ಸರ್ವವ್ಯಾಪಿ ಪರಿಷತ ಮಾಡುವ ಹೆಬ್ಬಯಕೆ: ಹಣಮಂತ ಶೇರಿ

0
16

ಆಳಂದ: ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ತನ್ನು ಆಳಂದ ತಾಲೂಕಿನಲ್ಲಿ ಸರ್ವವ್ಯಾಪಿ ಮತ್ತು ಸರ್ವಸ್ಪರ್ಶಿಯನ್ನಾಗಿ ಮಾಡುವ ಹೆಬ್ಬಯಕೆ ಹೊಂದಿರುವುದಾಗಿ ಆಳಂದ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತನ ನೂತನ ಅಧ್ಯಕ್ಷ ಹಣಮಂತ ಶೇರಿ ಖಜೂರಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಒಂದು ದಶಕದಿಂದ ಕಲಬುರಗಿ ಜಿಲ್ಲೆಯಾದ್ಯಂತ ಜರುಗಿರುವ ಕನ್ನಡದ ಕಾರ್ಯಕ್ರಮ, ಸಂಘಟನೆ, ಹೋರಾಟಗಳಲ್ಲಿ ಭಾಗವಹಿಸಿದ್ದೇನೆ ಜೊತೆಗೆ ಸಾಹಿತಿಗಳ, ಪತ್ರಕರ್ತರ ಒಡನಾಟದಲ್ಲಿದ್ದೇನೆ ಇದನ್ನು ಮನಗಂಡು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಕನ್ನಡ ನುಡಿ ಸೇವೆಗೈಯಲು ಅವಕಾಶ ನೀಡಿದ್ದಾರೆ ಕನ್ನಡಿಗರ ಮತ್ತು ಜಿಲ್ಲಾಧ್ಯಕ್ಷರ ಆಶಯದಂತೆ ಪರಿಷತ ಕಾರ್ಯಗಳನ್ನು ನೇರವೇರಿಸುತ್ತೇನೆ ಎಂದು ತಿಳಿಸಿದ್ದಾರೆ.

Contact Your\'s Advertisement; 9902492681

ಆಳಂದ ತಾಲೂಕಿನಲ್ಲಿ ಕನ್ನಡದ ವಾತಾವರಣ ನಿರಂತರವಾಗಿ ಇರುವಂತೆ ನೋಡಿಕೊಳ್ಳಲಾಗುವುದು ಅಲ್ಲದೇ ತಾಲೂಕಿನ ಉದೋಯುನ್ಮುಖ ಪ್ರತಿಭೆಗಳಿಗೆ ಸಾಹಿತ್ಯ ಪರಿಷತ ಅಡಿಯಲ್ಲಿ ವೇದಿಕೆ ಕಲ್ಪಿಸಿ ಅವರ ಪ್ರತಿಭೆಯನ್ನು ಜಿಲ್ಲೆ, ರಾಜ್ಯಾದ್ಯಂತ ಪಸರಿಸುವಂತೆ ಮಾಡಲಾಗುವುದು ಎಂದಿದ್ದಾರೆ.

ಆಳಂದ ತಾಲೂಕು ಮಹಾರಾಷ್ಟ್ರದೊಂದಿಗೆ ಮೂರು ಕಡೆಯಲ್ಲಿ ಗಡಿಯನ್ನು ಹೊಂದಿದೆ ಇಲ್ಲಿ ಕನ್ನಡದ ಅಸ್ಮಿತೆಯನ್ನು ಕಾಪಾಡುವುದರೊಂದಿಗೆ ಅಲ್ಲಿ ಕನ್ನಡವನ್ನು ವ್ಯವಹಾರಿಕ ಮತ್ತು ಆಡಳಿತ ಭಾಷೆಯಾಗಿರುವಂತೆ ನೋಡಿಕೊಳ್ಳಲಾಗುವುದು. ಶಾಲೆಗೊಬ್ಬರು ಸಾಹಿತಿ ಎನ್ನುವ ಶೀರ್ಷಿಕೆಯಲ್ಲಿ ತಾಲೂಕಿನ ಪ್ರತಿ ಶಾಲೆಗೆ ಭೇಟಿ ನೀಡಿ ಕನ್ನಡದ ಮೇರು ಸಾಹಿತಿಗಳ ಪರಿಚಯ ಮಾಲಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಾಲೂಕಿನಲ್ಲಿ ಶಿಕ್ಷಕರ, ರೈತರ, ಯುವಕರ, ಮಕ್ಕಳ, ಮಹಿಳೆಯರ, ಆರಕ್ಷಕರ ಸಮ್ಮೇಳನ ಸಂಘಟಿಸುವುದರ ಜೊತೆಗೆ ತಾಲೂಕಾ ಸಮ್ಮೇಳನಗಳನ್ನು ಯಶಸ್ವಿಯಾಗಿ ಸಂಘಟಿಸಲಾಗುವುದು ಅಲ್ಲದೇ ರಾಜ್ಯಾಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ ಮತ್ತು ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಅವರ ಆಶಯದಂತೆ ಕನ್ನಡ ಸಾಹಿತ್ಯ ಪರಿಷತ್ತನ್ನು ಜನಸಾಮಾನ್ಯರ ಪರಿಷತ್ತನ್ನಾಗಿ ಮಾಡಲು ಶ್ರಮಿಸಲಾಗುವುದು.

ಸ್ಥಳೀಯ ಶಾಸಕರು ಹಾಗೂ ಜನಪ್ರತಿನಿಧಿಗಳ ಜೊತೆ ಸಮನ್ವಯತೆ ಸಾಧಿಸಿ ಆಳಂದ ತಾಲೂಕಿನಲ್ಲಿ ಜಿಲ್ಲೆಯಲ್ಲಿಯೇ ಮಾದರಿಯನ್ನುವಂತೆ ಕನ್ನಡ ಭವನ ನಿರ್ಮಿಸಿ ಲೋಕಾರ್ಪಣೆಗೊಳಿಸುವ ಹಾಗೂ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೊಜನೆಗಳಿವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here