- # ಕೆ.ಶಿವು.ಲಕ್ಕಣ್ಣವರ
ಬಳ್ಳಾರಿ ಮಹಾನಗರ ಪಾಲಿಕೆ, ಬೀದರ್ – ಭದ್ರಾವತಿ- ರಾಮನಗರ ನಗರಸಭೆ, ಬೇಲೂರು ಪುರಸಭೆ ಮತ್ತು ಗುಡಿಬಂಡೆ – ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಕೋವಿಡ್ ಎರಡನೇ ಅಲೆಯ ನಡುವೆಯೂ ಏಪ್ರಿಲ್ 27 ರಂದು 8 ಜಿಲ್ಲೆಗಳಲ್ಲಿ ನಡೆದಿದ್ದ ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿಗಳ ಕರ್ನಾಟಕ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಿದ್ದು ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದೆ. ಜೆಡಿಎಸ್ ಎರಡನೇ ಸ್ಥಾನ ಪಡೆದಿದ್ದು ಬಿಜೆಪಿಗೆ ಮುಖಭಂಗವಾಗಿದೆ.
ಬಳ್ಳಾರಿ ಮಹಾನಗರ ಪಾಲಿಕೆ, ಬೀದರ್ – ಭದ್ರಾವತಿ- ರಾಮನಗರ ನಗರಸಭೆ, ಬೇಲೂರು ಪುರಸಭೆ ಮತ್ತು ಗುಡಿಬಂಡೆ – ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಗಳಲ್ಲಿ ಕಾಂಗ್ರೆಸ್ ಪಕ್ಷವು ಭರ್ಜರಿ ಜಯಗಳಿಸಿದ್ದು, ಅಧಿಕಾರದ ಚುಕ್ಕಾಣಿ ಹಿಡಿದಿದೆ.
ಉಳಿದಂತೆ ಚನ್ನಪಟ್ಟಣ ನಗರಸಭೆ ಮತ್ತು ವಿಜಯಪುರ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ ಪಡೆದರೆ ಬಿಜೆಪಿ ಕೇವಲ ಮಡಿಕೇರಿ ನಗರಸಭೆಗೆ ಮಾತ್ರ ಸೀಮಿತವಾಗಿದೆ.
ಫಲಿತಾಂಶದ ಪೂರ್ಣ ವಿವರ ಹೀಗಿದೆ —
- ಬಳ್ಳಾರಿ ಮಹಾನಗರ ಪಾಲಿಕೆ – ಕಾಂಗ್ರೆಸ್
- ಒಟ್ಟು ಸ್ಥಾನಗಳು 39: ಕಾಂಗ್ರೆಸ್-21, ಬಿಜೆಪಿ-13, ಜೆಡಿಎಸ್-00, ಪಕ್ಷೇತರ-05
- # ಬೀದರ್ ನಗರಸಭೆ – ಕಾಂಗ್ರೆಸ್ —
- ಒಟ್ಟು ಸ್ಥಾನಗಳು 35: ಕಾಂಗ್ರೆಸ್-15, ಬಿಜೆಪಿ-08, ಜೆಡಿಎಸ್-07 ಪಕ್ಷೇತರ-05
- # ರಾಮನಗರ ನಗರಸಭೆ – ಕಾಂಗ್ರೆಸ್ —
- ಒಟ್ಟು ಸ್ಥಾನಗಳು 31: ಕಾಂಗ್ರೆಸ್-19, ಬಿಜೆಪಿ-00, ಜೆಡಿಎಸ್-11, ಪಕ್ಷೇತರ-01
- ಭದ್ರಾವತಿ ನಗರಸಭೆ – ಕಾಂಗ್ರೆಸ್
- ಒಟ್ಟು ಸ್ಥಾನಗಳು 35: ಕಾಂಗ್ರೆಸ್-18, ಬಿಜೆಪಿ-04, ಜೆಡಿಎಸ್-11, ಪಕ್ಷೇತರ-01
- # ಚನ್ನಪಟ್ಟಣ ನಗರಸಭೆ – ಜೆಡಿಎಸ್
- ಒಟ್ಟು ಸ್ಥಾನಗಳು 31: ಕಾಂಗ್ರೆಸ್-07, ಬಿಜೆಪಿ-07, ಜೆಡಿಎಸ್-16, ಪಕ್ಷೇತರ-01
- #ಮಡಿಕೇರಿ ನಗರಸಭೆ – ಬಿಜೆಪಿ
- ಒಟ್ಟು ಸ್ಥಾನಗಳು 23: ಕಾಂಗ್ರೆಸ್-01, ಬಿಜೆಪಿ-16, ಜೆಡಿಎಸ್-01, ಎಸ್‌ಡಿಪಿಐ-05 ಪಕ್ಷೇತರ-00
- # ಬೇಲೂರು ಪುರಸಭೆ – ಕಾಂಗ್ರೆಸ್
- ಒಟ್ಟು ಸ್ಥಾನಗಳು 23: ಕಾಂಗ್ರೆಸ್-17, ಬಿಜೆಪಿ-01, ಜೆಡಿಎಸ್-05, ಪಕ್ಷೇತರ-00
- # ವಿಜಯಪುರ ಪುರಸಭೆ – ಜೆಡಿಎಸ್
- ಒಟ್ಟು ಸ್ಥಾನಗಳು 23: ಕಾಂಗ್ರೆಸ್-06, ಬಿಜೆಪಿ-01, ಜೆಡಿಎಸ್-14, ಪಕ್ಷೇತರ-02
- # ಗುಡಿಬಂಡೆ ಪಟ್ಟಣ ಪಂಚಾಯಿತಿ – ಕಾಂಗ್ರೆಸ್
- ಒಟ್ಟು ಸ್ಥಾನಗಳು 11: ಕಾಂಗ್ರೆಸ್-06, ಬಿಜೆಪಿ-00, ಜೆಡಿಎಸ್-02, ಪಕ್ಷೇತರ-03
- # ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ – ಕಾಂಗ್ರೆಸ್
- ಒಟ್ಟು ಸ್ಥಾನಗಳು 15: ಕಾಂಗ್ರೆಸ್-09, ಬಿಜೆಪಿ-06, ಜೆಡಿಎಸ್-00, ಪಕ್ಷೇತರ-00
ಒಟ್ಟು 266 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಪಕ್ಷವು 119 ಸ್ಥಾನಗಳಲ್ಲಿ ಜಯಗಳಿಸಿದ್ದು ಒಟ್ಟು 44.73% ಮತಗಳನ್ನು ಪಡೆದಿದೆ. ಜೆಡಿಎಸ್ 67 ಸ್ಥಾನಗಳಲ್ಲಿ ಜಯಿಸಿದ್ದು, 25.18% ಮತಗಳನ್ನು ಪಡೆದಿದೆ. ಹಾಗೆಯೇ ಬಿಜೆಪಿ 56 ಸ್ಥಾನಗಳಲ್ಲಿ ಜಯಗಳಿಸಿದ್ದು, 21.05% ರಷ್ಟು ಮತಗಳನ್ನು ಪಡೆದಿದೆ..!