ಗ್ರಾಹಕರು ಹಕ್ಕುಗಳು, ಜವಾಬ್ದಾರಿಗಳು ಅರಿತುಕೊಳ್ಳುವುದು ಅಗತ್ಯ

0
10

ಶಹಬಾದ: ಸಮೀಪದ ಸಣ್ಣೂರ ಗ್ರಾಮದ ’ಶ್ರೀ ಮಾತಾ ಮಾಣಿಕೇಶ್ವರಿ ಪ್ರೌಢಶಾಲೆ’ಯಲ್ಲಿ ’ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ’ರಾಷ್ಟ್ರೀಯ ಗ್ರಾಹಕರ ದಿನಾಚರಣೆ’ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ, ಮಾರುಕಟ್ಟೆಯ ಆಧಾರ ಸ್ಥಂಭವಾದ ಗ್ರಾಹಕರು ಸುರಕ್ಷತೆ, ಮಾಹಿತಿ ಪಡೆಯುವದು, ಆಯ್ಕೆ ಮಾಡಿಕೊಳ್ಳುವ, ಆಲಿಸುವದು, ಕುಂದುಕೊರತೆಗಳನ್ನು ನಿವಾರಿಸಿಕೊಳ್ಳುವದು, ಗ್ರಾಹಕರ ಶಿಕ್ಷಣದಂತಹ ಹಕ್ಕುಗಳು, ಹಕ್ಕುಗಳ ಬಗ್ಗೆ ಜಾಗೃತಿ, ಗುಣಮಟ್ಟದ ಅರಿವು, ದೂರು ನೀಡಲು ಸಿದ್ಧರಿರಬೇಕು, ತಪ್ಪು ಜಾಹೀರಾತುಗಳಿಂದ ದಿಕ್ಕು ತಪ್ಪಿಸಬಾರದು, ನಗದು ರಶೀದಿಗಾಗಿ ಬೇಡಿಕೆ, ಸರಕುಗಳ ಆಯ್ಕೆ, ಗ್ರಾಹಕರ ಸಂಘಟನೆ, ಪರಿಸರ ರಕ್ಷಣೆ, ಅವಸರದಲ್ಲಿ ವಸ್ತುಗಳನ್ನು ಖರೀದಿಸಬಾರದೆಂಬ ಜವಾಬ್ದಾರಿಗಳನ್ನು ಅರಿತುಕೊಳ್ಳುವುದು ಅಗತ್ಯವಾಗಿದೆ ಎಂದು ಹೇಳಿದರು.

Contact Your\'s Advertisement; 9902492681

ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುರಗ್ಯಯ ಮಠಪತಿ ಮಾತನಾಡಿ, ಪ್ರತಿಯೊಬ್ಬರು ಗ್ರಾಹಕರಾಗಿರುವದರಿಂದ ವಸ್ತುಗಳನ್ನು ಖರೀದಿಸುವಾಗ ತಮ್ಮ ಬುದ್ಧಿವಂತಿಕೆ ಉಪಯೋಗಿಸಿ ಸರಿಯಾದ ಬೆಲೆ ಹಾಗೂ ಗುಣಮಟ್ಟದ ವಸ್ತುಗಳನ್ನು ಖರೀದಿಸುವುದು ಅಗತ್ಯ. ಸಾಮಗ್ರಿ ಅಥವಾ ಸರಕಿನ ಖರೀದಿಯಲ್ಲಿ ಕಳಪೆ ಗುಣಮಟ್ಟ, ಕಡಿಮೆ ಪ್ರಮಾಣ, ಅಶುದ್ಧತೆ ಅಥವಾ ನ್ಯೂನತೆಯ ಬಗ್ಗೆ ಗಮನಹರಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಸಿದ್ರಾಮಪ್ಪ ಸಣ್ಣೂರಕರ್, ಪ್ರಮುಖರಾದ ದೇವೇಂದ್ರಪ್ಪ ಗಣಮುಖಿ, ದೇವೇಂದ್ರಪ್ಪ ಐ.ಬಡಿಗೇರ, ಸರಸ್ವತಿ ಆರ್.ಪಾಟೀಲ, ಶೋಭಾ ಡಿ.ಚೌಧರಿ, ರವೀಂದ್ರ ಬಿ.ಬಸವಪಟ್ಟಣ, ವಿಶ್ವನಾಥ ಎನ್.ಗೌನಳ್ಳಿ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here