ಕಲಬುರಗಿ: ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರಗಿ ಹಾಗೂ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಪದವಿ ಮಹಾವಿದ್ಯಾಲಯದ ಕನ್ನಡ ಭಾಷೆ ಮತ್ತು ಸಾಹಿತ್ಯ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಓದು ಅಭಿಯಾನದ ಅಡಿಯಲ್ಲಿ ಆಶುಭಾಷಣ,ರಸ ಪ್ರಶ್ನೆ,ಪ್ರಬಂಧ ಸ್ಪರ್ಧೆ ಮತ್ತು ಕವನ ವಾಚನ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ದತ್ತಪ್ಪ ಸಾಗನೂರ ಆಗಮಿಸಿ ವಿದ್ಯಾರ್ಥಿಗಳನ್ನು ಕುರಿತು ಕನ್ನಡ ಮತ್ತು ಸಂಸ್ಕೃತಿಯ ಇಲಾಖೆಯ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು ಕುಮಾರಿ ಶಿಲ್ಪಾ ಪ್ರಾರ್ಥನಾ ಗೀತೆ ಹಾಡಿದರು, ಡಾ.ಶಿವಗಂಗಾ ಬಿಲಗುಂದಿ ನಿರೂಪಿಸಿದರು.
ಪ್ರಾಧ್ಯಾಪಕರಾದ ಡಾ. ಶಾಂತಾ ಮಠ ಸ್ವಾಗತಿಸಿದರು,ಕನ್ನಡ ಭಾಷೆ ಮತ್ತು ಸಾಹಿತ್ಯ ವಿಭಾಗದ ಅಧ್ಯಕ್ಷರಾದ ಡಾ.ನಾಗೇಂದ್ರ ಮಸೂತಿಯವರು ಪ್ರಾಸ್ತಾವಿಕ ಮಾತನಾಡಿದರು,ಲೇಖಕಿ ಡಾ.ಮೀನಾಕ್ಷಿ ಬಾಳಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಓದು,ಬರಹ , ಜೀವನ ಹಾಗೂ ಸಮಾಜ ಸೇವೆ ಕುರಿತು ವಿಷಯ ಮಂಡನೆ ಮಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ.ರಾಜೇಂದ್ರ ಕೊಂಡಾ ಅಧ್ಯಕ್ಷೀಯ ಭಾಷಣದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಅವರ ವಿಚಾರಗಳನ್ನು ನೆನೆಸಿಕೊಂಡು ಮಾತನಾಡಿದರು.
ನಂತರ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿ ಗೆಲುವು ಸಾಧಿಸಿದವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು. ಡಾ. ವಿಜಯಕುಮಾರ ಪರುತೆ,ಡಾ ಮಹೇಶಕುಮಾರ ಗಂವ್ಹಾರ,ಡಾ.ಶರಣಮ್ಮ ಕುಪ್ಪಿ ,ಪ್ರೋ.ಶಿವಲೀಲಾ ಧೋತ್ರೆ, ಸುಷ್ಮಾ ಕುಲಕರ್ಣಿ, ಕವಿತಾ ಠಾಕೂರ ಹಾಗೂ ಶ್ರೀಮತಿ ಚೆನ್ನಮ್ಮ ಭಾಗವಹಿಸಿದ್ದರು. ಡಾ.ಶಿವಗಂಗಾ ಬಿಲಗುಂದಿಯವರು ವಂದಿಸಿದರು.