- # ಕೆ.ಶಿವು.ಲಕ್ಕಣ್ಣವರ
ನಾನು ಮೊದಲು ಈ ಆಯುರ್ವೇದ ಚಿಕಿತ್ಸೆ ಕೊಡುತ್ತಿರುವ ಆನವಟ್ಟಿಯ ಹತ್ತಿರದ ಒಂದು ಹಳ್ಳಿಯಾದ ಕೋಟಿಪುರದಲ್ಲಿ ನನ್ನ ಕಾಲುಗಳ ನಿಶ್ಯಕ್ತಿಯ ಹಾಗೂ ಮಾನಸಿಕ ವ್ಯಾಧಿಗಾಗಿ ಡಾ.ಮಧುಶ್ರೀ ರಾಗಿಯವರು ಎಂಬ ವೈದ್ಯರ ಬಳಿ ತೋರಿಸಿದೆನು. ಅವರು ನನಗೆ ಚಿಕಿತ್ಸೆಯನ್ನು ಕೊಟ್ಟರು. ಅಲ್ಲದೇ ಔಷಧಗಳನ್ನೂ ಬಳಸಲು ಕೊಟ್ಟರು. ಈಗ ನನ್ನ ಕಾಲುಗಳಲ್ಲಿ ಒಂದಿಷ್ಟು ಶಕ್ತಿ ಬಂದಿದೆ. ಅಲ್ಲದೇ ನನಗೆ ಮೊದಲಿನಂತೆ ಓಡಾಡಲು ಸಾಧ್ಯವಾಗಿದೆ.
ನಾನಷ್ಟೇ ಅಲ್ಲ, ನನ್ನಂತೆ ಹಾವೇರಿ ಜಿಲ್ಲೆಯ ಹಾವೇರಿ ತಾಲೂಕಿನ ಕಬ್ಬೂರ ಗ್ರಾಮದ ಆ ಮುತ್ತಣ್ಣ ಜಾಲಿಹಾಳ, ಮತ್ತು ಬಾರ್ಕಿ ಷಣ್ಮಖಪ್ಪನಿಗೆ, ಹೀಗೆಯೇ ಅತನ ಖಾಯಿಲೆಯೂ ವಾಸಿಯಾಗಿದೆ.ನಿಜ ಹೇಳಬೇಕೆಂದರೆ ನಾನು ಬಾರ್ಕಿ ಷಣ್ಮುಖನಿಂದ ಪ್ರೇರಣೆ ಪಡೆದು ಮಧುಶ್ರೀ ರಾಗಿಯವರ ಬಳಿ ಹೋದವನು. ಅಂತೆಯೇ ಹೀಗೆಯೇ ಹತ್ತಾರು ಜನರಿಗೆ ಈ ಡಾ.ಮಧುಶ್ರೀ ರಾಗಿಯವರು ಚಿಕಿತ್ಸೆಯನ್ನು ಕೊಟ್ಟರು ಮತ್ತು ಕೊಡುತ್ತಿದ್ದಾರೆ ಕೂಡ. ಈ ಡಾ.ಮಧುಶ್ರೀ ರಾಗಿಯವರ ವಿಶೇಷ ಆಯುರ್ವೇದದ ಪಂಚಕರ್ಮ ಚಿಕಿತ್ಸೆಗೆ ಬಹಳ ದುಬಾರಿಯೇನೂ ಇಲ್ಲ. ಎಲ್ಲಾ ಬಡವರಿಗೂ ನಿಲುಕುವಂತಹ ಆಯುರ್ವೇದ ಚಿಕಿತ್ಸೆ ಇವರದು. ಹೀಗೆಯೇ ನಿತ್ಯ ನೂರಾರು ಜನರಿಗೆ ನೆರವಾಗುತ್ತಿದ್ದಾರೆ ಡಾ.ಮಧುಶ್ರೀ ರಾಗಿಯವರು ತಮ್ಮ ಆಯುರ್ವೇದ ಚಿಕಿತ್ಸೆಯಿಂದ..!
ಅಂತೆಯೇ ಈಗ ಆಯುರ್ವೇದ ಔಷಧಿಗಳ ಚಿಕಿತ್ಸೆಯಿಂದ ಈಗ ಮತ್ತೊಂದು ಪವಾಡ ಸದೃಶ ಚಿಕಿತ್ಸೆಯನ್ನು ಕೊಡುತ್ತಿದ್ದಾರೆ. ಅ ಕಥೆಯು ಹೀಗಿದೆ ನೋಡಿ..! ಆ ಕಥೆವೂ ಹೀಗಿದೆ ನೋಡಿ: ಮಗು ಶ್ರೀಲತಾ ( ಬೇಬಿ ) ‘ಎನ್ಸೇ ಫಾಲೋಫತಿ’ ಎಂಬ ಖಾಯಿಲೆಯಿಂದ ಬಳಲುತ್ತಿದ್ದಾಳೆ. ಆಗ ಮಗುವಿನ ತಂದೆ, ತಾಯಿ ಡಾ.ಮಧುಶ್ರೀ ರಾಗಿಯವರನ್ನು ಭೇಟಿ ಆಗಿ, ನಮ್ಮ ಮಗುವನ್ನು ರಕ್ಷಿಸಿ ಕೊಡಿರಿ ಎಂದು ಭೇಡಿದರು.
