ಕಲಬುರಗಿ: ಡ್ರ್ಯಾಗನ್ ಹಣ್ಣು ವಿಟಮಿನ್, ಆಂಟಿಆಕ್ಸಿಡೆಂಟ್, ದೇಹಕ್ಕೆರೋಗ ನಿರೋದsಕಗುಣ ಹೊಂದಿದ ಹಣ್ಣಾಗಿದ್ದು, ದೇಹದ ಸಕ್ಕರೆ ಪ್ರಮಾಣ ಕಡಿಮೆ ಮಾಡುವ ಗುಣ ಹೊಂದಿದೆ. ದೇಹಕ್ಕೆ ಶಕ್ತಿ ಕಾಬೋಹೈಡ್ರೆಟ್, ಕಬ್ಬಿಣ, ಮ್ಯಾಗ್ನಿಸಿಯಂ ಕೊಡಬಲ್ಲ ಈ ಹಣ್ಣು ಗಲ್ಫ್ ಮತು ಯರೋಪಯನ್ ದೇಶದಲ್ಲಿ ಹೆಚ್ಚು ಬೇಡಿಕೆ.
ಕಲಬುರಗಿ ಜಿಲ್ಲೆಯಲ್ಲಿ ಈಗಾಗಲೆ ೧೨ ರೈತರು ಈ ಬೆಳೆ ಬೆಳಿಯುತ್ತಿದ್ದು ಸ್ಥಳೀಯ ಹಾಗೂ ಮುಂಬೈ, ಹೈದ್ರಾಬಾದ ಮಾರುಕಟ್ಟೆ ಕಲ್ಪಿಸುತ್ತಿದ್ದಾರೆ. ಸಾವಯವ ಬೇಸಾಯ ವಿಧಾನದಲ್ಲಿ ಗಿಡವನ್ನು ಬೆಳೆಸಿದಲ್ಲಿ ಆರೋಗ್ಯಕರವಾಗಿ ಉತ್ತಮ ಹಣ್ಣು ದೊರಕುವುದು ಎಂದು ಐಸಿಎಆರ್-ಕೃಷಿ ವಿಜ್ಞಾನಕೇಂದ್ರ, ಕಲಬುರಗಿಯ ವಿಜ್ಞಾನಿಯಾದ ಡಾ. ವಾಸುದೇವ ನಾಯಕ್ ತಿಳಿಸಿದರು.
ಪಾಪಾಸುಕಳ್ಳಿ ಜಾತಿಗೆ ಸೇರಿದ ಈ ಗಿಡಕ್ಕೆ ಗಾಳಿಯಿಂದ ಬರುವರೋಗ ಕಡಿಮೆ ರೈತರು ಚಳಿ ಹಾಗೂ ಬಿಸಿಲಿನ ತಾಪಮಾನ ನೋಡಿ ಬಳ್ಳಿ ಹಾಗೂ ಹಣ್ಣು ಕೊಳೆಯದಂತೆ ಟ್ರೈಕೋಡರ್ಮ ಜೈವಿಕ ಶಿಲೀಂದ್ರನಾಶಕ ೫ ಗ್ರಾಂ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಲು ಕೆ.ವಿ.ಕೆ ಸಸ್ಯರೋಗ ತಜ್ಞರಾದ ಡಾ.ಜಹೀರ್‌ಅಹೆಮದ್‌ರವರು ತಿಳಿಸಿದರು. ಪ್ರಗತಿ ಪರ ರೈತರಾದ ಪ್ರಶಾಂತ ಬಸ್ಸಾಪೂರ ಉಪಸ್ಥಿತರಿದ್ದರು.