ಕಲಬುರಗಿ: ಅಪರಾದ ತಡೆ ಮಾಸಾಚರಣೆ ಪ್ರಯುಕ್ತ ನಗರದ ಬಸವೇಶ್ವರ ಕಾಲೋನಿಯಲ್ಲಿರುವ ಶ್ರೀ ಗುರುಪಾದ ಲಿಂಗೆಶ್ವರ ವಿಜ್ಞಾನ ಕಾಲೇಜಿನ ಮಹಿಳೆಯರ ಸುರಕ್ಷಿತಾ ಕ್ರಮ ಹಾಗೂ ಸಾಮಾಜೀಕ ಅಂತರಜಾಲಗಳಿಂದ ಯಾವ ರೀತಿಯಾದ ಅಪರಾಧಗಳನ್ನು ನಡೆಯುತ್ತವೆ ಮತ್ತು ಅವುಗಳನ್ನು ತಡೆಗಟ್ಟುವ ಕುರಿತು ಯಾವ ರೀತಿಯಾ ಕ್ರಮ ಕೈಗೊಳ್ಳಬೇಕು ಹಾಗೂ ಯಾವುದೆ ತುರ್ತ ಸಂದರ್ಭದಲ್ಲಿ ೧೧೨ ಯಾವ ರೀತಿಯಾಗಿ ಕಾರ್ಯನಿರ್ವಹಿಸುತ್ತದೆ. ಮತ್ತು ಅದರ ಉಪಯೋಗ ಯಾವ ರೀತಿಯಾಗಿದೆ ಎಂದು ವಿಧ್ಯಾರ್ಥಿನಿಯರಿಗೆ ಉತ್ತರ ಉಪ-ವಿಭಾಗದ ಸಹಾಯಕ ಪೊಲೀಸ ಆಯುಕ್ತರು ದೀಪನ ಐ.ಪಿ.ಎಸ್ ರವರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಎಂ.ಬಿ. ನಗರ ಪೊಲೀಸ್ ಪೊಲೀಸ್ ಇನಸ್ಪೆಕ್ಟರಾದ ಚಂದ್ರಶೇಖರ ತಿಗಡಿ, ಕಾಲೇಜಿನ ಪ್ರಾಂಶುಪಾಲರಾದ ಶಿವರಾಜ ಶೀಲವಂತ, ಶ್ರೀಮತಿ ಜ್ಯೋತಿ ಉದಯಕುಮಾರ ಮತ್ತು ಕಾಲೇಜಿನ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.