ತಿಂಥಣಿ ಗ್ರಾಮ ಪಂಚಾಯತಿ ಅವ್ಯವಹಾರ ತನಿಖೆಗೆ ಕೆಎಸ್‌ಡಿಎಸ್‌ಎಸ್ ಮನವಿ

0
15

ಸುರಪುರ: ತಾಲೂಕಿನ ತಿಂಥಣಿ ಗ್ರಾಮ ಪಂಚಾಯತಿಯಲ್ಲಿ ೧೫ನೇ ಹಣಕಾಸು ಯೋಜನೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಸಲಾಗಿದೆ ಇದನ್ನು ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಿ.ಜಿ ಸಾಗರ ಬಣದ ಮುಖಂಡರು ಆರೋಪಿಸಿ ಜಿಲ್ಲಾ ಪಂಚಾಯತಿ ಸಿಇಒ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಂಗಳವಾರ ಸಿಇಒ ಅವರನ್ನು ಭೇಟಿ ಮಾಡಿದ ಮುಖಂಡರು ಮಾತನಾಡಿ, ೨೦೨೦-೨೧ ಮತ್ತು ೨೦೨೧-೨೨ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿಯಲ್ಲಿ ಮಂಜೂರಾದ ಕಾಮಗಾರಿಗಳು ಯಾವುದೇ ಗ್ರಾಮದಲ್ಲಿ ಕ್ರೀಯಾ ಯೋಜನೆ ಪ್ರಕಾರ ಕಾಮಗಾರಿ ಕೈಗೊಂಡಿಲ್ಲ,ಕಾಟಾಚಾರಕ್ಕೆ ಕ್ರೀಯಾ ಯೋಜನೆ ತಯಾರಿಸಿದ್ದಾರೆ.ಅಲ್ಲದೆ ಉದ್ಯೋಗ ಖಾತ್ರಿ ಮತ್ತು ೧೫ನೇ ಹಣಕಾಸು ಯೋಜನೆಯಡಿ ಕಾಮಗಾರಿ ಸಂದರ್ಭದಲ್ಲಿ ಯಾವುದೇ ಗ್ರಾಮ ಪಂಚಾಯತಿ ಸದಸ್ಯರುಗಳಿಲ್ಲದ ಕಾರಣ ಅಂದು ನೇಮಕಗೊಂಡಿದ್ದ ಆಡಳಿತಾಧಿಕಾರಿಗಳು ಹಾಗು ಪಿಡಿಒ ಮತ್ತು ಜೆಇ ಎಲ್ಲರು ಸೇರಿ ಅವ್ಯವಹಾರ ನಡೆಸಿದ್ದು ಇದರ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ಮನವಿಯನ್ನು ಸ್ವೀಕರಿಸಿದ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿಲ್ಪಾ ಶರ್ಮಾ ಅವರು ನಿಮ್ಮ ಮನವಿಯನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಮನವಿಯನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ,ತಾಲೂಕು ಸಂಚಾಲಕ ವೀರಭದ್ರಪ್ಪ ದೊಡ್ಡಮನಿ ಮುಖಂಡರಾದ ತಿಪ್ಪಣ್ಣ ಶೆಳ್ಳಗಿ,ಚನ್ನಬಸಪ್ಪ ತಳವಾರ,ಶೇಖರ ಮಂಗಳೂರು,ಮರಿಲಿಂಗ ಗುಡಿಮನಿ,ಮೌನೇಶ ತಳವಾರ,ಪಾರಪ್ಪ ತಳವಾರ,ಎಮ್.ಪಟೇಲ್,ಖಾಜಾ ಅಜ್ಮೀರ್,ವೆಂಕಟೇಶ ದೇವಾಪುರ,ಮಾನಪ್ಪ ಶೆಳ್ಳಗಿ,ಮಹಾದೇವ ಚಲುವಾದಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here