ಮಕ್ಕಳಿಗೆ ಉಚಿತ ನೋಟ್ ಪುಸ್ತಕ ಕಲಿಕಾ ಸಾಮಗ್ರಿಗಳ ವಿತರಣೆ

0
9

ತೊರ‍್ನಹಳ್ಳಿ: ಮಕ್ಕಳು ಆಸಕ್ತಿಯಿಂದ ಕಲಿಯಬೇಕು, ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಶಿಕ್ಷಕರ ಜೊತೆ ಪೋಷಕರ ಪಾತ್ರವು ಹೆಚ್ಚು ಮಹತ್ವದ್ದಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ ತಿಳಿಸಿದ್ದಾರೆ.

ಮಾಲೂರು ತಾಲ್ಲೂಕಿನ ಕಸಬಾ ಹೋಬಳಿ ತೊರ‍್ನಹಳ್ಳಿ ಗ್ರಾಮದಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ  ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಸರ್ಕಾರಿ ಶಾಲೆಯ ಮಕ್ಕಳು ಹೆಚ್ಚು ಬುದ್ದಿವಂತರಾಗಿದ್ದಾರೆ. ಮೊದಲು ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಬೇಕು ಎಂದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ ಹಾಗೂ ಸದಸ್ಯರಾದ ಸಿ.ವಿ. ವೆಂಕಟರಮಣಪ್ಪ ರವರು ನೋಟ್ ಪುಸ್ತಕಗಳನ್ನು, ಲೇಖನ ಸಾಮಗ್ರಿಗಳನ್ನು ಕೊಡುಗೆಯಾಗಿ ನೀಡಿದರು. ಅಲ್ಲದೆ ಶಾಲೆಯ ಮುಖ್ಯ ಶಿಕ್ಷಕಿ ರಾಜೇಶ್ವರಿ ಮಣ್ಯಪ್ಪ, ಸಹಶಿಕ್ಷಕಿ ಶೈಲಾ ಮುನಿಕೃಷ್ಣ, ರವರು ಜಮಾಖಾನೆಗಳನ್ನು ಕೊಡುಗೆಯಾಗಿ ನೀಡಿದರು.

ಸರ್ಕಾರಿ ಶಾಲೆಗಳ ಸಬೀಲಿಕರಣಕ್ಕೆ ಮತ್ತು ಶಾಲೆಗಳ ಅಭಿವೃದ್ಧಿಗೆ ಗ್ರಾಮಪಂಚಾಯಿತಿ ಮತ್ತು ಶಾಲಾಬಿವೃದ್ದಿಗಳ ದಾನಿಗಳ ಸಹಕಾರದೊಂದಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಶಾಲೆಗಳಲ್ಲಿ ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡೋದಕ್ಕೆ ಸಹಕಾರವಾಗುತ್ತದೆ ಈ ಉದ್ದೇಶದಿಂದ ತೊರ‍್ನಹಳ್ಳಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಶ್ರೀಯುತ ಮುನಿಯಪ್ಪ ಮಾದರಿಯಾಗಿ ಮಕ್ಕಳಿಗೆ ಶೈಕ್ಷಣಿಕ ದೃಷ್ಟಿಯಿಂದ ಉಚಿತವಾಗಿ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ತೊರ‍್ನಹಳ್ಳಿ ಗ್ರಾಮಪಂಚಾಯಿತಿಯ ಎಲ್ಲಾ ಶಾಲೆಗಳ ಮಕ್ಕಳಿಗೆ ನೀಡಿದರು.ಈ ಸೌಲಭ್ಯಗಳನ್ನು ಪಡೆದು ಮಕ್ಕಳು ಉತ್ತಮ ವಿದ್ಯಾಭ್ಯಾಸ ಮಾಡುವಂತೆ ತಿಳಿಸಿದರು ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುತ್ತೇವೆ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಪಿಡಿಒ ಚೌಡರೆಡ್ಡಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮುನಿಯಪ್ಪ, ಸದಸ್ಯರಾದ ಸಿ.ವಿ.ವೆಂಕಟರಮಣಪ್ಪ, ಟಿ.ವಿ. ನಾರಾಯಣ ಸ್ವಾಮಿ, ಶ್ರೀಮತಿ ನಾಗರತ್ನಮ್ಮ ಚಿಕ್ಕಣ್ಣ, ಸೊಣ್ಣನಾಯಕನಹಳ್ಳಿ ನಾಗರಾಜಪ್ಪ, ಸುಜಾತಮ್ಮ ಬೆಳ್ಳೂರಪ್ಪ, ಹೆಡಗಿನಬೆಲೆ ಮುರಳಿ, ಎನ್. ನಾಗರಾಜ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್. ನರಸಿಂಹ, ಕಾರ್ಯದರ್ಶಿಗಳಾದ ಎಂ.ಸಿ. ಮುನಿರಾಜ, ಶಿಕ್ಷಕರಾದ ಶ್ರೀನಿವಾಸನ್, ರಮೇಶ್, ಮುನಿರಾಜ್, ಟಿ.ಎಂ‌.ವೆಂಕಟೇಶ್ ಭಾಗ್ಯವತಿ, ದ್ರಾಕ್ಷಾಯಿಣಿ ಶಿವಲಿಂಗಪ್ಪ, ಕವಿತ, ಭಾನುಮತಿ, ಎಸ್ ಡಿ ಎಂ ಸಿ ಅಧ್ಯಕ್ಷ ಎಂ. ರಾಮಾಂಜನೆಯ್ಯ, ಹಾಗೂ ಸದಸ್ಯರು ಗ್ರಾಮದ ಮುಖಂಡರು, ನೆರೆಹೊರೆಯ ಮುಖ್ಯ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿ ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here