ಕೆಬಿಜೆಎನ್‌ಎಲ್ ಕಾಮಗಾರಿಗಳ ಅನುದಾನ ದುರಪಯೋಗ: ತನಿಖೆಗೆ ಒಕ್ಕೂಟ ಮನವಿ

0
17

ಸುರಪುರ: ಕೃಷ್ಣಾ ಭಾಗ್ಯ ಜಲ ನಿಗಮದ ಕಾಮಗಾರಿಗಳಿಗಾಗಿ ಸರಕಾರ ನೀಡಿದ ಅನುದಾನದ ಟೆಂಡರ್‌ನಲ್ಲಿನ ಉಳಿತಾಯ ಹಣ ದುರುಪಯೋಗವಾಗಿದ್ದು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಕೆಬಿಜೆಎನ್‌ಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಕರ್ನಾಟಕ ದಲಿತ ಹಿಂದುಳಿದ ಮತ್ತು ಅಲ್ಪಸಂಖ್ಯಾರ ಒಕ್ಕೂಟದ ಮುಖಂಡರು ಮನವಿ ಸಲ್ಲಿಸಿ ಒತ್ತಾಯಿಸಿದರು.

ಯಾದಗಿರಿ ನಗರಕ್ಕೆ ಆಗಮಿಸಿದ್ದ ಕೆಬಿಜೆಎನ್‌ಎಲ್ ಎಮ್.ಡಿ ಶಿವಕುಮಾರ ಅವರಿಗೆ ಮನವಿ ಸಲ್ಲಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ವೆಂಕೋಬ ದೊರೆ ಮಾತನಾಡಿ,೨೦೧೪-೧೫ ರಿಂದ ೨೦೧೭-೧೮ರ ವರೆಗೆ ಕೆಬಿಜೆಎನ್‌ಎಲ್‌ನ ೪ ವಲಯಗಳಲ್ಲಿ ನಡೆದ ಟೆಂಡರ್‌ನ ಉಳಿತಾಯ ಹಣ ಸುಮಾರು ೫೬ ಕೋಟಿ ೮೮ ಲಕ್ಷ ರೂಪಾಯಿಗಳನ್ನು ಬೇರೆ ಕ್ಷೇತ್ರವಾದ ಬಬಲಾದ ಕ್ಷೇತ್ರಕ್ಕೆ ವರ್ಗಾವಣೆ ಮಾಡಿಕೊಂಡಿದ್ದು ಇದರಿಂದ ನಮ್ಮ ಜಿಲ್ಲೆಯ ಎಸ್.ಸಿ ಎಸ್.ಟಿ ಸಮುದಾಯಗಳಿಗೆ ದೊಡ್ಡ ವಂಚನೆಯಾಗಿದೆ.

Contact Your\'s Advertisement; 9902492681

ಆದ್ದರಿಂದ ಕೂಡಲೇ ಈ ಎಲ್ಲಾ ಹಣ ವರ್ಗಾವಣೆಯಾಗಲು ಕಾರಣೀಭೂತರಾದ ಅಧಿಕಾರಿಗಳ ಮೇಲೆ ಕ್ರಮಕ್ಕೆ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಒಕ್ಕೂಟದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.ಅಲ್ಲದೆ ಕರ್ನಾಳ ಹೆಮನೂರು ನಾಲಾ ಲಿಫ್ಟ್ ಇರಿಗೇಶನ್ ಟೆಂಡರ್ ಪ್ರಕ್ರೀಯೆಯನ್ನು ನಾರಾಯಣಪುರ ವಲಯಕ್ಕೆ ನೀಡದೆ ಭೀಮರಾಯನಗುಡಿ ಓ,ಎಮ್ ಡಿವಿಜನದಲ್ಲಿಯೇ ಟೆಂಡರ್ ಮಾಡಬೇಕು.ಬೊಮ್ಮನಹಳ್ಳಿ ವಾಟರ್ ಟ್ಯಾಂಕ್,ಜಾಲಿಬೆಂಚಿ ಟ್ಯಾಂಕ್,ಹೆಮ್ಮಡಗಿ ಕಾಲುವೆ ಎಕ್ಸಟೆನ್ಶನ್ ಒಂದೇ ಪ್ಯಾಕೇಜ್ ಮಾಡದೆ ಎಸ್ಟಿಮೇಟ್ ಇರುವಂತೆ ಆಯಾ ಗ್ರಾಮದಂತೆ ಕಾಮಗಾರಿಗಳನ್ನು ಬೇರೆ ಬೇರೆಯಾಗಿ ಟೆಂಡರ್ ಮಾಡಬೇಕು ಎಂದು ಆಗ್ರಹಿಸಿದರು.

ನಂತರ ಎಮ್.ಡಿ ಶಿವಕುಮಾರ ಅವರು ಮನವಿ ಸ್ವೀಕರಿಸಿ ಮಾತನಾಡಿ,ತಮ್ಮ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಒಕ್ಕೂಟದ ರಾಜ್ಯಾ ಉಪಾಧ್ಯಕ್ಷ ನಾಗಣ್ಣ ಕಲ್ಲದೇವನಹಳ್ಳಿ,ಪ್ರಧಾನ ಕಾರ್ಯದರ್ಶಿ ಭೀಮರಾಯ ಸಿಂದಗೇರಿ,ಸಂಘಟನಾ ಕಾರ್ಯದರ್ಶಿ ನಿಂಗಣ್ಣ ಗೋನಾಲ,ಜಿಲ್ಲಾ ಉಪಾಧ್ಯಕ್ಷ ಗಂಗಾಧರ ನಾಯಕ,ಜಿಲ್ಲಾ ಪ್ರಧಾನಕಾರ್ಯದರ್ಶಿ ಬುಚ್ಚಪ್ಪ ನಾಯಕ, ಕಾರ್ಯದರ್ಶಿ ರಾಜು ದರಬಾರಿ,ಸಂಘಟನಾ ಕಾರ್ಯದರ್ಶಿ ಶಿವಶಂಕರ ಹೊಸ್ಮನಿ,ರೈತ ಘಟಕದ ತಾಲೂಕು ಅಧ್ಯಕ್ಷ ಗೋಪಾಲ ಬಾಗಲಕೋಟೆ,ಉಪಾಧ್ಯಕ್ಷ ಶರಣು ಮಕಾಶಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here