ಕಲಬುರಗಿ: ಕೂಡಲ ಸಂಗಮದ ಬಸವ ಧರ್ಮಪೀಠಾಧ್ಯಕ್ಷರಾದ ಪೂಜ್ಯ ಮಾತೆಗಂಗಾದೇವಿ ಅವರು ಬಸವಣ್ಣನವರ ವಚನಗಳಿಗೆ ಮೂಲ ಅಂಕಿತವಾದ ’ಕೂಡಲಸಂಗಮದೇವ’ ಎಂಬುದನ್ನೇ ಬಳಸಲು ನಿರ್ಧರಿಸಿರುವುದು ಸ್ವಾಗತಾರ್ಹವಾದ ಸಂಗತಿಯಾಗಿದೆ. ಈ ಮಹತ್ವದ ನಿರ್ಧಾರಕ್ಕಾಗಿ ಪೂಜ್ಯಗಂಗಾದೇವಿ ಅವರಿಗೆ ಬಸವ ಸಮಿತಿ ಹೃತ್ಪೂರ್ವಕವಾಗಿಅಭಿನಂದಿಸುತ್ತದೆ.
ಬಹುವರ್ಷಗಳ ಹಿಂದೆ ಬಸವ ಧರ್ಮಪೀಠಾಧ್ಯಕ್ಷರಾಗಿದ್ದ ಲಿಂ.ಪೂಜ್ಯ ಮಾತೆ ಮಹಾದೇವಿ ಅವರು ಬಸವಣ್ಣನವರ ವಚನಾಂಕಿತಕೂಡಲಸಂಗಮದೇವಎಂದಿರುವುದನ್ನು ’ಲಿಂಗದೇವ’ ಎಂದು ಬದಲಾಯಿಸಿ ಬಳಸಿದ್ದರು.ಇದುಎಲ್ಲಕಡೆಯಿಂದಅಸಮಾಧಾನ ವ್ಯಕ್ತವಾಗಿತ್ತು.ಇಂದುಇಂತಹ ಮಹತ್ವದ ನಿರ್ಣಯದಿಂದಾಗಿ ’ಬಸವ ಧರ್ಮ ಪೀಠವು’ ಉಚಿತವಾದ ನಿರ್ಣಯವನ್ನುತೆಗೆದುಕೊಂಡಿದೆಎಂದು ಬಸವ ಸಮಿತಿಯ ಅಧ್ಯಕ್ಷರಾದ ಅರವಿಂದಜತ್ತಿ, ಕಲಬುರಗಿ ಬಸವ ಸಮಿತಿಅಧ್ಯಕ್ಷರಾದಡಾ. ವಿಲಾಸವತಿ ಖೂಬಾ ಅವರು ಸ್ವಾಗತಿಸಿದ್ದಾರೆ.
ಇದೂಅಲ್ಲದೆ ಪೂಜ್ಯ ಮಾತೆ ಮಹಾದೇವಿ ಅವರುಇನ್ನೂ ಕೆಲ ಶರಣರ ವಚನಾಂಕಿತಗಳನ್ನು ಬದಲಾಯಿಸಿ ತಮ್ಮ ಕೃತಿಗಳಲ್ಲಿ ಬಳಸಿರುವುದು ಕಂಡುಬರುತ್ತದೆ. ಈ ಸಂದರ್ಭದಲ್ಲಿ ಪೂಜ್ಯಗಂಗಾದೇವಿ ಅವರು ಈ ಎಲ್ಲಅಂಕಿತ ಬದಲಾವಣೆಗಳನ್ನು ಹಿಂಪಡೆದು, ಆಯಾ ಶರಣರ ಮೂಲ ಅಂಕಿತಗಳನ್ನೇ ಬಳಸಬೇಕೆಂಬ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸುತ್ತೇವೆ.