ಆಗ ಡಾ.ಮಧುಶ್ರೀ ರಾಗಿಯವರು ‘ಅತಿಮಾನುಷ’ವಾಗಿ ಆ ಮಗುವಿನ ತಂದೆ, ತಾಯಿಗೆ ಧೈರ್ಯ ತುಂಬುತ್ತಾರೆ. ನೀವೇನೂ ಹೆದರಬೇಡಿ, ಧೈರ್ಯದಿಂದ ಇರಿ, ನಿಮ್ಮ ಮಗು ಶ್ರೀಲತಾಳನ್ನು ಗುಣಪಡಿಸುವುದು ನನ್ನ ಜವಾಬ್ದಾರಿ ಎಂದು ಹೇಳುತ್ತಾರೆ ಡಾ.ಮಧುಶ್ರೀ ರಾಗಿಯವರು. ‘ಎನ್ಸೇ ಫಾಲೋಫತಿ’ ಖಾಯಿಲೆ ಎಂದರೆ ಮಿದುಳಿಗೆ ಹಾನಿ ಉಂಟು ಮಾಡುವ ಖಾಯಿಲೆಯಾಗಿದೆ. ಈ ಖಾಯಿಲೆಯಿಂದ ಬಳಲುತ್ತಿದ್ದ ಮಗು ಶ್ರೀಲತಾ 1 ವರ್ಷ, 4 ತಿಂಗಳಾದರೂ ಅನ್ಯ ಮಕ್ಕಳಂತೆ ಕುಳಿತುಕೊಳ್ಳಲಾರಳು. ಈ ಖಾಯಿಲೆಯಿಂದ ಕತ್ತಿನಲ್ಲಿ ಶಕ್ತಿ ಬೇರೆ ಇಲ್ಲ. ಅಲ್ಲದೇ ಆಗಾಗ ಈ ಶ್ರೀಲತಾಗೆ ಫೀಡ್ಸ್ ಬೇರೆ ಕಾಣಿಸಿಕೊಳ್ಳುತ್ತಿತ್ತು.
ಆಗ ತಂದೆ ಮತ್ತು ತಾಯಿ ಗಾಬರಿಯಾಗಿ ಯಾರದೋ ಮಾತಿನಿಂದ ಇದೂ ಒಂದು ಪ್ರಯೋಗವಿರಲಿ ಎಂದು ಡಾ.ಮಧುಶ್ರೀ ರಾಗಿಯವರ ಹತ್ತಿರ ಬರುತ್ತಾರೆ. ತಂದೆ ಮತ್ತು ತಾಯಿಗಳಿಬ್ಬರೂ ಮಗು ಶ್ರೀಲತಾಳನ್ನು ಹೊತ್ತುಕೊಂಡು ತಿರುಗಿದ ಪ್ರತಿಷ್ಠಿತ ದವಾಖಾನೆ ಉಳಿದಿಲ್ಲ. ಆ ದವಾಖಾನೆಗಳಿಂದ ಮಗುವಿನ ಈ ರೋಗವನ್ನು ಗುಣಪಡಿಸಲು ಆಗಲಿಲ್ಲ. ಎಂತಹ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದ ವೈದ್ಯರಿಂದಲೂ ಆ ಮಗು ಶ್ರೀಲತಾಳ ವ್ಯಾಧಿಯನ್ನು ಗುಣಪಡಿಸಲು ಸಾಧ್ಯವಾಗಲಿಲ್ಲ.
ಆಗಲೇ ಆ ಮಗುವಿನ ತಂದೆ ಮತ್ತು ತಾಯಿ ಆಯುರ್ವೇದ ವೈದ್ಯರಾದ ಮಧುಶ್ರೀ ರಾಗಿ ಅವರ ಹತ್ತಿರ ಬಂದು ದಯವಿಟ್ಟು ನಮ್ಮ ಮಗುವನ್ನು ಹೇಗಾದರೂ ಮಾಡಿ ಉಳಿಸಿಕೊಡಿಯೆಂದು ಬೇಡಿಕೊಳ್ಳುತ್ತಾರೆ. ಆಗ ಡಾ.ಮಧುಶ್ರೀ ರಾಗಿ ಅವರು ಮೊದಲು ಆ ತಂದೆ ಮತ್ತು ತಾಯಿಗೆ ಧೈರ್ಯ ತುಂಬುತ್ತಾರೆ, ನಿಮ್ಮ ಮಗು ಶ್ರೀಲತಾಳನ್ನು ಉಳಿಸಿಕೊಡುವ ಜವಾಬ್ದಾರಿ ನನ್ನದು. ನೀವು ಮೊದಲು ಧೈರ್ಯದಿಂದಿರಿ ಎಂದು ಡಾ.ಮಧುಶ್ರೀ ರಾಗಿ ಅವರು ಆ ಮಗು ಶ್ರೀಲತಾಳ ತಂದೆ ಮತ್ತು ತಾಯಿಗೆ ಧೈರ್ಯ ತುಂಬುತ್ತಾರೆ.
