ಕನ್ನಡ ಸಾಹಿತ್ಯ ಪರಿಷತ್ತಿ: ವಿವಿಧ ಘಟಕಗಳಿಗೆ ನೂತನ ಅಧ್ಯಕ್ಷರ ನೇಮಕ

0
43

ಕಲಬುರಗಿ: ಕನ್ನಡಿಗರ ಪ್ರಾದಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲೆಯ ವಿವಿಧ ಘಟಕಗಳಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿ ಪರಿಷತ್ತಿನ ಇನ್ನೂ ಹೆಚ್ಚಿನ ಚಟುವಟಿಕೆಗಳಿಗೆ ಚಾಲನೆ ನೀಡಿದರು.

ಒಟ್ಟು ಹದಿಮೂರು ಘಟಕಗಳಲ್ಲಿ ಸಾಮಾಜಿಕ ನ್ಯಾಯಬದ್ಧವಾಗಿ ಇದೇ ಮೊದಲ ಬಾರಿಗೆ ಇಬ್ಬರು ಮಹಿಳೆಯರನ್ನು ನೇಮಕ ಮಾಡಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವಿಶೇಷವಾದ ಕಾಳಜಿಪೂರ್ವಕವಾದ ಕಾರ್ಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ ಒಂದು ಸರಸ್ವತಿ ಮಂದಿರವಾಗಿದ್ದು, ಇದನ್ನು ಅಪವಿತ್ರಗೊಳಿಸುವ ಕೆಲಸ ಯಾರಿಂದಲೂ ಆಗಬಾರದು. ಈ ಸಂಸ್ಥೆ ಕನ್ನಡಿಗರೆಲ್ಲರ ಸ್ವತ್ತು. ಹಾಗಾಗಿ ಪರಿಷತ್ತಿನ ಆಶಯ ಮತ್ತು ಘನತೆಯನ್ನು ಹೆಚ್ಚಿಸುವ ಕೆಲಸ ಮಾಡಲು ಹೊಸದಾಗಿ ಆಯ್ಕೆಯಾದ ಸರ್ವ ಅಧ್ಯಕ್ಷರಿಗೆ ಸೂಚಿಸಲಾಗಿದೆ.

Contact Your\'s Advertisement; 9902492681

ಅಧ್ಯಕ್ಷರಾಗಿ ನೇಮಕಗೊಂಡವರು ಅತ್ಯಂತ ಜನಪರ, ಕನ್ನಡಪರ, ಕ್ರಿಯಾತ್ಮಕ ಪಾರದರ್ಶಕ ಹಾಗೂ ರಚನಾತ್ಮಕ ಕಾರ್ಯಕ್ರಮಗಳನ್ನು ಸಂಘಟಿಸಿ ತಾಲೂಕು ಹಾಗೂ ಹೋಬಳಿ ಕೇಂದ್ರಗಳಲ್ಲೂ ಪರಿಷತ್ತನ್ನು ಬಲಪಡಿಸಲು ಕೋರಲಾಗಿದೆ. ಕನ್ನಡ ಭವನಕ್ಕೆ ಬೇಕಾದ ನಿವೇಶನಕ್ಕೆ ಮತ್ತು ಕಟ್ಟಡ ಕಾಮಗಾರಿಗಾಗಿ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ವ್ಯವಸ್ಥೆ ಮಾಡಿಕೊಳ್ಳಲು ಶ್ರಮಿಸಬೇಕೆಂದು ಸೂಚಿಸಲಾಗಿದೆ.

ಕವಿರಾಜಮಾರ್ಗದ ನೆಲವಾದ ಸೇಡಂ ತಾಲೂಕಿಗೆ ಶಿಕ್ಷಕಿ-ಸಂಘಟಕಿ ಸುಮಾ ಎಲ್.ಚಿಮ್ಮನಚೋಡಕರ್, ಕಲಬುರಗಿ ದಕ್ಷಿಣ ಘಟಕಕ್ಕೆ ಧಾರ್ಮಿಕ ಚಿಂತಕಿ ಜ್ಯೋತಿ ರವಿ ಲಾತೂರಕರ್ ಅವರನ್ನು ನೇಮಕ ಮಾಡುವ ಮೂಲಕ ಇದೇ ಮೊದಲ ಬಾರಿ ಇಬ್ಬರು ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ.

ಉಳಿದಂತೆ ಕಲಬುರಗಿ ಉತ್ತರ ಮತಕ್ಷೇತ್ರಕ್ಕೆ ಶಿಕ್ಷಕ-ಕವಿ ಪ್ರಭುಲಿಂಗ ಮೂಲಗೆ, ಕಾಳಗಿ ತಾಲೂಕಿಗೆ ಆರೋಗ್ಯ ಇಲಾಖೆಯ ಸಂತೋಷ ಕುಡಳ್ಳಿ, ಚಿಂಚೋಳಿಗೆ ಸಾಮಾಜಿಕ ಸಂಘಟಕ ಸುರೇಶ ದೇಶಪಾಂಡೆ, ಕಲಬುರಗಿ ತಾಲೂಕಿಗೆ ಪತ್ರಕರ್ತ ಗುರುಬಸಪ್ಪ ಸಜ್ಜನಶೆಟ್ಟಿ ಹೊನ್ನಕಿರಣಗಿ, ಆಳಂದಗೆ ಉಪನ್ಯಾಸಕ-ಪತ್ರಕರ್ತ ಹಣಮಂತ ಶೇರಿ ಖಜೂರಿ, ಅಫಜಲಪೂರಗೆ ಶಿಕ್ಷಕ ಪ್ರಭು ಫುಲಾರಿ, ಜೇವರ್ಗಿಗೆ ಶರಣ ಸಾಹಿತಿ ಎಸ್.ಕೆ.ಬಿರಾದಾರ, ಯಡ್ರಾಮಿಗೆ ನಾಗಪ್ಪ ಸಜ್ಜನ್ ಯಲಗೋಡ, ಚಿತ್ತಾಪೂರಗೆ ಹಿರಿಯ ಪತ್ರಕರ್ತ ವೀರೇಂದ್ರ ಕೊಲ್ಲೂರ, ಶಹಾಬಾದಗೆ ಶರಣಬಸಪ್ಪ ಕೋಬಾಳ, ಕಮಲಾಪುರಗೆ ಸಂಘಟಕ ರಾಮಕೃಷ್ಣ ಖಡಕೆ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಗೌರವ ಕಾರ್ಯದರ್ಶಿಗಳಾದ ಸುರೇಶ ಬಡಿಗೇರ, ಶಿವರಾಜ್ ಅಂಡಗಿ, ಗೌರವ ಕೋಶಾಧ್ಯಕ್ಷ ಡಾ.ಶರಣರಾಜ್ ಛಪ್ಪರಬಂದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿರಿಯ ಹಾಗೂ ಯುವಕರು ಸೇರಿದಂತೆ ಮಹಿಳೆಯರಿಗೆ ಪರಿಷತ್ತಿನಡಿಯಲ್ಲಿ ಆದ್ಯತೆ ನೀಡುವ ಮೂಲಕ ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ನೇತೃತ್ವದಲ್ಲಿ ಮುಂದಿನ ಐದು ವರ್ಷಗಳ ಅವಧಿಗೆ ಉತ್ತಮ ಕಾರ್ಯಕ್ರಮಗಳ ಆಯೋಜನೆಗೆ ಚಾಲನೆ ನೀಡಿದಂತಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here