ಭಾಲ್ಕಿ: ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿಕ್ರಾಂತಿಜ್ಯೋತಿ ಸಾವಿತ್ರಿಬಾಯಿ ಫುಲೆಯವರ ಜಯಂತಿಯನ್ನು ಆಚರಿಸಲಾಯಿತು.
ಸಮಾರಂಭದ ದಿವ್ಯ ಸಾನಿಧ್ಯ ವಹಿಸಿರುವ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ೧೨ನೇ ಶತಮಾನದ ಬಸವಾದಿ ಶರಣರ ಶೈಕ್ಷಣಿಕಕ್ರಾಂತಿಯ ಪರಂಪರೆಯನ್ನುಆಧುನಿಕ ಭಾರತದಲ್ಲಿ ಫುಲೆ ದಂಪತಿಗಳು ಮುಂದುವರೆಸಿದರು. ಸಾವಿತ್ರಿಬಾಯಿ ಫುಲೆಯವರು ಮಹಿಳಾ ಶಿಕ್ಷಣಕ್ಕಾಗಿ ಮಾಡಿರುವ ಸೇವೆಯನ್ನು ಸ್ಮರಿಸಿದರು.
ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ದಂಪತಿಗಳು ಮಹಿಳೆಯರ ಶಿಕ್ಷಣಕ್ಕಾಗಿ ಮಾಡಿರುವ ಹೋರಾಟ ರೋಮಾಂಚನಕಾರಿಯಾಗಿದೆ. ಫುಲೆ ದಂಪತಿಗಳಿಗೆ ಮನೆಯಿಂದ ಹೊರಹಾಕಿದ ನಂತರಅವರಿಗೆಆಶ್ರಯ ನೀಡಿದವರು ಫಾತಿಮಾ ಶೇಕ್‌ಅವರು. ಸಾವಿತ್ರಿಬಾಯಿ ಫುಲೆಯವರಜೋತೆ ಮಹಿಳಾ ಶಿಕ್ಷಣಕ್ಕಾಗಿ ಫಾತಿಮಾ ಶೇಕ್‌ಅವರಕೋಡುಗೆಯೂಅಪಾರವಾಗಿದೆ. ಸಾವಿತ್ರಿಬಾಯಿ ಫುಲೆ ದಂಪತಿಗಳು ಅನೇಕ ಅಡೆತಡೆಗಳನ್ನು ಅನುಭವಿಸಿದರು.
ಅಂದಿನ ಕಾಲದಉನ್ನತ ವರ್ಣದ ಸಮಾಜ ವ್ಯೆವಸ್ಥೆಅವರ ಮೇಲೆ ಕಲ್ಲುಎಸೆದರು, ಸಗಣಿಎಸೆದರುಆದರುಅವರುತಮ್ಮಗುರಿಯನ್ನು ಬಿಡಲಿಲ್ಲ. ಅಷ್ಟೇ ಅಲ್ಲದೆ ವಿಧವೆಯರಿಗೆಆಶ್ರಯ ನೀಡಿದರು. ಸಾವಿತ್ರಿಬಾಯಿ ಫುಲೆಯವರುಆಧುನಿಕ ಭಾರತದ ಮೋದಲ ಶಿಕ್ಷಕಿ ಅಲ್ಲದೆಅವರುಒಬ್ಬ ಶ್ರೇಷ್ಠ ಕವಿಯತ್ರಿ, ಲೇಖಕಿ, ಸಂಪಾದಕಿ, ಶಾಲೆಯ ವ್ಯೆವಸ್ಥಾಪಕಿ ಹಾಗೂ ಸಮಾಜ ಸುಧಾರಕಿಯಾಗಿ ಸಲ್ಲಿಸಿರುವ ಸೇವೆ ಅಪಾರವಾಗಿದೆಎಂದು ನುಡಿದರು.
ಸಮಾರಂಭದಲ್ಲಿ ಶೃತಿ ಲಗಾರೆ ಹಾಗೂ ಗಾಯತ್ರಿ ಮಾಲಗಾರಇವರು ಸಾವಿತ್ರಿಬಾಯಿ ಫುಲೆಜೀವನ ಸಾಧನೆಕುರಿತು ಮಾತನಾಡಿದರು. ಸುಜ್ಞಾನಿ ಹಾಗೂ ಪಂಡಿತ ನಾಗರಾಳೆ ಅವರು ಪುಷ್ಪನಮನ ಸಲ್ಲಿಸಿದರು. ಶ್ರೀಮಠದ ವಿದ್ಯಾರ್ಥಿಯಾದ ಸುಮೀತ ವಚನ ಗಾಯನ ಮಾಡಿದರು. ನಿರುಪಣೆಯನ್ನುರಾಜುಜುಬರೆ ಮಾಡಿದರು.