ಕಲಬುರಗಿ: ನಗರದ ಬ್ರಹ್ಮಪೂರದ ಚೌದಾಪೂರಿ ಹಿರೇಮಠದಲ್ಲಿ ಬುಧವಾರ ಬೆಳಿಗ್ಗೆ ಪ್ರತಿ ವರ್ಷದಂತೆ ಈ ವರ್ಷವೂ ಸಂಸ್ಥೆಯ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮ ಜರುಗಿತು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ರಾಜು (ಹನುಮಂತ್) ಲೆಂಗಟಿ ಅವರು ದಿನದರ್ಶಿಕೆ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಾನಿಧ್ಯವನ್ನು ರಾಜಶೇಖರ್ ಶಿವಾಚಾರ್ಯರು ವಹಿಸಿದ್ದರು. ಉದ್ಯಮಿ ಸುಭಾಷ್ ದೇವರಗುಡಿ, ಬಿಜೆಪಿ ಮುಖಂಡರಾದ ಅಪ್ಪು ಕಣಕಿ, ರಾಮು ರೆಡ್ಡಿ, ಸಂಸ್ಥೆಯ ಸಿಬ್ಬಂದಿಗಳಾದ ಶರಣಗೌಡ ಪಾಟೀಲ್, ಬಸವರಾಜ್ ಅಟ್ಟೂರ್, ಬಸವರಾಜ್ ಗಟಾಟೆ, ಆನಂದ್ ಸ್ವಾಮಿ, ಸಿದ್ಧರಾಮಪ್ಪ ಗಟಾಟೆ, ಶರಣು ಕಲಕೇರಿ ಮುಂತಾದವರು ಉಪಸ್ಥಿತರಿದ್ದರು.