ಕನ್ನಡದ ಶಾಸ್ತ್ರೀಯ ಸ್ಥಾನಮಾನ ಪ್ರಾದೇಶಿಕ ಕಚೇರಿ ಕಲಬುರಗಿಗೆ ತರಲು ನೂತನ ಸಾಹಿತ್ಯ ಪರಿಷತ್ ಪದಾಧಿಕಾರಿಗಳಿಗೆ ಲಕ್ಷ್ಮಣ ದಸ್ತಿ ಆಗ್ರಹ

0
21

ಕಲಬುರಗಿ : ನಿರಂತರ ಹೋರಾಟದ ಫಲಸ್ವರೂಪ ಸುಮಾರು ಮೂರು ಸಾವಿರ ವರ್ಷದ ಇತಿಹಾಸ ಹೊಂದಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿ ಒಂದು ದಶಕಕ್ಕೂ ಅಧಿಕ ಕಾಲ ಗತಿಸಿದರೂ ಸಹ ಕನ್ನಡಕ್ಕೆ ಸಿಕ್ಕಿರುವ ಶಾಸ್ತ್ರೀಯ ಸ್ಥಾನಮಾನದ ಪರಿಣಾಮಕಾರಿ ಅನುಷ್ಠಾನ ಆಗುತ್ತಿಲ್ಲ. ಮತ್ತು ಸಿಗುವ ಪ್ರಾತಿನಿಧ್ಯ ಹಾಗೂ ಅನುದಾನ ಸಿಗುತ್ತಿಲ್ಲ. ಕನ್ನಡ ಲೋಕಕ್ಕೆ ಕವಿರಾಜ ಮಾರ್ಗ ಎಂಬ ಅದ್ಭುತ ಮಹಾನ ಗ್ರಂಥ ನೀಡಿದ ಕಲ್ಯಾಣ ಕರ್ನಾಟಕ ಪ್ರದೇಶ, ಕನ್ನಡ ಭಾಷೆಯ ಬೆಳವಣಿಗೆಗೆ ರಾಷ್ಟ್ರಕೂಟರ ಕಾಲದಿಂದ ಚಾಲುಕ್ಯರು, ವಿಜಯ ನಗರದ ಅರಸರು ಸೇರಿದಂತೆ ಅನೇಕ ರಾಜರು, ಅರಸರು ರಾಜಾಶ್ರಯ ನೀಡಿದರು.

ಕಲ್ಯಾಣ ಕರ್ನಾಟಕದಲ್ಲಿ ಬಸವಾದಿ ಶರಣರು ಕನ್ನಡಕ್ಕೆ ಪೋಷಿಸಿ ಬೆಳೆಸಿ, ವಚನ ಸಾಹಿತ್ಯದ ಮುಖಾಂತರ ಕನ್ನಡ ಭಾಷೆಗೆ ಜಾಗತಿಕ ಮಾನ್ಯತೆ ನೀಡಿದರು. ಇಂತಹ ಶ್ರೀಮಂತ ಕನ್ನಡ ಭಾಷೆಯ ಪ್ರದೇಶವಾದ ನಮ್ಮ ಪ್ರದೇಶದಲ್ಲಿ ಕನ್ನಡದ ಶಾಸ್ತ್ರೀಯ ಸ್ಥಾನಮಾನದ ಪ್ರಾದೇಶಿಕ ಕಚೇರಿ ಕಲಬುರಗಿಗೆ ತರಲು ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಸೇರಿದಂತೆ ಪದಾಧಿಕಾರಿಗಳಾದ, ಸುರೇಶ ಬಡಿಗೇರ್, ಶಿವರಾಜ ಅಂಡಗಿ, ಶರಣಕುಮಾರ ಚಪ್ಪರಬಂದಿ, ಆದಿ ಪ್ರಮುಖರು ಇಚ್ಛಾಶಕ್ತಿ ವ್ಯಕ್ತಪಡಿಸಲು ಕಲ್ಯಾಣ ಕರ್ನಾಟಕ ಜನಪರ ಸಂಘ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರು ಆಗ್ರಹಿಸಿದರು.

