ಹಾವೇರಿ: ಮಹಿಳಾ ಠಾಣೆಗೆ ದೂರು ನೀಡಲು ಬಂದ ಮಹಿಳೆಯರ ಜೊತೆ ಅಸಭ್ಯ ವರ್ತನೆ ಮಾಡುತ್ತಿದ್ದ ಆರೋಪದ ಮೇಲೆ ಸಿಪಿಐ ಚಿದಾನಂದ ಎಂಬವವರನ್ನು ಅಮಾನತು ಮಾಡಿದ ಘಟನೆ ಹಾವೇರಿಯಲ್ಲಿ ನಡೆದಿದೆ. ಮಹಿಳೆಯರ ಜೊತೆ ರಹಸ್ಯವಾಗಿ ವಿಡಿಯೋ ಕಾಲ್ನಲ್ಲಿ ಮಾತಾಡಿ,ಕೈ ಸನ್ನೆ ಮಾಡುವಂತಹ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.
ಕೆಲ ದಿನಗಳ ಹಿಂದೆ ಮಹಿಳೆಯೋರ್ವರು ಸಿ.ಪಿ ಐ ಚಿದಾನಂದ ಅವರ ವಿರುದ್ಧ ದಾವಣಗೆರೆ ಐಜಿಪಿಯವರಿಗೆ ದೂರು ನೀಡಿದ್ದರು. 2016ರಲ್ಲಿ ಮಹಿಳೆ ತಮ್ಮ ಪುತ್ರ ನಾಪತ್ತೆಯಾಗಿರುವ ಕುರಿತು ದೂರು ನೀಡಲು ಬ್ಯಾಡಗಿ ಠಾಣೆಗೆ ಹೋಗಿದ್ದರು. ಈ ವೇಳೆ ಚಿದಾನಂದ, ನೀನು ಗಂಡ ಬಿಟ್ಟವಳು, ನಾನು ನಿನಗೆ ಸಹಾಯ ಮಾಡುತ್ತೇನೆ ಅಂತಾ ನಂಬಿಸಿ ಮನೆಗೆ ಕರೆದು ಸಹಕರಿಸುವಂತೆ ಬಲವಂತ ಮಾಡಿದ್ದಾನೆ. ಆದರೆ ನಾನು ಒಪ್ಪಿಕೊಳ್ಳಲಿಲ್ಲ. ಈಗ ಮಗಳ ಲವ್ ಕೇಸ್ ಮುಂದಿಟ್ಟುಕೊಂಡು ಮತ್ತೆ ಆಟ ಆಡುತ್ತಿದ್ದಾನೆ. ನನ್ನ ಮಗಳನ್ನೇ ಎತ್ತಿ ಕಟ್ಟಿ ನನ್ನ ವಿರುದ್ಧ ದೂರು ಕೊಡಿಸಿದ್ದಾರೆಂದು ದೂರು ನೀಡಿದ್ದಾರೆ.
ಸದ್ಯ ಸಿ.ಪಿ ಐ ಚಿದಾನಂದ ಮಹಿಳೆಯರ ಜೊತೆ ಅನುಚಿತವಾಗಿ ಮಾತಾಡಿರೋ ವಿಡಿಯೋ, ಆಡಿಯೋಗಳು ಹಾವೇರಿ ಜಿಲ್ಲೆಯಾದ್ಯಂತ ಹರಿದಾಡ್ತಿದೆ. ಈ ಬಗ್ಗೆ ಸತ್ಯಾಸತ್ಯತೆ ಎನು ಎಂಬುದರ ಬಗ್ಗೆ ವರದಿ ನೀಡುವಂತೆ ದಾವಣಗೆರೆ ಐಜಿಪಿ ಹಾವೇರಿ ಎಸ್ಪಿ ಕಚೇರಿಗೆ ಸೂಚನೆ ನೀಡಿದ್ದಾರೆ.