ಬೆಂಗಳೂರು: ನಡೆದ ಕರ್ನಾಟಕ ಕ್ಷತ್ರೀಯ ಮರಾಠಾ ಪರಿಷತ್ ವಾರ್ಷಿಕ ಮಹಾಸಭೆಯಲ್ಲಿ ನಮ್ಮೆಲ್ಲರ ನೆಚ್ಚಿನ ನೇತಾರರು ಹಾಗೂ ಹಾನಗಲ್ ಶಾಸಕರಾದ ಶ್ರೀನಿವಾಸ ಮಾನೆ ಅವರು ಭಾಗವಹಿಸಿದ್ದರು.
ಮಹಾಸಭೆಯಲ್ಲಿ ಪರಿಷತ್ ವತಿಯಿಂದ ಶ್ರೀನಿವಾಸ ಮಾನೆ ಅವರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಶ್ರೀತುಳಜಾಭವಾನಿ ದೇವಿಯ ದರ್ಶನ ಪಡೆದು, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪರಿಷತ್ ಪದಾಧಿಕಾರಿಗಳು, ರಾಜ್ಯದ ಪ್ರಮುಖರು ಇದ್ದರು.