Contact Your\'s Advertisement; 9902492681

ಕಲ್ಯಾಣ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ವತಿಯಿಂದ ಕಲಬುರಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳಿಗೆ, ಹಮ್ಮಿಕೊಂಡ ಗೌರವ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ದಸ್ತಿಯವರು ಮಾತನಾಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ವಿಜಯಕುಮಾರ ತೇಗಲತಿಪ್ಪಿಯವರು ಚುನಾವಣೆ ಮುಗಿದನಂತರ, ನಾವೆಲ್ಲರೂ ಒಂದೇ ಎಂಬ ಭಾವನೆಗೆ ತಾವು ಬದ್ಧರಾಗಿದ್ದು, ಕನ್ನಡ ಕಟ್ಟಲು ಮತ್ತು ಕನ್ನಡ ಬೆಳೆಸಲು ಎಲ್ಲರ ಸಹಕಾರ ಸಲಹೆಯೊಂದಿಗೆ ತಾವು ಬದ್ಧತೆ ಪ್ರದರ್ಶಿಸುವದಲ್ಲದೆ ಕಲಬುರಗಿ ಜಿಲ್ಲೆಗೆ ಸಂಸ್ಕೃತಿಕ ಜಿಲ್ಲೆಯನ್ನಾಗಿ ಮಾಡಲು ಶ್ರಮಿಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ನೂತನ ಗೌರವ ಕಾರ್ಯದರ್ಶಿಗಳಾದ ಸುರೇಶ ಬಡಿಗೇರರವರು ಮಾತನಾಡಿ ಐತಿಹಾಸಿಕ ನಗರಿಯಾದ ಕಲಬುರಗಿಗೆ ಶಾಸ್ತ್ರೀಯ ಸ್ಥಾನಮಾನದ ಪ್ರಾದೇಶಿಕ ಕಚೇರಿ ತರುವ ನಿಟ್ಟಿನಲ್ಲಿ ನೂತನ ಸಾಹಿತ್ಯ ಪರಿಷತ್ತಿನ ಆಡಳಿತ ಮಂಡಳಿ ಪ್ರಾಮಾಣಿಕ ಪ್ರಯತ್ನ ಮಾಡುವುದಲ್ಲದೆ ಕನ್ನಡ ಭಾಷೆಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು. ಅದರಂತೆ ಜಿಲ್ಲಾಧಿಕಾರಿಗಳು ಸೇರಿದಂತೆ, ಪಾಲಿಕೆಯ ಆಯುಕ್ತರ ಸಂಯೋಗದೊಂದಿಗೆ ಕಾಲಮಿತಿಯಲ್ಲಿ ಮೊದಲನೆಯ ಹಂತವಾಗಿ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಹಾಕಿಸುವ ವಿಷಯದ ಬಗ್ಗೆ ಒತ್ತು ನೀಡಲಾಗುವುದು. ಜೊತೆಗೆ ಎಲ್ಲರ ಸಹಯೋಗ ಸಲಹೆಯೊಂದಿಗೆ ಕನ್ನಡ ಕಟ್ಟಿ ಬೆಳೆಸುವ ವಿನೂತನ ಮಾದರಿಯ ಕಾರ್ಯಕ್ರಮಗಳನ್ನು ಬರುವ ದಿನಗಳಲ್ಲಿ ಹಮ್ಮಿಕೊಳ್ಳಲಾಗುವದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ನೂತನ ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿಯವರು ಉಪಸ್ಥಿತರಿದ್ದರು, ಸಭೆಗೆ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮನೀಷ್ ಜಾಜುರವರು, ನೂತನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಮೇಲೆ ಜನ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇದಕ್ಕೆ ಅವರು ಸಕರಾತ್ಮಕವಾಗಿ ಸ್ಪಂದಿಸಬೇಕೆಂದು ಆಗ್ರಹಿಸಿದರು.

ಶಿಕ್ಷಣ ಪ್ರೇಮಿಗಳು ಮತ್ತು ಮಾಜಿ ಸಿಂಡಿಕೇಟ್ ಸದಸ್ಯರು ಹಾಗೂ ಮಾಜಿ ಜಿ.ಡಿ.ಎ. ಅಧ್ಯಕ್ಷರಾದ ಶ್ಯಾಮರಾವ ಪ್ಯಾಟಿರವರು ಮಾತನಾಡಿ ಕನ್ನಡ ಹುಟ್ಟಿ ಬೆಳೆದಂತಹ ಕಲ್ಯಾಣ ಕರ್ನಾಟಕದ ವಿಭಾಗೀಯ ಕೇಂದ್ರದ ಜಿಲ್ಲೆಯಾದ ಕಲಬುರಗಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿಗೆ  ಆಯ್ಕೆಯಾದ ನೂತನ ಪದಾಧಿಕಾರಿಗಳು ಕಲಬುರಗಿಯಲ್ಲಿ ಶ್ರೀಮಂತ ಇತಿಹಾಸದಿಂದ ಬೆಳೆದ ಕನ್ನಡ ಸಂಸ್ಕೃತಿ ಮತ್ತು ಬಸವಾದಿ ಶರಣರ ವಚನ ಸಾಹಿತ್ಯದ ಗತವೈಭವದ ಮೆರುಗಿಗೆ ಚೈತನ್ಯ ತುಂಬಲು ವಿನೂತನ ಕಾರ್ಯಕ್ರಮಗಳು ನಡೆಸಲು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಶಾಮರಾವ ನಾಟಿಕಾರ, ಸಿದ್ಧಾರೆಡ್ಡಿ ಬಲಕಲ್, ಜ್ಞಾನಮಿತ್ರ ಸ್ಯಾಮ್ಯೂವೆಲ್, ಕಲ್ಯಾಣರಾವ ಪಾಟೀಲ್, ಅಬ್ದುಲ ರಹೀಮ್, ಶಾರಣು ಉದನೂರ, ಶಿವಾನಂದ ಬಿರಾದಾರ, ಶಾಂತಪ್ಪ ಕಾರಭಾಸಗಿ, ಭೀಮರಾಯ ಕಂದಳ್ಳಿ, ಸಂಧ್ಯಾರಾಜ ಸ್ಯಾಮ್ಯೂವೆಲ್, ಅಸ್ಲಂ ಚೌಂಗೆ, ಶಿವಾನಂದ ಕಾಂದೆ, ಶಿವಶರಣ ಬಿರಾದಾರ, ಶ್ರೀಕಾಂತ ಪಾಟೀಲ್, ಕೆ.ಎನ್. ಕುಲಕರ್ಣಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here