ಅಲ್ಲಿಂದಲೇ ಆ ಮಗು ಶ್ರೀಲತಾಳಿಗೆ ಆಯುರ್ವೇದ ಚಿಕಿತ್ಸೆಯನ್ನು ಕೊಡಲು ಶುರು ಮಾಡುತ್ತಾರೆ ಡಾ.ಮಧುಶ್ರೀ ರಾಗಿಯವರು. ಮೊದಲ ಹಂತದಲ್ಲಿ, ‘ಅನುವಾಸನ ಬಸ್ತಿ’ ( oil enema ) ಸರ್ವಾಂಗ ಅಬ್ಯಂಗ ಪರಿಷೇಕ ಸ್ವೇದ ಚಿಕಿತ್ಸೆಯನ್ನು ನೀಡಲಾಗುತ್ತದೆ. ಎರಡನೇ ಹಂತದಲ್ಲಿ ಡಾ.ಮಧುಶ್ರೀ ರಾಗಿಯವರು. ಷಷ್ಟಿಕ ಶಾಲಿ ಪಿಂಡ ಸ್ವೇಧ ಸರ್ವಾಂಗ ಅಬ್ಯಂಜನ ಹಾಗೂ ತಿಕ್ತ ಕ್ಷೀರ ಬಸ್ತಿಯನ್ನು ಕೊಡಲಾಯಿತು.
ಪೌಷ್ಟಿಕಶಾಲಿ ಪಿಂಡ ಸ್ವೇಧ ಎಂದರೆ ಕೆಂಪು ಅಕ್ಕಿಯನ್ನು ಬಲಮೂಲ ಎಂಬ ಔಷಧಿಯನ್ನು ಕ್ಷೀರ ಪಾಕ ( ಹಾಲನ್ನು ಬಳಸಿ ಮಾಡುವುದು ) ದಲ್ಲಿ ಬೇಯಿಸಿ ತಯ್ಯಾರಿಸಿದ ಪೊಟ್ಟಲಿನ್ನು ಉಪಯೋಗಿಸಿ ಸ್ವೇಧನ ಕರ್ಮ ಮಾಡುವುದು. ತಿಕ್ತ ಕ್ಷೀರ ಭಸ್ತಿಯಲ್ಲಿ ಐದು ( ತಿಕ್ತ ರಸಯುಕ್ತ ಔಷಧಿ ದ್ರವ್ಯಗಳನ್ನು ಬಳಸಿ ತಯಾರಿಸಿದ ತುಪ್ಪ ). ತೀಕ್ಷಕ ಘೃತ ತಿಕ್ಷ ರಸಯುಕ್ತ ಔಷಧಿ ತಯ್ಯಾರಿಸಿದ ತುಪ್ಪ, ಕ್ಷೀರ ( ಹಾಲು ) ಬಳಸಿ ತಯ್ಯಾರಿಸಲಾಗುತ್ತದೆ.
ಕ್ಷೀರ ಇದನ್ನು ಗುದದಿಂದ ಪ್ರಯೋಗ ಮಾಡಲಾಗುತ್ತದೆ. ಆ ಮಗು ಶ್ರೀಲತಾಳಿಗೆ ಅಬ್ಯಂಗ ( Body massage ) ವನ್ನು ಮಹಾ ನಾರಾಯಣ ತೈಲದಿಂದ ಮಾಡಿಲಾಯಿತು ಎನ್ನುತ್ತಾರೆ ವೈಧ್ಯ ಮಧುಶ್ರೀ ರಾಗಿಯವರು. ಈ ಚಿಕಿತ್ಸೆಯಿಂದ ಸ್ಪಂದಿಸಿದ ಮಗು ಶ್ರೀಲತಾಳಲ್ಲಿ ಸಾಕಷ್ಟು ಬದಲಾವಣೆ ಕಾಣತೊಡಗಿದವು..! ಇದರಿಂದ ವೈದ್ಯರಾದ ಮಧುಶ್ರೀ ರಾಗಿಯವರು ಬಹಳ ಸಂತೋಷಗೊಂಡರು. ಅಲ್ಲದೇ ಮಗು ಶ್ರೀಲತಾಳ ತಂದೆ ಮತ್ತು ತಾಯಿಯವರ ಸಂತೋಷಕ್ಕೆ ಮಿತಿಯೇ ಇರಲಿಲ್ಲ..!
ಅಂದ ಹಾಗೆ ಈ ಮಧುಶ್ರೀ ರಾಗಿಯವರ ಫೋನ್ ನಂಬರ್ ಇಂತಿದೆ 6361321848.