ಕಲಬುರಗಿಯ ಸೈಕ್ಲಿಂಗ್ ಕ್ಲಬ್ ಸದಸ್ಯರು ವಾರಕ್ಕೊಮ್ಮೆ ಸೈಕ್ಲಿಂಗ್ ಜಾಥ ನಡೆಸುತ್ತಿದು ಚಳಿಗಾಲದಲ್ಲಿ ದೇಹದ ಆರೋಗ್ಯಕ್ಕೆ ಒತ್ತು ನೀಡಲು ಕಲಬುರಗಿ ಜಿಲ್ಲೆಯಲ್ಲಿ ಬೆಳೆದ ಸಿರಿದಾನ್ಯ ಉತ್ಪನ್ನ ಕುರಿತು ಮಾಹಿತಿಗಾಗಿ ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಗೆ ಭೇಟಿ ನೀಡಿದರು.
ಜಿಲ್ಲೆಯ ಪ್ರಮುಖ ವೈದ್ಯರು, ವಕೀಲರು, ವಿಜ್ಞಾನಿಗಳು, ವಿವಿಧ ಇಲಾಖೆಯ ೩೫ ಸದಸ್ಯರು ಸೈಕ್ಲಿಂಗ ರೇಸನಲ್ಲಿ ಭಾಗವಹಿಸಿದರು. ಆಜಾದೀ ಕ ಅಮೃತ ಮಹೋತ್ಸವ ಪ್ರಯುಕ್ತ ಜನತೆಗೆ ಸಿರಿದಾನ್ಯಗಳಾದ ಬರಗು, ನವಣೆ, ರಾಗಿ, ಸಜ್ಜೆ, ಉದಲು, ಹಾರಕ, ಸಾವೆಯ ಉಪಯೋಗಗಳು ಅವುಗಳಲ್ಲಿನ ಪೋಷಕಾಂಶಗಳಾದ ಕಬ್ಬಿಣ, ಸುಣ್ಣ, ಖನಿಜ, ನಾರಿನಂಶ, ಪ್ರೋಟಿನ ಮಾಹಿತಿ ನೀಡಲಾಯಿತು.
ಡಯಾಬಿಟಿಸ್ ಕ್ಯಾನ್ಸರ್,ರಕ್ತದೊತ್ತಡ, ಅಸ್ತಮ, ಹೃದಯ, ಕಿಡ್ನಿ, ಲೀವರ ಆರೋಗ್ಯ ವೃದ್ದಿಗೆ ಸಿರಿದಾನ್ಯ ಪಾತ್ರ ಪ್ರಮುಖವಾಗಿದೆ. ಹೈದ್ರಾಬಾದ್‌ನಲ್ಲಿರುವ ಭಾರತೀಯ ಸಿರಿದಾನ್ಯ ಸಂಶೋಧನಾ ಈ ಸಿರಿದಾನ್ಯ ವಿಜ್ಞಾನಕ್ಕೆ ಪ್ರೋತ್ಸಾಹ ನೀಡುತ್ತಿದೆ. ಐಸಿಎಆರ್-ಕೃಷಿ ವಿಜ್ಞಾನಕೇಂದ್ರದ ಮುಖ್ಯಸ್ಥರಾದ ಡಾ.ರಾಜು ಜಿ. ತೆಗ್ಗಳ್ಳಿರವರು ಸಿರಿದಾನ್ಯ ತಾಂತ್ರಿಕತೆಯ ಮಹತ್ವ ವಿವರಿಸಿದರು.