ಶಾಸಕ ರಾಜುಗೌಡ ಅಭಿವೃಧ್ಧಿ ಮಾಡಲು ನೂರು ಕೋಟಿ ಕೊಡುವೆ-ಸಚಿವ ಬೈರತಿ ಬಸವರಾಜ

0
6

ಸುರಪುರ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗು ನಗರಸಭೆ ಸುರಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಗರುಡಾದ್ರಿ ಕಲಾ ಮಂದಿರದಲ್ಲಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಅಡಿಗಲ್ಲು ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಸರಕಾರದ ನಗರಾಭಿವೃಧ್ಧಿ ಸಚಿವರಾದ ಬೈರತಿ ಬಸವರಾಜ ಅವರು ಮಾತನಾಡಿ,ಶಾಸಕ ರಾಜುಗೌಡ ಅವರು ಒಬ್ಬ ಅಭಿವೃಧ್ಧಿ ಪರವಾದ ನಾಯಕರಾಗಿದ್ದಾರೆ.ಕಳೆದ ಅನೇಕ ವರ್ಷಗಳಿಂದ ನಗರಕ್ಕಿದ್ದ ಕುಡಿಯುವ ನೀರಿನ ತೊಂದರೆಗೆ ಪರಿಹಾರಕ್ಕಾಗಿ ಇಂತಹ ಒಂದು ಅದ್ಭುತವಾದ ಯೋಜನೆಯ ಮೂಲಕ ಉತ್ತಮವಾದ ಕೆಲಸ ಮಾಡುತ್ತಿದ್ದಾರೆ.

Contact Your\'s Advertisement; 9902492681

ಅವರು ತಮ್ಮ ಜನುಮ ದಿನವನ್ನು ಆಚರಿಸಿಕೊಳ್ಳದೆ ಜನರ ಸೇವೆಯಲ್ಲಿ ಅದನ್ನು ಕಾಣುತ್ತಿರುವುದು ಸಂತೋಷದ ಸಂಗತಿಯಾಗಿದೆ.ನಾನುಕೂಡ ನಗರದ ಅಭಿವೃಧ್ಧಿಗಾಗಿ ನೂರು ಕೋಟಿ ರೂಪಾಯಿಗಳ ಅನುದಾನ ಕೊಡುವುದಾಗಿ ಘೋಷಿಸಿದರು.ಕ್ಷೆತ್ರದ ಹಾಲುಮತ ಸಮುದಾಯದ ನಮ್ಮ ಜನರು ಸದಾಕಾಲ ರಾಜುಗೌಡರೊಂದಿಗೆ ಇರುವಂತೆ ತಿಳಿಸಿದರು.ಇನ್ನೂ ಅನೇಕ ಕಾಮಗಾರಿಗಳಿಗಾಗಿ ಯೋಜನೆ ರೂಪಿಸಿದ್ದು ಬರುವ ತಿಂಗಳು ಮತ್ತೆ ಬಂದು ಅವುಗಳಿಗೂ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಸಂಸದ ರಾಜಾ ಅಮರೇಶ್ವರ ನಾಯಕ ಮಾತನಾಡಿ,ಶಾಸಕ ರಾಜುಗೌಡರನ್ನು ಚಿಕ್ಕವನಿರುವಾಗಲಿಂದನು ನೋಡುತ್ತಿರುವೆ,ಆಗಿನಿಂದಲು ಸದಾಕಾಲ ಜನಸೇವೆಗೆ ಮಿಡಿಯುವ ಮನಸ್ಸು ಅವರದು,ಅದರಂತೆ ಇಂದು ಇಂತಹ ಯೋಜನೆಗೆ ಚಾಲನೆ ದೊರೆಯುತ್ತಿದೆ.ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ಜಿಲ್ಲೆಯ ಅಭಿವೃಧ್ಧಿಗೆ ೧೪೦೦ ಕೋಟಿ ಅನುದಾನ ನೀಡಿದ್ದಾರೆ.ಅಲ್ಲದೆ ಶೀಘ್ರದಲ್ಲಿಯೆ ಸೈನಿಕ ಶಾಲೆಯನ್ನು ನೀಡಲು ರಾಜನಾಥ ಸಿಂಗ್ ಅವರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷರು ಹಾಗು ಶಾಸಕರಾದ ರಾಜುಗೌಡ ಮಾತನಾಡಿ,ಹಿಂದೆ ಮುಖ್ಯಮಂತ್ರಿಗಳಾಗಿದ್ದಾಗ ಯಡಿಯೂರಪ್ಪನವರು ನಗರದ ಜನರಿಗೆ ೨೦೫೫ರ ವರೆಗೆ ಕುಡಿಯುವ ನೀರಿನ ಯೋಜನೆ ರೂಪಿಸಿ, ೨೦೦ ಕೋಟಿ ಕೊಟ್ಟು ಈ ಯೋಜನೆಗೆ ನೆರವಾಗಿದ್ದರು,ಇಂದು ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿಯವರು ೧೫೮.೮ ಕೋಟಿ ನೀಡಿದ್ದಾರೆ ಇನ್ನುಳಿದ ಅನುದಾನವು ಶೀಘ್ರದಲ್ಲಿ ಬರಲಿದೆ.ಅದರಂತೆ ನಮ್ಮ ಸುರಪುರ ನಗರ ಸೇರಿ ದೇವಾಪುರ,ಕವಡಿಮಟ್ಟಿ ಹಾಗು ಖಾನಾಪುರ ಎಸ್.ಹೆಚ್ ಗ್ರಾಮಗಳಿಗೂ ಈ ಯೋಜನೆಯಿಂದ ಶಾಸ್ವತ ಕುಡಿಯುವ ನೀರು ದೊರೆಯಲಿದೆ ಎಂದರು.

