ಅಧಿಕಾರ ಮತ್ತು ಪ್ರಶಸ್ತ್ತಿಗಳು ವ್ಯಕ್ತಿಯ ಜವಾಬ್ದಾರಿ ಹೆಚ್ಚಿಸುತ್ತವೆ: ಮದ್ರಿಕಿ

0
16

ಶಹಾಬಾದ: ವ್ಯಕ್ತಿಗೆ ದೊರೆಯುವ ಅಧಿಕಾರ ಮತ್ತು ಪ್ರಶಸ್ತ್ತಿಗಳು ಆತನ ಜವಾಬ್ದಾರಿ ಹೆಚ್ಚಿಸುತ್ತವೆ ಎಂದುಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಕಲಬುರಗಿ ಜಿಲ್ಲಾ ಅಧ್ಯಕ್ಷ ಬಸವರಾಜ ಮದ್ರಿಕಿ ಹೇಳಿದರು.

ಅವರು ಹೊನ್ನಕಿರಣಗಿ ಗ್ರಾಮದಲ್ಲಿ ಕನ್ನಡ ಸಾಹಿತ್ಯ ಪರಿ?ತ ಕಲಬುರಗಿ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾದ ಗುರುಬಸಪ್ಪ ಸಜ್ಜನಶೆಟ್ಟಿ ಹಾಗೂ ಸಂತಕವಿ ಶಿಶುನಾಳ ?ರೀಫ್ ಪ್ರಶಸ್ತಿ ಪುರಸ್ಕೃತ ದೇವು ಸಜ್ಜನ ಅವರಿಗೆ ತೋನಸನಹಳ್ಳಿ(ಎಸ್) ಗ್ರಾಮದ ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

Contact Your\'s Advertisement; 9902492681

ಪ್ರಶಸ್ತಿಗಳು ಕರ್ತವ್ಯದಲ್ಲಿರುವ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಸುತ್ತವೆ. ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ ಪ್ರಶಸ್ತಿಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಎನ್ನುವುದಕ್ಕೆ ದೇವು ಸಜ್ಜನ್ ಅವರೇ ಸಾಕ್ಷಿ.ಅಲ್ಲದೇ ಕನ್ನಡ ಪರವಾದ ಸೇವೆ ಮಾಡುವ ಮೂಲಕ ಜಿಲ್ಲೆಯಲ್ಲಿ ಹೆಸರುವಾಸಿಯಾದ ಗುರುಬಸಪ್ಪ ಸಜ್ಜನಶೆಟ್ಟಿ ಕಸಾಪ ಕಲಬುರಗಿ ತಾಲೂಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.ಅವರ ಅಧಿಕಾರದ ಅವಧಿಯಲ್ಲಿ ಇನ್ನೂ ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಿಲ್ಲೆಯ ತುಂಬೆಲ್ಲಾ ಕನ್ನಡದ ವಾತಾವರಣವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕೆಂದು ಹೇಳಿದರು.

ಕನ್ನಡ ಕಟ್ಟುವ ಕೆಲಸಕ್ಕಾಗಿ ಇದೊಂದು ಸದಾವಕಾಶ ನನಗೆ ಒಲಿದು ಬಂದಿದೆ.ಕನ್ನಡಪರ ಮನಸ್ಸುಗಳು ನನಗೆ ಆಯ್ಕೆ ಮಾಡಿ ಹೆಚ್ಚಿನ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ.ಅದನ್ನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ಮೂಲಕ ಕನ್ನಡ ಕಟ್ಟುವ ಕೆಲಸಕ್ಕೆ ಮುಂಗಾಗುತ್ತೆನೆ ಎಂದು ಹೇಳಿದರು.

ತೋನಸನಹಳ್ಳಿ ಗ್ರಾಮ ಪಂಚಾಯತ ಸದಸ್ಯ ಬೆಳ್ಳೆಪ್ಪಾ ಖಣದಾಳ, ಸಿದ್ದು ಸಜ್ಜನ, ಹನಮಂತ ಸಾಲಿ, ಶಿವು ಮಾಲಕ ತರ್ನಳ್ಳಿ, ಶರಣು ಭಂಡಾರಿ, ಅಂಬರೀಶ್ ಕಲಬುರಗಿ, ಶಿವು ನಾಟಿಕಾರ, ಪಿಂಟುಗೌಡ ಸರಡಗಿ, ನಾಗು ಸಜ್ಜನಶೆಟ್ಟಿ ಹಾಗು ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here