ದೂರು ನೀಡಲು ಬಂದ ಮಹಿಳೆಯ ಜೊತೆಗೆ ಅಸಭ್ಯ ವರ್ತನೆ: ಸಿಪಿಐ ಅಮಾನತು

0
23

ಹಾವೇರಿ: ಮಹಿಳಾ ಠಾಣೆಗೆ ದೂರು ನೀಡಲು ಬಂದ ಮಹಿಳೆಯರ ಜೊತೆ ಅಸಭ್ಯ ವರ್ತನೆ ಮಾಡುತ್ತಿದ್ದ ಆರೋಪದ ಮೇಲೆ ಸಿಪಿಐ ಚಿದಾನಂದ ಎಂಬವವರನ್ನು ಅಮಾನತು ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಮಹಿಳೆಯರ ಜೊತೆ ರಹಸ್ಯವಾಗಿ ವಿಡಿಯೋ ಕಾಲ್​ನಲ್ಲಿ ಮಾತಾಡಿ,ಕೈ ಸನ್ನೆ ಮಾಡುವಂತಹ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.

ಕೆಲ ದಿನಗಳ ಹಿಂದೆ ಮಹಿಳೆಯೋರ್ವರು ‌ಸಿ.ಪಿ ಐ ಚಿದಾನಂದ ಅವರ ವಿರುದ್ಧ ದಾವಣಗೆರೆ ಐಜಿಪಿಯವರಿಗೆ ದೂರು ನೀಡಿದ್ದರು. 2016ರಲ್ಲಿ ಮಹಿಳೆ ತಮ್ಮ ಪುತ್ರ ನಾಪತ್ತೆಯಾಗಿರುವ ಕುರಿತು ದೂರು ನೀಡಲು ಬ್ಯಾಡಗಿ ಠಾಣೆಗೆ ಹೋಗಿದ್ದರು. ಈ ವೇಳೆ ಚಿದಾನಂದ, ನೀನು ಗಂಡ ಬಿಟ್ಟವಳು, ನಾನು ನಿನಗೆ ಸಹಾಯ ಮಾಡುತ್ತೇನೆ ಅಂತಾ ನಂಬಿಸಿ ಮನೆಗೆ ಕರೆದು ಸಹಕರಿಸುವಂತೆ ಬಲವಂತ ಮಾಡಿದ್ದಾನೆ. ಆದರೆ ನಾನು ಒಪ್ಪಿಕೊಳ್ಳಲಿಲ್ಲ. ಈಗ ಮಗಳ ಲವ್​ ಕೇಸ್ ಮುಂದಿಟ್ಟುಕೊಂಡು ಮತ್ತೆ ಆಟ ಆಡುತ್ತಿದ್ದಾನೆ. ನನ್ನ ಮಗಳನ್ನೇ ಎತ್ತಿ ಕಟ್ಟಿ ನನ್ನ ವಿರುದ್ಧ ದೂರು ಕೊಡಿಸಿದ್ದಾರೆಂದು ದೂರು ನೀಡಿದ್ದಾರೆ.

Contact Your\'s Advertisement; 9902492681

ಸದ್ಯ ಸಿ.ಪಿ ಐ ಚಿದಾನಂದ ಮಹಿಳೆಯರ ಜೊತೆ ಅನುಚಿತವಾಗಿ ಮಾತಾಡಿರೋ ವಿಡಿಯೋ, ಆಡಿಯೋಗಳು ಹಾವೇರಿ ಜಿಲ್ಲೆಯಾದ್ಯಂತ ಹರಿದಾಡ್ತಿದೆ. ಈ ಬಗ್ಗೆ ಸತ್ಯಾಸತ್ಯತೆ ಎನು ಎಂಬುದರ ಬಗ್ಗೆ ವರದಿ ನೀಡುವಂತೆ ದಾವಣಗೆರೆ ಐಜಿಪಿ ಹಾವೇರಿ ಎಸ್​ಪಿ ಕಚೇರಿಗೆ ಸೂಚನೆ ನೀಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here