌ನ್ನು ಪಡೆಯುವಂತೆ ಪ್ರಧ್ಯಾಪಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕು ಎಂದು ಹೇಳಿದರು.

ಪ್ರಾಚಾರ್ಯರಾದ ಪ್ರೋ. ನಾನಾಗೌಡ ದೇಸಾಯಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು, ಪ್ರೋ. ಮೋಹನರೆಡ್ಡಿ ನಿರೂಪಿಸಿದರು ಹಾಗೂ ಪ್ರೋ. ಮಹೇಶಕುಮಾರ ವಂದಿಸಿದರು. ಪ್ರಾಚಾರ್ಯರಾದ ಡಾ. ರವಿಂದ್ರಕುಮಾರ ನಾಗರಾಳೆ, ಅನೀಲಕುಮಾರ ಪಾಟೀಲ, ಮುಖ್ಯೋಪಾಧ್ಯಾರಾದ ರತ್ನಾ ಹಾಗೂ ಪ್ರಾದ್ಯಾಪಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here