ಯಾದಗಿರಿ: ಗುರುಪೂರ್ಣಿಮೆ ನಿ ಮಿತ್ತ ನಗರದ ಸ್ಟೇಷನ್ ಏರಿ ಯಾದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರೆದಿದ್ದ ಸಹಸ್ರಾರು ಭಕ್ತಾದಿಗಳ ಮಧ್ಯೆ ಜರುಗಿತು.
ಮಂಗಳ ವಾರ ಬೆಳಗ್ಗೆ ೫ ಗಂಟೆಯಿಂದ ಅಭಿಷೇಕ, ವಿಶೇಷ ಅಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆದವು.
ಬೆಳಗ್ಗೆ ೧೧ ಗಂಟೆಗೆ ವಿಶೇಷ ಗುರುಪೂಜೆ, ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮದ್ಯಾಹ್ನ ೧೨ಕ್ಕೆ ಮಹಾ ಮಂಗಳದ ನಂತರ ಅನ್ನ ಸಂತರ್ಪಣೆ ಜರುಗಿತು. ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಪಾಲ್ಗೊಂಡು ಸಾಯಿಬಾಬಾ ಅವರ ದರ್ಶನ ಆಶೀರ್ವಾದ ಪಡೆದುಕೊಂಡರು.
ಇಂದಿನ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ. ವೀರಬಸವಂತರೆಡ್ಡಿ ಮುದ್ನಾಳ, ದೇವಸ್ಥಾನ ಸಮಿತಿ ಗೌರವಾಧ್ಯಕ್ಷ ಎಲ್. ಜಿ. ರೆಡ್ಡಿ, ಅಧ್ಯಕ್ಷ ರವಿ ನಾಯಕ, ಉಪಾಧ್ಯಕ್ಷರಾದ ಭೀಮರಾವ ಚಂಡ್ರಕಿ, ಬಸವರಾಜ ಪಾಟೀಲ್ ಬಿಳ್ಹಾರ, ವಾಟ್ಕರ್, ಪ್ರಧಾನ ಕಾರ್ಯದರ್ಶಿ ನಾಗರಾಜ ಬೀರನೂರು, ಕಾರ್ಯದರ್ಶಿ ಇಂದುಧರ ಸಿನ್ನೂರ, ಬಸವರಾಜ ಅರಳಿ, ಕಾಡಾ ಮಾಜಿ ಅಧ್ಯಕ್ಷ ಶ್ರೀನಿವಾಸರೆಡ್ಡಿ ಕಂದಕೂರು, ಜಯಶ್ರೀ ಯಗನಾಥರೆಡ್ಡಿ, ರವಿ ಮಾಲಿ ಪಾಟೀಲ್, ಲಲಿತಾ ಅನಪೂರ ಸೇರಿದಂತೆ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ಸಾಯಿಬಾಬಾ ದರ್ಶನ ಪ್ರಸಾದ ಪಡೆದುಕೊಂಡರು