ಯಾದಗಿರಿ: ಸುರಪೂರ ತಾಲ್ಲೂಕಿನ ಯಕ್ತಾಪೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರಿಗೆ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆಯಡಿ ಸೌಲಭ್ಯ ದೊರಕದ ರೈತರಿಗೆ ತಕ್ಷಣ ಪರಿಹಾರ ಒದಗಿಸಿಕೊಡಲು ೧೦ ದಿನಗಳಲ್ಲಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ಕೆಂಭಾವಿ ಹೋಬಳಿ ಘಟಕ ಆಗ್ರಹಿಸಿದೆ.
ಈ ಕುರಿತು ಜಿಲ್ಲಾಧಿಕಾರಿಗಳಿಗೆ ಹಾಗೂ ಜಂಟಿ ಕೃಷಿ ನಿರ್ದೇಶಕರಿಗೆ ಪ್ರತ್ಯೇಕ ಮನವಿಗಳನ್ನು ಸಲ್ಲಿಸಿದ ಕಾರ್ಯಕರ್ತರು ೧೦ ದಿನಗಳ ನಂತರ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಧರಣಿ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕಳೆದ ಸಾಲಿನಲ್ಲಿ ವಿಮಾ ಮೊತ್ತ ಭರಿಸಿದ ಅರ್ಧದಷ್ಟು ರೈತರಿಗೆ ಪರಿಹಾರ ಬಂದಿರುವುದಿಲ್ಲ. ಸತತ ಬರ ಇರುವುದರಿಂದ ಸಂಕಷ್ಟದಲ್ಲಿರುವ ರೈತರಿಗೆ ವಿಮಾ ಪರಿಹಾರವೂ ಬರದಿದ್ದರೆ ತೀರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಯೋಜನೆಯಡಿ ರೈತರಿಗೆ ಕನಿಷ್ಟ ನೆರವಾದರೂ ಲಭಿಸುವಂತಾಗಿದೆ.
ಅರ್ದದಷ್ಟು ರೈತರಿಗೆ ಪರಿಹಾರ ಬಂದಿದ್ದು ಇನ್ನುಳಿದ ರೈತರಿಗೂ ಸೌಲತ್ತು ಒದಗಿಸಿಕೊಡುವಂತೆ ಜಿಲ್ಲಾದಿಕಾರಿಗಳಿಗೆ ಮೊರೆ ಇಟ್ಟರು.
ಈಗಾಗಲೇ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯಕ್ಕೆ ಬಂದಾಗಲೂ ಈ ಕುರಿತು ಮನವಿ ಸಲ್ಲಿಸಲಾಗಿತ್ತು ಆದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿಯಲ್ಲಿ ನೆನಪಿಸಿದ್ದಾರೆ.
ತಕ್ಷಣ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು, ಬರ ಪರಿಹಾರ ವಿತರಿಸಬೇಕು, ಈ ಬಾರಿಯೂ ಬರ ಇರುವುದರಿಂದ ಉದ್ಯೋಗ ಖಾತ್ರಿ ಕೆಲಸ ಕೊಡಬೇಕು, ದನಕರುಗಳಿಗೆ ಮೇವು ಬ್ಯಾಂಕ್ ಆರಂಭಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದರು.
ಕೆಪಿಆರ್‌ಎಸ್ ಹೋಬಳಿ ಘಟಕದ ಅಧ್ಯಕ್ಷ ರಾಮನಗೌಡ ಗೂಗಲ್ ಮನವಿ ಸಲ್ಲಿಸಿದರು. ಯಕ್ತಾಪುರ ಅಧ್ಯಕ್ಷ ಸಿದ್ದು ನಾಯ್ಕೊಡಿ, ಶಿವನಗೌಡ ದೋರನಳ್ಳಿ, ರಾಮಯ್ಯ ಆಲ್ದಾಳ, ಶಾಂತಯ್ಯ ಹಿರೇಮಠ, ವೀರಭದ್ರಯ್ಯ ಸ್ವಾಮಿ, ಬಸನಗೌಡ ಐನಾಪೂರ, ಗೌಡಪ್ಪ ಗೌಡ, ಪೊ. ಪಾ., ಸಿದ್ದನಗೌಡ ಗೂಗಲ್, ಶೇಖರಗೌಡ ಗೂಗಲ್, ಸೋಮನಗೌಡ ಯಳವಾರ, ಬಸಯ್ಯ ಚಿಕ್ಕಮಠ, ಶೇಖಪ್ಪ ಬೆಕಿನಾಳ, ಸುಭಾಷ ಮಲ್ಕಾಪೂರ, ರಾಮಪ್ಪ ಪಡಸಲಗಿ, ತಿಪ್ಪರಡ್ಡೆಪ್ಪಗೌಡ ಗೂಗಲ್, ಶೇಖರಗೌಡ ಗೂಗಲ್, ಇನ್ನಿತರರು ಇದ್ದರು.