ಯಾದಗಿರಿ; ದಲಿತರ ಮೇಲೆ ನಡೆಯುವ ದೌರ್ಜನ್ಯಗಳ ಕುರಿತು ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲಿ ಪೊಲೀಸ್ ಠಾಣೆಗಳಲ್ಲಿ ತಿಂಗಳ ಎರಡನೇ ರವಿವಾರ ಸಭೆ ನಡೆಸುವಂತೆ ಸುಪ್ರಿಂಕೋರ್ಟ ಸೂಚಿಸಿದಂತೆ ದಲಿತರ ದಿನಾಚರಣೆ ಮಾಡಲು ಕ್ರಮ ಕೈಗೊಳ್ಳುವಂತೆ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಆಗ್ರಹಿಸಿದೆ.
ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಸೇನೆ ಜಿಲ್ಲಾ ಕಾರ್ಯಕರ್ತರು ಈ ಕುರಿತು ಸುಪ್ರಿಂಕೋರ್ಟ ಆದೇಶವಾಗಿ ಒಂದು ವರ್ಷವೇ ಆಗಿದ್ದರೂ ಎಲ್ಲ ಠಾಣೆಗಳಲ್ಲಿ ದಲಿತರ ದಿನಾಚರಣೆ ಮಾಡುತ್ತಿಲ್ಲ. ಕೆಲವು ಠಾಣೆಗಳಲಿ ಮಾತ್ರ ನಡೆಸಲಾಗುತ್ತಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಕಾಶಿನಾಥ ನಾಟೇಕರ್ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಹುಣಸಗಿ ತಾಲೂಕು ಅಧ್ಯಕ್ಷ ಜುಮ್ಮಣ್ಣ, ವಡಗೇರಾ ತಾಲೂಕು ಅಧ್ಯಕ್ಷ ಗುರುನಾಥ ನಾಟೇಕರ್, ವಡಗೇರಾ ತಾಲ್ಲೂಕು ಕರವೇ ಅಧ್ಯಕ್ಷ ಫಕೀರ್ ಅಹ್ಮದ್ ಮರಡಿ, ಎಎಸ್‌ಎಸ್ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ಬಂದಪ್ಪ ಬಾಚವಾರ, ಸಂತೋಷ ನಾಟೇಕರ್ ಇನ್ನಿತರರು ಉಪಸ್ಥಿತರಿದ್ದರು.