ನಮ್ಮ ತಂದೆ ಹೊಡೆದರೆ ಆನೆಯನ್ನು ಹೊಡೆಯಬೇಕು ಎಂದಿದ್ದರು ಅದರಂತೆ ಈ ಯೋಜನೆ ಜಾರಿಯಾಗುತ್ತಿದೆ.ಅಲ್ಲದೆ ನಮ್ಮ ತಾಯಿ ಯಾವುದೇ ದ್ವೇಷದ ರಾಜಕಾರಣಕ್ಕಿಂತ ಅಭಿವೃಧ್ಧಿ ಕೆಲಸ ಮಾಡುವಂತೆ ತಿಳಿಸಿದ್ದರು,ಅವರ ಮಾತಿನಂತೆ ನಾನು ಸದಾಕಾಲ ಅಭಿವೃಧ್ಧಿ ಪರವಾದ ಕೆಲಸ ಮಾಡುವೆ,ನಮ್ಮ ಎದುರಾಳಿಗಳು ನನಗೆ ಎಚ್ಚಿರುಸುವಂತೆ ಕೆಲಸ ಮಾಡಿದ್ದಾರೆ.ಅವರಿಂದ ನನ್ನಲ್ಲಿ ಮತ್ತಷ್ಟು ಕೆಲಸ ಮಾಡುವ ಛಲ ಬಂದಿದೆ ಅದಕ್ಕಾಗಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ನಾನು ಎಂದಿಗೂ ದ್ವೇಷದ ರಾಜಕಾರಣ ಮಾಡುವುದಿಲ್ಲ,ಆದರೆ ಕಾರ್ಯಕರ್ತರ ತಂಟೆಗೆ ಯಾರಾದರು ಬಂದರೆ ಅದನ್ನು ಸಹಿಸುವುದಿಲ್ಲ ಎಂದರು.ಇದೇ ಸಂದರ್ಭದಲ್ಲಿ ೨೦೨೨ರ ಡಿಸೆಂಬರ್ ೨೭ರ ಒಳಗಾಗಿ ಕಾಮಗಾರಿ ಮುಗಿಸಿ ಮುಂದಿನ ವರ್ಷದ ಜನುಮ ದಿನದಂದು ಜನರ ಮನೆಯಲ್ಲಿ ನೀರು ಕುಡಿಯುವಂತೆ ಮಾಡುವಂತೆ ಕಾಮಗಾರಿ ಗುತ್ತಿಗೆದಾರರಿಗೆ ಮನವಿ ಮಾಡಿದರು.

