ಸಿಇಒಗೆ ದೂರು ಸಲ್ಲಿಸಿದ ಸೀತನೂರ ಗ್ರಾ.ಪಂ ಸದಸ್ಯರು, ಗ್ರಾಮಸ್ಥರು

0
198

ಕಲಬುರಗಿ: ತಾಲೂಕಿನ ನಂದಿಕೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಸೀತನೂರ ಗ್ರಾಮದಲ್ಲಿ ಪಂಚಾಯತಿ ವತಿಯಿಂದ ಯಾವುದೇ ಅಭಿವೃದ್ಧಿ ಕೆಲಸ ಕಾರ್ಯಗಳು ಮಾಡದಿರುವದರಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ವಿರುದ್ಧ ಫಿರ್ಯಾದಿಯನ್ನು ಸೀತನೂರ ಗ್ರಾಮಸ್ಥರು ಮಾಡಿದ್ದು, ಇದರ ಅಂಗವಾಗಿ ಸೋಮವಾರ ಗ್ರಾಮಸ್ಥರು ಸೇರಿ ಜಿಲ್ಲಾ ಪಂಚಾಯತಿ ಸಿಇಒ ದಿಲಿಷ್ ಸಾಸಿ ಅವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸಿ ಮಾತನಾಡಿದ ಗ್ರಾಮಸ್ಥರು, ಮಾನ್ಯ ಸದಸ್ಯರು ಸೀತನೂರ ಗ್ರಾಮ ಪಂಚಾಯತ ನಂದಿಕೂರ ಇವರು ಈಗಾಗಲೇ ೨ ಬಾರಿ ಮನವಿಗಳನ್ನು ಸಲ್ಲಿಸಿ ಗ್ರಾಮ ಪಂಚಾಯತ ವತಿಯಿಂದ ಗ್ರಾಮದಲ್ಲಿ ಯಾವುದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲವೆಂದು ಲಿಖಿತ ರೂಪದಲ್ಲಿ ಸಲ್ಲಿಸಿದರೂ, ಅದಕ್ಕೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕ್ಯಾರೆ ಅನ್ನುತ್ತಿಲ್ಲ ಎಂದರು.

Contact Your\'s Advertisement; 9902492681

ಅಲ್ಲದೆ, ನಾವು ಗ್ರಾಮಸ್ಥರು ದೂರವಾಣಿ ಮುಖಾಂತರ ಸಂಪರ್ಕಿಸಲು ಪ್ರಯತ್ನಿಸಿದರೂ ಯಾವೊಂದು ಕರೆಗಳನ್ನು ಸ್ವೀಕರಿಸುವುದಿಲ್ಲ. ಸರ್ಕಾರದಿಂದ ಗ್ರಾಮ ಪಂಚಾಯತಿಗಳಿಗೆ ಬಿಡುಗಡೆಯಾದ ಅನುದಾನದ ವಿವರಗಳನ್ನು ಸರಿಯಾಗಿ ವಿವರಿಸುವುದಿಲ್ಲ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಕಸ ತುಂಬಿಕೊಂಡು ಸಂಪೂರ್ಣ ಗ್ರಾಮವು ಗಬ್ಬು ನಾರುತ್ತಿದ್ದರೂ ಅದಕ್ಕೆ ಕ್ಯಾರೆ ಅನ್ನುವುದಿಲ್ಲ ಎಂದು ದೂರಿದರು.

ಗ್ರಾಮದಲ್ಲಿ ಬೀದಿ ದೀಪಗಳು ಸಂಪೂರ್ಣವಾಗಿ ಹಾಳಾಗಿದ್ದು, ಅವುಗಳನ್ನು ಬದಲಿಸುವಂತೆ ಕೇಳಿಕೊಂಡರೂ ಇಲ್ಲಿಯವರೆಗೂ ಬದಲಾವಣೆಯನ್ನು ಮಾಡಿರುವುದಿಲ್ಲ. ಗ್ರಾಮದಲ್ಲಿನ ಹೈಮಾಸ್ಟ ವಿದ್ಯುತ್ ದೀಪಗಳು ಇದ್ದು ಇಲ್ಲದಂತಾಗಿದೆ. ಗ್ರಾಮದಲ್ಲಿ ನೀರಿನ ಸಮಸ್ಯೆ ಶುದ್ಧ ಕುಡಿಯುವ ನೀರನ ಘಟಕ ಇದ್ದು ಇಲ್ಲದಂತಾಗಿದೆ. ಗ್ರಾಮದ ರಸ್ತೆಯ ಮೇಲೆ ಕಸ, ಕಡ್ಡಿ ಮುಳ್ಳಿನ ಕಂಟೆಗಳು ಎಲ್ಲೆಂದರಲ್ಲಿ ರಸ್ತೆಯ ಗುಂಟ ಇರುವುದನ್ನು ಇಲ್ಲಿಯವರೆಗೆ ಅದನ್ನು ಸ್ವಚ್ಚಗೊಳಿಸುವ ಗೋಜಿಗೆ ಹೋಗುವುದಿಲ್ಲ. ಸಿ.ಸಿ.ಚರಂಡಿಗಳು ಎಲ್ಲೆಂದರಲ್ಲಿ ತುಂಬಿ ತುಳುಕುತ್ತಿವೆ. ಇದರಿಂದ ಗ್ರಾಮದ ವಾತಾವರಣ ಸಂಪೂರ್ಣ ಹದಗೆಟ್ಟು ಹೋಗಿದೆ ಎಂದು ಸಮಸ್ಯೆ ಗಳ ಬಗ್ಗೆ ಹೇಳಿಕೊಂಡರು.

ಈ ಕೂಡಲೇ ತಾವುಗಳು ಸದರಿ ಗ್ರಾಮದ ವೀಕ್ಷಣೆಯನ್ನು ಮಾಡಿ ಒಬ್ಬ ಪಂಚಾಯತ ಅಭಿವೃದ್ಧಿ ಅಧಿಕಾರಿಯವರು ಯಾವ ರೀತಿಯಾಗಿ ಗ್ರಾಮವನ್ನು ಅಚ್ಚು ಕಟ್ಟಾಗಿ ಇಟ್ಟುಕೊಂಡಿದ್ದಾರೆ. ಹಾಗೂ ಗ್ರಾಮದ ನಾಗರಿಕರೂ ಎಷ್ಟು ಕಷ್ಟ ಅನುಭವಿಸುತ್ತಿದ್ದಾರೆ ಎಂಬುದನ್ನು ಕಣ್ಣಾರೆ ಕಂಡು ಅವರ ವಿರುದ್ಧ ಕಾನೂನಿನ ಕ್ರಮ ಜರುಗಿಸಬೇಕೆಂದು ಸಮಸ್ತ ಗ್ರಾಮಸ್ಥರು ಜಿಲ್ಲಾ ಪಂಚಾಯತಿ ಸಿಇಒ ದಿಲಿಷ್ ಸಸಿ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಮಹ್ಮದ್ ಸಾಬ್, ಅಬುಬಕರ್ ನದೀಮಸಾಬ, ಜರೀನಾಬಿ ನಭಿಪಟೇಲ್, ಗ್ರಾಮಸ್ಥರಾದ ಆರೀಫ್ ಪಟೇಲ್, ರಶೀದ ಸಾಬ್, ಶಿವುಪುತ್ರ ಕೋಬಾಳಕರ್, ಶಾಕೀರ್ ಅಲಿಮೋಹಜನ, ಶಿವುಕುಮಾರ ದೋಡ್ಡಮನಿ ಹಾಗೂ ಗ್ರಾಮಸ್ಥರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here