ನಂತರ ಸಚಿವರಿಗೆ ನಗರಸಭೆಯಿಂದ ಪೌರಸನ್ಮಾನ ನೆರವೇರಿಸಲಾಯಿತು.ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಚಿವರು ಹಾಗು ಅಧಿಕಾರಿಗಳೊಂದಿಗೆ ಕಂಪಾಪುರಕ್ಕೆ ಭೇಟಿ ನೀಡಿ ಕಾಮಗಾರಿ ಸ್ಥಳ ವೀಕ್ಷಣೆ ಮಾಡಿದರು.ನಂತರ ಸಚಿವರು ಶಾಸಕರನ್ನು ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಕರೆತರಲಾಯಿತು.

ಇದೇ ಸಂದರ್ಭದಲ್ಲಿ ನಿರ್ದೇಶಕ ತರುಣ ಸುಧೀರ್ ಅವರು ನಿರ್ಮಿಸಿರುವ ಶಾಸಕ ರಾಜುಗೌಡ ಅವರ ಕುರಿತಾದ ಹಾಡು ಎಲ್ಲರನ್ನು ರಂಜಿಸಿತು.ಇದೇ ಸಂದರ್ಭದಲ್ಲಿ ಶಾಸಕರ ಸುಪುತ್ರ ಮಣಿಕಂಠಗೌಡ ಮಾತನಾಡಿ,ನಮ್ಮ ತಂದೆ ತಮ್ಮೆಲ್ಲರ ಸೇವೆಗಾಗಿ ಸದಾ ದುಡಿಯುತ್ತಾರೆ ತಾವೆಲ್ಲರು ಸದಾಕಾಲ ಅವರ ಜೊತೆಗಿರುವಂತೆ ವಿನಂತಿಸಿದರು.

ಇದೇ ಸಂದರ್ಭದಲ್ಲಿ ಸಚಿವರು ಶಾಸಕರಿಗೆ ಜನುಮ ದಿನದ ಅಂಗವಾಗಿ ಬೆಳ್ಳಿ ಕಿರಿಟ ತೊಡಿಸಿ ಸನ್ಮಾನಿಸಿ ಗೌರವಿಸಿದರು. ಕಾರ್ಯಕ್ರಮದ ವೇದಿಕೆ ಮೇಲೆ ನಗರಸಭೆ ಅಧ್ಯಕ್ಷೆ ಸುಜಾತಾ ವೇಣುಗೋಪಾಲ ಜೇವರ್ಗಿ,ಜಿಲ್ಲಾಧಿಕಾರಿ ಡಾ:ರಾಗಪ್ರಿಯ,ಎಸ್ಪಿ ಡಾ:ಸಿ.ಬಿ ವೇದಮೂರ್ತಿ,ಯಾದಗಿರಿ ನಗರಸಭೆ ಅಧ್ಯಕ್ಷ ವಿಲಾಸ ಪಾಟೀಲ್,ಡಿಮ್ಯಾಕ್ಸ್ ಮಾಲೀಕ ಎಸ್.ಪಿ ದಯಾನಂದ,ಮಂಡಳಿ ನಿರ್ದೇಶಕ ಕೆ.ಪಿ ಮೋಹನರಾಜ್,ನಯೋಪ್ರಾ ಅಧ್ಯಕ್ಷ ಪ್ರಕಾಶ ಸಜ್ಜನ್,ಮುಖಂಡರಾದ ರಾಜಾ ಹನುಮಪ್ಪ ನಾಯಕ (ತಾತಾ),ಕ-ಯಾ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ ಸಜ್ಜನ್,ಹಣಮಂತ ನಾಯಕ (ಬಬ್ಲುಗೌಡ) ಯಲ್ಲಪ್ಪ ಕುರಕುಂದಿ,ಹೆಚ್.ಸಿ ಪಾಟೀಲ್,ನರಸಿಂಹರಡ್ಡಿ,ಕಾಮಗಾರಿ ಪಡೆದ ಗುತ್ತಿಗೆದಾರ ನಂದಿ ಸೇರಿದಂತೆ ಅನೇಕರಿದ್ದರು.ಅಮರಯ್ಯಸ್ವಾಮಿ ಜಾಲಿಬೆಂಚಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.ಬಸವರಾಜ ಬಂಟನೂರು ತಂಡದಿಂದ ಗಾಯನ ಕಾರ್ಯಕ್ರಮ ನಡೆಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here